ಬೆಂಗಳೂರು (ಏ.19): ಜೆಡಿಎಸ್‌ನ 3ನೇ ಪಟ್ಟಿ ಬಿಡುಗಡೆ ಆಗಿದ್ದು, ಒಟ್ಟು 59 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಶಿವಮೊಗ್ಗದಿಂದ ಬಿಜೆಪಿ ತೊರೆದಿರುವ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ಘಟಾನುಘಟಿಗಳ ಪಟ್ಟಿ ಇಲ್ಲಿದೆ ನೋಡಿ.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಪಕ್ಷಗಳಿಗಿಂತಲೂ ಮುಂಚೆಯೇ ಚುನಾವಣಾ ಪ್ರಚಾರ ಹಾಗೂ ಪಟ್ಟಿಯನ್ನು ಬಿಡಗಡೆ ಮಾಡಿದ್ದ ಜೆಡಿಎಸ್ ಈಗ ನಾಮಪತ್ರ ಸಲ್ಲಿಕೆಗೆ ಇನ್ನೊಂದಿ ದಿನ ಬಾಕಿ ಇರುವ ಅವಧಿಯಲ್ಲಿ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಪಟ್ಟಿಯಲ್ಲಿ ಒಟ್ಟು 59 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರ ಜೊತೆಗೆ, ಸಿಪಿಐಎಂನ 3, ಆರ್‌ಪಿಐನ 3 ಹಾಗೂ ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರಿಗೆ ಬಾಹ್ಯ ಬೆಂಬಲವನ್ನು ಘೋಷಣೆ ಮಾಡಲಾಗಿದೆ.
ಒಟ್ಟು 59 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ:
- ನಿಪ್ಪಾಣಿ- ರಾಜು ಮಾರುತಿ ಪವಾರ್
- ಚಿಕ್ಕೋಡಿ- ಸದಾಶಿವ ವಾಳಕೆ
- ಕಾಗವಾಡ- ಮಲ್ಲಪ್ಪ ಎಂ
- ಕುಕ್ಕೇರಿ - ಬಸವರಾಜ ಗೌಡ ಪಾಟೀಲ
- ಅರಭಾವಿ - ಪ್ರಕಾಶ ಕಾಶಶೆಟ್ಟಿ
- ಯಮಕನಮರಡಿ- ಮಾರುತಿ ಮಲ್ಲಪ್ಪ ಹಸ್ತಗಿ
- ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್
- ಬೆಳಗಾವಿ ದಕ್ಷಿಣ- ಶ್ರೀನಿವಾಸ ತೋಳಲ್ಕರ್
- ಬೆಳಗಾವಿ ಗ್ರಾಮಾಂತರ- ಶಂಕರಗೌಡ ರುದ್ರಗೌಡ ಪಾಟೀಲ
- ರಾಮದುರ್ಗ- ಪ್ರಕಾಶ್ ಮುಧೋಳ್
- ಮುಧೋಳ- ಧರ್ಮರಾಜ್ ವಿಠ್ಠಲ್ ದೊಡ್ಡಮನಿ
- ತೇರದಾಳ - ಸುರೇಶ್ ಅರ್ಜುನ್ ಮಡಿವಾಳರ್
- ಜಮಖಂಡಿ - ಯಾಕೂಬ್ ಬಾಬಾಲಾಲ್ ಕಪಡೇವಾಲ್
- ಬೀಳಗಿ- ರುಕ್ಮುದ್ದೀನ್ ಸೌದಗರ್
- ಬಾಗಲಕೋಟೆ- ದೇವರಾಜ್ ಪಾಟೀಲ್
- ಹುನಗುಂದ - ಶಿವಪ್ಪ ಮಹದೇವಪ್ಪ ಬೋಲಿ
- ವಿಜಯಪುರ ನಗರ - ಬಂದೇ ನವಾಜ್ ಮಾಬರಿ
- ಸುರಪುರ- ಶ್ರವಣಕುಮಾರ ನಾಯ್ಕ್
- ಗುಲ್ಬರ್ಗ ದಕ್ಷಿಣ- ಕೃಷ್ಣಾರೆಡ್ಡಿ
- ಔರಾದ್- ಜಯಸಿಂಗ್ ರಾಥೋಡ್
- ರಾಯಚೂರು ನಗರ - ವಿನಯ್ ಕುಮಾರ್ ಈ
- ಮಸ್ಲಿ - ರಾಘವೇಂದ್ರ ನಾಯಕ
- ಕನಕಗಿರಿ- ರಾಜಗೋಪಾಲ್
- ಯಲಬುರ್ಗ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
- ಕೊಪ್ಪಳ- ಚಂದ್ರಶೇಖರ್
- ಶಿರಹಟ್ಟಿ- ಹನುಮಂತಪ್ಪ ನಾಯಕ
- ಗದಗ - ವೆಂಕನಗೌಡ ಗೋವಿಂದಗೌಡರ
- ರೋಣ- ಮುಗದಮ್ ಸಾಬ್ ಮುದೋಳ
- ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್
- ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ
- ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್
- ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್
- ಹುಬ್ಬಳ್ಳಿ ಧಾರವಾಡ ಕೇಂದ್ರ - ಸಿದ್ದಲಿಂಗೇಶ್‌ಗೌಡ ಮಹಾಂತ ಒಡೆಯರ್
- ಹುಬ್ಬಳ್ಳಿ ಧಾರವಾಡ ಪಶ್ಚಿಮ- ಗುರುರಾಜ ಹುಣಸಿಮರದ
- ಕಲಘಟಗಿ- ವೀರಪ್ಪ ಬಸಪ್ಪ ಶೀಗೆಹಟ್ಟಿ
- ಹಾವೇರಿ- ತುಕಾರಾಮ್ ಮಾಳಗಿ
- ಬ್ಯಾಡಗಿ- ಸುನೀತಾ ಎಂ ಪೂಜಾರ್
- ಕೂಡ್ಲಿಗಿ - ಕೋಡಿಹಳ್ಳಿ ಭೀಮಪ್ಪ
- ಚಿತ್ರದುರ್ಗ- ರಘು ಆಚಾರ್
- ಹೊಳಲ್ಕೆರೆ- ಇಂದ್ರಜಿತ್ ನಾಯ್ಕ
- ಜಗಳೂರು- ದೇವರಾಜ
- ಶಿವಮೊಗ್ಗ ನಗರ- ಆಯನೂರು ಮಂಜುನಾಥ್
- ಸೊರಬ- ಬಾಸೂರು ಚಂದ್ರೇಗೌಡ
- ಸಾಗರ - ಜಾಕೀರ್
- ರಾಜರಾಜೇಶ್ವರಿ ನಗರ - ಡಾ. ನಾರಾಯಣಸ್ವಾಮಿ
- ಮಲ್ಲೇಶ್ವರಂ- ಉತ್ಕರ್ಷ್
- ಚಾಮರಾಜಪೇಟೆ- ಗೋವಿಂದರಾಜು
- ಚಿಕ್ಕಪೇಟೆ- ಇಮ್ರಾನ್‌ಪಾಷ
- ಪದ್ಮನಾಭನಗರ - ಬಿ. ಮಂಜುನಾಥ್
- ಬಿಟಿಎಂ ಲೇಔಟ್- ವೆಂಕಟೇಶ್
- ಜಯನಗರ - ಕಾಳೇಗೌಡ
- ಬೊಮ್ಮನಹಳ್ಳಿ- ನಾರಾಯಣರಾಜು
- ಅರಸೀಕೆರೆ - ಎನ್.ಆರ್. ಸಂತೋಷ್
- ಮೂಡಬಿದರೆ- ಅಮರಶ್ರೀ
- ಸುಳ್ಯ- ಪ್ರೊ. ವೆಂಕಟೇಶ್ ಹೆಚ್.ಎನ್
- ವಿರಾಜಪೇಟೆ- ಮನ್ಸೂರ್ ಅಲಿ
- ಚಾಮರಾಜ - ಹೆಚ್.ಕೆ. ರಮೇಶ್ (ರವಿ)
- ನರಸಿಂಹರಾಜ - ಅಬ್ದುಲ್ ಖಾದರ್ ಶಾಹಿದ್
- ಚಾಮರಾಜನಗರ - ಮಲ್ಲಿಕಾರ್ಜುನ ಸ್ವಾಮಿ
ಜೆಡಿಎಸ್‌ನಿಂದ ಬಾಹ್ಯ ಬೆಂಬಲ ಕೊಟ್ಟ ಕ್ಷೇತ್ರಗಳ ಅಭ್ಯರ್ಥಿಗಳು
ನಂಜನಗೂಡು - ದರ್ಶನ್ ಧ್ರುವನಾರಾಯಣ
ಗುಲ್ಬರ್ಗ ಗ್ರಾಮಾಂತರ - ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಬಾಗೇಪಲ್ಲಿ- ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಕೆಆರ್.ಪುರಂ- ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಸಿವಿ ರಾಮನ್‌ನಗರ - ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
ವಿಜಯನಗರ - ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
ಮಹದೇವಪುರ - ಆರ್‌ಪಿಐ ಅಭ್ಯರ್ಥಿಗೆ ಬೆಂಬಲ