2ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ

By Suvarna NewsFirst Published Dec 25, 2020, 10:39 PM IST
Highlights

ಈಗಾಗಲೇ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದೀಗ 2ನೇ ಹಂತ ಚುನಾವಣೆಗೆ ರೆಡಿಯಾಗಿದೆ.

ಬೆಂಗಳೂರು, (ಡಿ, 25): ರಾಜ್ಯದಲ್ಲಿ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣಾ ಕಾವು ತೀವ್ರಗೊಂಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಇದೇ 27ರ ಭಾನುವಾರ ಮತದಾನ ನಡೆಯಲಿದ್ದು, ಮತದಾನ ಅಂತ್ಯಕ್ಕೂ 48 ಗಂಟೆಗಳ ಮುನ್ನ ಅಂದರೆ ಇಂದು (ಶುಕ್ರವಾರ) ಸಂಜೆ ಪ್ರಚಾರ ಕೊನೆಗೊಂಡಿದೆ.

ಶುಕ್ರವಾರ ಬಹಿರಂಗ ಪ್ರಚಾರಕ್ಕೆ ಕಡೇ ದಿನವಾಗಿರುವ ಕಾರಣ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿ ಮತದಾರರನ್ನು ಸೆಳೆಯಲು ನಾನಾ ರೀತಿಯಲ್ಲಿ ಕಸರತ್ತು ನಡೆಸಿದರು.

ಕೊಟ್ಟಿದ್ದ ಒಂದು ಚಿಹ್ನೆ, ಬ್ಯಾಲೆಟ್ ಪೇಪರ್‌ನಲ್ಲಿ ಬೇರೊಂದು ಚಿಹ್ನೆ: ಅಭ್ಯರ್ಥಿ ಶಾಕ್..!

ರಾಜ್ಯದ 109 ತಾಲ್ಲೂಕುಗಳ 2709 ಗ್ರಾಮಪಂಚಾಯತ್ ಗಳಿಗೆ ಮತದಾನ ನಡೆಯಲಿದೆ. ಒಟ್ಟು 43,291 ಸ್ಥಾನಗಳ ಪೈಕಿ 39,378 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಕಣದಲ್ಲಿ 1,05,431 ಅಭ್ಯರ್ಥಿಗಳಿದ್ದಾರೆ. 

ಇನ್ನು 3697 ಅಭ್ಯರ್ಥಿಗಳು ಇದಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 27ರ ಭಾನುವಾರ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.

click me!