Karnataka assembly election: ಭಟ್ಕಳದಲ್ಲಿ ಬಿಜೆಪಿ-ಕಾಂಗ್ರೆಸ್ ಮಾತಿನ ಚಕಮಕಿ: ಲಘು ಲಾಠಿ ಪ್ರಹಾರ!

By Ravi Janekal  |  First Published May 10, 2023, 11:12 PM IST

ತಾಲೂಕಿನ ಮುಠ್ಠಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.


ಭಟ್ಕಳ (ಮೇ.10) ತಾಲೂಕಿನ ಮುಠ್ಠಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

  ಮುಠ್ಠಳ್ಳಿ ಬೂತ್ ನಂ 190ರಲ್ಲಿ ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತ ಹಲ್ಲೆ ನಡೆಸಿದ್ದ. ಇದರಿಂದ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯರು(Congress candidate mankal vaidyaru) ಪರೀಶೀಲನೆ ನಡೆಸಲು ತೆರಳಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಬಿಜೆಪಿ ಕಾರ್ಯಕರ್ತರು(Bhatkal bjp workers) ಮೋದಿ ಮೋದಿ ಎಂದು ಜಯಘೋಷ  ಕೂಗಿದ್ದಾರೆ.

Tap to resize

Latest Videos

ಮತ್ತೆ ಮುನ್ನಲೆಗೆ ಬಂದ ಜಾರಕಿಹೊಳಿ ಸಿಡಿ ಪ್ರಕರಣ: ಡಿಕೆಶಿ ಬ್ಲಾಕ್‌ಮೇಲ್ ಮಾಡಿದ್ರೆ ಸಿಬಿಐಗೆ ವಹಿಸಲಿ - ಚನ್ನರಾಜ್ ಸವಾಲು!

ಇದನ್ನು ಕೇಳಿದ ಕಾಂಗ್ರೆಸ್ ಕಾರ್ಯಕರ್ತರು ಮಂಕಾಳ ವೈದ್ಯರಿಗೆ ಜೈಕಾರ ಹಾಕಿದ್ದಾರೆ. ಇದರಿಂದ ಸ್ಥಳದಲ್ಲಿ ಭಿಗುವಿನ ವಾತಾವರಣ ಏರ್ಪಟ್ಟಿತ್ತು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಜನರು ಮತ್ತಷ್ಟು ರೊಚಿಗೆದ್ದಿದ್ದಾರೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗಿದ್ದು ಸ್ಥಳಕ್ಕೆ ಡಿವೈಎಸ್‌ಪಿ ಶ್ರೀಕಾಂತ ಕೆ, ಸಿಪಿಐ ಗೋಪಿಕೃಷ್ಣ ಬಂದ ಜನರನ್ನು ಸಮಾಧಾನ ಪಡಿಸಿದ್ದಾರೆ. 

ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮುಠ್ಠಳ್ಳಿ ಪಂಚಾಯತ್ ವ್ಯಾಪ್ತಿಯ ಬೂತ್ ನಂ 192 ರಲ್ಲೂ  ಇಂತದ್ದೇ ಪ್ರಕರಣ ದಾಖಲಾಗಿತ್ತು. ಚುನಾವಣಾಧಿಕಾರಿಗಳಿಗೆ ದೂರು ತೆರಳಿದ ಬಳಿಕ ಎಸಿ ಮಮತಾದೇವಿ ಎಸ್ ಸ್ಥಳಕ್ಕೆ ತೆರಳಿದ್ದಾರೆ. ಪರೀಶೀಲನೆ ನಡೆಸಿ ಎಲ್ಲವೂ ಸರಿಯಿದೆ ಎಂದು ಖಚಿತಪಡಿಸಿಕೊಂಡು ಬಳಿಕ ತೆರಳಿದ್ದಾರೆ.

 ತಲಗೋಡ ಬೂತ‌್‌ನಲ್ಲೂ ಬಿಜೆಪಿ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು ಅಲ್ಲಿಯೂ ಪೊಲೀಸ್ ಬಂದೊಬಸ್ತ್ ಹೆಚ್ಚಿಸಲಾಗಿತ್ತು.

ನಕಲಿ ಮತದಾನ; ಅಧಿಕಾರಿಗಳಿಗೆ ದಿಗ್ಭಂಧನ

ನಕಲಿ ಮತದಾನ ನಡೆದ ಆರೋಪದ ಹಿನ್ನೆಲೆ ಮತದಾನ ಮುಗಿದರೂ ಮತಗಟ್ಟೆಯಲ್ಲೇ ಚುನಾವಣಾ ಸಿಬ್ಬಂದಿಯನ್ನು  ಗ್ರಾಮಸ್ಥರು ತಡೆಹಿಡಿದ ಘಟನೆ  ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಂತೆಗುಳಿ ಮತಗಟ್ಟೆ ಸಂಖ್ಯೆ 190 ರಲ್ಲಿ ನಡೆದಿದೆ.‌

ಮುರುಳಿಧರ್ ಹೆಗಡೆ(Murulidhar hegde voter) ಎಂಬವರ ಸೀರಿಯಲ್ ನಂಬರ್  ಬಳಸಿಕೊಂಡು ಬೇರೊಬ್ಬ ವ್ಯಕ್ತಿ ಮತದಾನ ಮಾಡಿದ್ದ ಆರೋಪ ವ್ಯಕ್ತವಾಗಿತ್ತು. ಮುರುಳಿಧರ್ ಎಂಬವರು ಮತದಾನಕ್ಕೆ ಬಂದ ವೇಳೆ ಬೇರೊಬ್ಬರು ಮತದಾನ ಮಾಡಿದ ಪ್ರಕರಣ ಬಯಲಿಗೆ ಬಂದಿತ್ತು. ಒಂದು ಓಟ್ ಲೆಸ್  ಮಾಡುವಂತೆ ಗ್ರಾಮಸ್ಥರಿಂದ ಚುನಾವಣಾ ಸಿಬ್ಬಂದಿಗೆ ಕೊಠಡಿಯಲ್ಲಿ ದಿಬ್ಭಂಧನ ಹಾಕಿದ್ದರು. 

ಕೊಡಗು: ಮತದಾರರು ಅರೆಸೇನಾಪಡೆ ಸಿಬ್ಬಂದಿ ನಡುವೆ ಘರ್ಷಣೆ-ಲಾಠಿ ಚಾರ್ಚ್

ಲೋಪದ ಅರಿವಾಗಿ ಟೆಂಡರ್ ಓಟ್ ಮಾಡಲು ಚುನಾವಣಾಧಿಕಾರಿ ಅವಕಾಶ ಮಾಡಿಕೊಟ್ಟರು. ಸೆಕ್ಷನ್ 17 ಸಿ ಅಂಡರ್ ನಲ್ಲಿ  ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.

click me!