ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ್ದು ಎನ್ನಲಾಗಿರುವ ಫೇಕ್ ಲಿಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್‌ನ 2ನೇ ಲಿಸ್ಟ್ ಎನ್ನಲಾಗಿರುವ ಪಟ್ಟಿಯಲ್ಲಿ 50 ಮಂದಿಗೆ ಟಿಕೆಟ್ ನೀಡಲಾಗಿದೆ/
ಬೆಂಗಳೂರು (ಏ.5): ವಿಧಾನಸಭೆ ಚುನಾವಣೆ ಎದುರಿಸಲು ಈಗಾಗಲೇ ಎಲ್ಲಾ ಪಕ್ಷಗಳನ್ನು ಸರ್ವರೀತಿಯಲ್ಲೂ ಸಜ್ಜಾಗಿದೆ. ವಿಧಾನಸಭೆ ಚುನಾವಣೆಗೆ 124 ಸದಸ್ಯರ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ರಿಲೀಸ್ ಮಾಡಿತ್ತು. ಆದರೆ, ಬುಧವಾರದ ವೇಳೆಗೆ ಕಾಂಗ್ರೆಸ್ ಪಕ್ಷದ 2ನೇ ಪಟ್ಟಿ ಎಂದು ನಕಲಿ ಲಿಸ್ಟ್ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷದ ನಕಲಿ 2ನೇ ಲಿಸ್ಟ್‌ನಲ್ಲಿ 50 ಮಂದಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಸಿದ್ಧರಾಮಯ್ಯ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಾದಾಮಿಗೆ ಈ ಬಾರಿ ದೇವರಾಜ್ ಪಾಟೀಲ್‌ಗೆ ಟಿಕೆಟ್ ನೀಡಲಾಗಿದ್ದರೆ, ಮಂಡ್ಯದಿಂದ ಆತ್ಮಾನಂದ ಹಾಗೂ ಮದ್ದೂರಿನಿಂದ ಉದಯ್‌ಗೌಡಗೆ ಟಿಕೆಟ್ ನೀಡಲಾಗಿದೆ ಎಂದು ಆ ಲಿಸ್ಟ್‌ನಲ್ಲಿ ತಿಳಿಸಲಾಗಿದೆ. ಭಾರೀ ಗುದ್ದಾಟಕ್ಕೆ ಕಾರಣವಾಗಿರುವ ಕುಮಟಾ ಕ್ಷೇತ್ರಕ್ಕೆ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಅವರ ಪುತ್ರಿ ನಿವೇದಿತಾ ಆಳ್ವಾಗೆ ಟಿಕೆಟ್ ನೀಡಲಾಗಿದೆ. ಇನ್ನು ಚಿಕ್ಕಮಗಳೂರು ಕ್ಷೇತ್ರಕ್ಕೆ ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ನಕಲಿ ಲಿಸ್ಟ್‌ನಲ್ಲಿ ಬರೆಯಲಾಗಿದೆ. ಎಐಸಿಸಿ ಪಾರ್ಲಿಮೆಂಟರಿ ಬೋರ್ಡ್ ಪ್ರಕಟ ಮಾಡಿರುವ ಲಿಸ್ಟ್ ಎಂದು ಇದನ್ನು ಹೇಳಲಾಗಿದ್ದು, ಸಿಇಸಿ ಪ್ರಧಾನ ಕಾರ್ಯದರ್ಶಿ ಮುಖುಲ್ ವಾಸ್ನಿಕ್ ಅವರ ಸಹಿ ಕೂಡ ಇದರಲ್ಲಿದೆ.
ಕಾಂಗ್ರೆಸ್ ಪಕ್ಷದ 2ನೇ ಲಿಸ್ಟ್‌ಗಾಗಿ ಕಳೆದ ಕೆಲವು ದಿನಗಳಿಂದ ಬೆನ್ನುಬೆನ್ನಿಗೆ ಸಭೆಗಳು ನಡೆಯುತ್ತಿವೆ. ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆಗಳೂ ವ್ಯಕ್ತವಾಗಿದೆ. ಅದರ ನಡುವೆ ಮೊದಲ ಪಟ್ಟಿಯಲ್ಲಿ ಸಿದ್ಧರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಇನ್ನು 2ನೇ ಕ್ಷೇತ್ರವಾಗಿ ಅವರು ಕೋಲಾರ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಇದಕ್ಕೆ ಅನುಮತಿ ನೀಡಲಿದೆಯೇ ಎನ್ನುವ ಕುತೂಹಲವೂ ಇದೆ.
ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ವೈರಲ್: ಕಾಂಗ್ರೆಸ್ ವಿರುದ್ಧ ಕಿಡಿ
ನಕಲಿ ಪಟ್ಟಿ ಎಂದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ 2ನೇ ಪಟ್ಟಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪಟ್ಟಿ ಫೇಕ್. ಸಿಇಸಿ ಬಳಿಕವೇ ಕಾಂಗ್ರೆಸ್‌ನ ಪಟ್ಟಿ ಹೊರಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನವದೆಹಲಿಯಲ್ಲಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಫೇಕ್ ಲಿಸ್ಟ್ ರಿಲೀಸ್: ಹೈಕಮಾಂಡ್‌ಗೆ ಪೀಕಲಾಟ- ಆಕಾಂಕ್ಷಿಗಳ ಹೊಡೆದಾಟ