ಶಿರಸಿಯಲ್ಲಿ ಸಂಸದ ಅನಂತ ಕುಮಾರ್‌ ಹೆಗಡೆ ಮತದಾನ : ಸಕ್ರಿಯ ರಾಜಕಾರಣದಿಂದ ಅಂತರವೇಕೆ?

By Sathish Kumar KH  |  First Published May 10, 2023, 4:20 PM IST

ವಿಧಾನಸಭಾ ಚುನಾವಣೆಯಿಂದ ಹೊರಗುಳಿದಿದ್ದ ಸಂಸದ ಅನಂತ ಕುಮಾರ್‌ ಹೆಗಡೆ ಬುಧವಾರ ಕುಟುಂಬ ಸಮೇತ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. 


ಉತ್ತರ ಕನ್ನಡ (ಮೇ 10): ರಾಜ್ಯ ವಿಧಾನಸಭಾ ಚುನಾವಣೆಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದ ಸಂಸದ ಅನಂತ ಕುಮಾರ್‌ ಹೆಗಡೆ ಬುಧವಾರ ನಡೆದ ಮತದಾನ ದಿನದ ವೇಳೆ ಕುಟುಂಬ ಸಮೇತ ಮತಗಟ್ಟೆಗೆ ಬಂದು ಮತದಾನ ಮಾಡಿ ಹೋಗಿದ್ದಾರೆ. 

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಿಂದ ಹಾಗೂ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಸಂಸದ ಅನಂತ ಕುಮಾರ್‌ ಹೆಗಡೆ ಅವರು ಬುಧವಾರ (ಮೇ 10) ಮತದಾನದ ಹಿನ್ನೆಲೆಯಲ್ಲಿ ಶಿರಸಿಯ ಭೂಮಾ ಪ್ರೌಢ ಶಾಲೆ ಮತಗಟ್ಠೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ಕಳೆದ ಬಾರಿಯ ವಿಧಾನಸಭಾ ಚುನಾವನೆ ವೇಳ ಹಾಗೂ ಲೋಕಸಭಾ ಚುನಾವಣೆ ವೇಳೆ ರಾಜ್ಯಾದ್ಯಂತ ಸುತ್ತಾಡಿ ಭರ್ಜರಿ ಪ್ರಚಾರ ಮಾಡಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರು ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿಯೂ ಶ್ರಮವಹಿಸಿದ್ದರು. ಆದರೆ, ಈ ಬಾರಿ ಚುನಾವಣಾ ಪ್ರಚಾರದಿಂದ ದೂರ ಉಳಿದು ಈಗ ಮತದಾನಕ್ಕೆ ಮಾತ್ರ ಬಂದಿದ್ದಾರೆ.

Latest Videos

undefined

Karnataka Elections 2023 LIVE: ಮತದಾನ ಮುಕ್ತಾಯ. ಸರ್ಕಾರ ಯಾರದ್ದು, ಕಾಯಬೇಕು 13ರ ತನಕ...

ಲೋಕಸಭೆಯಲ್ಲೂ ಸ್ಪರ್ಧೆ ಬಗ್ಗೆ ಅನುಮಾನ: ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಮತ್ತೆ ಮರಳಿ ಅಧಿಕಾರವನ್ನ ಪಡೆಯಲು ಸಜ್ಜಾಗಿದ್ದು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಲವು ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಸೇರಿದಂತೆ ಎಲ್ಲರೂ ಬಂದು ರಾಜ್ಯದಲ್ಲಿ ಭರ್ಜರಿ ಪ್ರಚಾ, ರ್ಯಾಲಿ ಹಾಗೂ ಸಮಾವೇಶಗಳನ್ನು ಮಾಡಿದ್ದಾರೆ. ಆದರೆ, ಸಂಸದ ಅನಂತ ಕುಮಾರ ಹೆಗಡೆ ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಇನ್ನು ಬಿಜೆಪಿ ಹೈಕಮಾಂಡ್‌ನೊಂದಿಗೆ ಸ್ವಲ್ಪ ಅಂತರವನ್ನೂ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ, ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದಿಂದ ದೂರ ಉಳಿದಿರುವ ಅನಂತ್‌ಕುಮಾರ್ ಹೆಗಡೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದ್ದು, ಅವರೇ ಬಹಿರಂಗಪಡಿಸಬೇಕಿದೆ. 

ರಾಜ್ಯದಲ್ಲಿ ಚುನಾವಣೆ ಘೋಷಣೆ ಬಳಿಕ ರಾಜ್ಯಕ್ಕೆ ಹಲವು ಬಾರೀ ರಾಜ್ಯದಲ್ಲಿ ಅಬ್ಬರದ ಪ್ರಚಾರವನ್ನ ನಡೆಸಿರವ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಭೇಟಿ ನೀಡಿದ್ದು, ಜಿಲ್ಲೆಯ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದರೂ ಸಮಾವೇಶಕ್ಕೆ ಆಗಮಿಸದೇ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇನ್ನು ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಈವರೆಗೂ ಅನಂತಕುಮಾರ ಹೆಗಡೆ ಅವರು ತಮ್ಮ ಪಕ್ಷದ ಅಭ್ಯರ್ಥಿ ಪರ ಅನಂತ್‌ಕುಮಾರ್ ಪ್ರಚಾರಕ್ಕೆ ಆಗಮಿಸಿರಲಿಲ್ಲ. 

ಚುನಾವಣಾ ಮತಯಂತ್ರಗಳು, ಕಾರು ಒಡೆದು ಹಾಕಿದ ಗ್ರಾಮಸ್ಥರು: ಬಸವನ ಬಾಗೇವಾಡಿಯ 23 ಜನರ ಬಂಧನ

ಹೈಕಮಾಂಡ್‌ನಿಂದ ಅಂತರ ಕಾಯ್ದುಕೊಂಡ ಸಂಸದ: ಹಲವು ತಿಂಗಳುಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಇರುವ ಅನಂತ್‌ಕುಮಾರ್ ಹೆಗಡೆ ಅವರ ಅನಾರೋಗ್ಯ ಹಿನ್ನಲೆಯಲ್ಲಿ ಆಗಮಿಸಿಲ್ಲ ಎಂದರೆ, ಇನ್ನು ಕೆಲವರು ಅವರ ವಿದೇಶಕ್ಕೆ ತೆರಳಿದ ಹಿನ್ನಲೆಯಲ್ಲಿ ಆಗಮಿಸಿಲ್ಲ ಎಂದಿದ್ದರು. ಬಿಜೆಪಿ ಹೈಕಮಾಂಡ್‌ ನಾಯಕರ ಮೇಲೆ ಹಾಗೂ ಪಕ್ಷದ ಮೇಲೆ ಮುನಿಸಿಕೊಂಡೇ ಅನಂತ್‌ಕುಮಾರ್ ಆಗಮಿಸದೇ ಸುಮ್ಮನಾಗಿದ್ದಾರೆ ಎನ್ನುವ ಚರ್ಚೆಗಳು ಕೂಡ ನಡೆಯುತ್ತಿವೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಓಡಾಟ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅನಂತ್‌ಕುಮಾರ್ ಹೆಗಡೆ ಸಹಕಾರಿಯಾಗಿದ್ದರು. ಆದದೆ, ಈ ಬಾರಿ ಯಾರೊಬ್ಬರ ಪರವೂ ಅನಂತ್‌ಕುಮಾರ್ ಪ್ರಚಾರ ನಡೆಸಿಲ್ಲ. 

click me!