ನನ್ನದು ಜಾತಿ ರಾಜಕಾರಣವಿಲ್ಲ. ನೀತಿ ರಾಜಕಾರಣ. ಬಡವರ, ಕಷ್ಟದಲ್ಲಿದ್ದವರ ಸಹಾಯಕ್ಕೆ ನಿಂತು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಯೋಜನೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟುಅಭಿವೃದ್ಧಿ ಆಗಿದೆ ಎಂದು ಬಿಜೆಪಿ ಅಭ್ಯರ್ಥಿ, ಸಚಿವ ಶಿವರಾಮ ಹೆಬ್ಬಾರ್‌ಪ್ರಶ್ನಿಸಿದರು.
ಯಲ್ಲಾಪುರ (ಮೇ.5) : ನನ್ನದು ಜಾತಿ ರಾಜಕಾರಣವಿಲ್ಲ. ನೀತಿ ರಾಜಕಾರಣ. ಬಡವರ, ಕಷ್ಟದಲ್ಲಿದ್ದವರ ಸಹಾಯಕ್ಕೆ ನಿಂತು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಯೋಜನೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟುಅಭಿವೃದ್ಧಿ ಆಗಿದೆ. 10 ವರ್ಷದ ಹಿಂದೆ ಈ ಕ್ಷೇತ್ರವನ್ನು ಆಳಿದವರು ಏನು ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ, ಸಚಿವ ಶಿವರಾಮ ಹೆಬ್ಬಾರ್(Shivaram Hebbar) ಪ್ರಶ್ನಿಸಿದರು.
ತಾಲೂಕಿನ ಕಿರವತ್ತಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮತ ಯಾಚಿಸಿ ಅವರು ಮಾತನಾಡಿದರು.ಕಾಂಗ್ರೆಸ್ಸಿಗರಿಗೆ ಬೇರೆ ಯಾವ ವಿಚಾರದ ಕುರಿತು ಮಾತನಾಡಲು ವಿಷಯವೇ ಇಲ್ಲ. ಹಾಗಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಾ ಜನರಿಗೆ ತಪ್ಪು ಮಾಹಿತಿ ನೀಡುವ ಕಾರ್ಯದಲ್ಲಿದ್ದಾರೆ. ನನ್ನನ್ನು ಈ ಕ್ಷೇತ್ರದ, ಈ ಪ್ರದೇಶದ ಜನ 40 ವರ್ಷದಿಂದ ನೋಡಿದ್ದಾರೆ. ಹಾಗಾಗಿ ಯಾರ ಅಪಪ್ರಚಾರಕ್ಕೆ ಜನ ಬೆಲೆ ಕೊಡದೇ ಬಿಜೆಪಿಯನ್ನು ಬೆಂಬಲಿಸಿ 50 ಸಾವಿರಕ್ಕೂ ಅಧಿಕ ಅಂತರದಿಂದ ಗೆಲ್ಲಿಸುವ ವಿಶ್ವಾಸವಿದೆ. ಜಾತಿಯತೆ ಮಾಡುವುದರಿಂದ ಅಭಿವೃದ್ಧಿ ಆಗದು. ಇನ್ನು ಕೆಲವು ಪ್ರದೇಶಗಳ ಅಭಿವೃದ್ಧಿ ಆಗಬೇಕಿದೆ. ಕೊರೋನಾ ಸಮಯದಲ್ಲಿ 2 ವರ್ಷಗಳ ಕಾಲ ಸಾವಿರಾರು ಜನರ ಜೀವ ಉಳಿಸುವ ಸವಾಲು ಇತ್ತು. ಕಷ್ಟದಲ್ಲಿದ್ದ ಬಡವರಿಗೆ ಕಿಟ್ ನೀಡಿ ಬದುಕಿಗೆ ಸಹಾಯ ಮಾಡಿದ್ದೇನೆ ಎಂದರು
undefined
ಉತ್ತರಕನ್ನಡ: ಹೊನ್ನಾವರದಲ್ಲಿ ನಿವೇದಿತ್ ಪರವಾಗಿ ಡಿಕೆಶಿ ಭರ್ಜರಿ ಪ್ರಚಾರ.
ವಿಶೇಷವಾಗಿ ನೀರಾವರಿಗೆ ಆದ್ಯತೆ ನೀಡಿ, ಕ್ಷೇತ್ರದಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ಮಳೆಗಾಲದ ಬೇಡ್ತಿ ನೀರನ್ನು ಕೆರೆಗಳಿಗೆ ತರುವ ಮೂಲಕ ಕೃಷಿಗೆ ಅನುಕೂಲ ಮಾಡಿಕೊಡಲಾಗಿದೆ. ದೇಶ ಉಳಿಯಬೇಕಾದರೆ ರೈತ, ಕಾರ್ಮಿಕ ಹಾಗೂ ಸೈನಿಕ ಇದ್ದರೆ ಮಾತ್ರ ಸಾಧ್ಯ. ಅವರಿಗೆ ಮೊದಲ ಪ್ರಣಾಮ ಸಲ್ಲಿಸಬೇಕಾಗುತ್ತದೆ. ಹೀಗೆ ಈ ಪ್ರದೇಶದ ಎಲ್ಲ ಗೌಳಿವಾಡಾಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದೇನೆ. ಅಲ್ಲದೇ, ನನ್ನ ಕ್ಷೇತ್ರದ ಜನರಿಗೆ ಕಾರ್ಯಾಲಯ ಮತ್ತು ಮೊಬೈಲ್ ಸಂಖ್ಯೆ ಸದಾ ತೆರೆದಿರುತ್ತದೆ. ಇದರಿಂದ ಸಾರ್ವಜನಿಕರ ಸಂಕಷ್ಟದ ಸಮಯದಲ್ಲಿ ಸಹಾಯ ಪಡೆಯಲು ಸಾಧ್ಯವಾಗುತ್ತದೆ. ನನ್ನ ಅವಧಿಯಲ್ಲಿ ಅರಣ್ಯ, ಪೊಲೀಸ್ ಸೇರಿದಂತೆ ಯಾವುದೇ ಇಲಾಖೆಯಿಂದ ಜನರಿಗೆ ತೊಂದರೆಯಾಗಿಲ್ಲ. ಮುಂದೆಯೂ ತೊಂದರೆ ಆಗಲು ನಾನು ಬಿಡುವುದಿಲ್ಲ. ಹೀಗಾಗಿ ಮೇ 10ರಂದು ಚುನಾವಣೆ ನಡೆಯಲಿದ್ದು, ಕಮಲದ ಚಿಹ್ನೆಗೆ ಮತ ನೀಡಿ ಅಧಿಕ ಬಹುಮತ ದೊರೆಯಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಿರವತ್ತಿ ಬೂತ್ ಅಧ್ಯಕ್ಷ ರಾಜು ಉಪ್ಪಿನ್, ಬಿಜೆಪಿ ಪ್ರಮುಖರಾದ ಮಾಕು ಕೊಕ್ಕರೆ, ಎಂ.ಬಿ. ಗೌಡ ಮಾತನಾಡಿದರು.
ಕಾರವಾರ: ಬಿಜೆಪಿ ಶಾಸಕಿ ರೂಪಾಲಿ ಮಣಿಸಲು ಒಂದಾದ ರಾಜಕೀಯ ಬದ್ಧ ವೈರಿಗಳು..!
ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯ ಮಿರಾಶಿ, ರಹಮತ್ ಅಬ್ಬಿಗೇರಿ, ಮುರಳಿ ಹೆಗಡೆ, ಶಿರೀಷ್ ಪ್ರಭು, ಜಬೀನಾ ಉಸ್ಮಾನ್, ರೇಣುಕಾ ಹೋಳಿ ಇತರರು ಉಪಸ್ಥಿತರಿದ್ದರು.