Kapu Election Results 2023: ಇದು ದೇವ ದುರ್ಲಭ ಕಾರ್ಯಕರ್ತರ ಗೆಲುವು: ಸುರೇಶ್ ಶೆಟ್ಟಿ ಗುರ್ಮೆ

By Govindaraj S  |  First Published May 14, 2023, 2:53 PM IST

ಪಕ್ಷ ನನಗೆ ಅಭ್ಯರ್ಥಿಯಾಗಲು ಅವಕಾಶ ಮಾಡಿಕೊಟ್ಟಿದೆ. ಇದು ನನ್ನ ಒಬ್ಬನ ಗೆಲುವು ಅಲ್ಲ ಕಾಪುವಿನ ಒಬ್ಬೊಬ್ಬ ದೇವ ದುರ್ಲಭ ಕಾರ್ಯಕರ್ತರ ಗೆಲುವು. ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ರಾತ್ರಿ ಹಗಲು ಕೆಲಸ ಮಾಡಿದ್ದಾರೆ. 


ಉಡುಪಿ (ಮೇ.14): ಪಕ್ಷ ನನಗೆ ಅಭ್ಯರ್ಥಿಯಾಗಲು ಅವಕಾಶ ಮಾಡಿಕೊಟ್ಟಿದೆ. ಇದು ನನ್ನ ಒಬ್ಬನ ಗೆಲುವು ಅಲ್ಲ ಕಾಪುವಿನ ಒಬ್ಬೊಬ್ಬ ದೇವ ದುರ್ಲಭ ಕಾರ್ಯಕರ್ತರ ಗೆಲುವು. ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ಪಕ್ಷದ ಸಿದ್ಧಾಂತ ಮತ್ತು ರಾಷ್ಟ್ರೀಯತೆಯನ್ನ ಜನಮಾನಸಕ್ಕೆ ಮುಟ್ಟಿಸಿದ್ದಾರೆ ಎಂದು ಕಾಪು ಕ್ಷೇತ್ರದ ನೂತನ ಬಿಜೆಪಿ ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದ್ದಾರೆ. ಕಾಪು ಕ್ಷೇತ್ರದ ಮತದಾರರು ನನ್ನ ಮೇಲೆ ಇಟ್ಟ ಪ್ರೀತಿಯಿಂದ ನನಗೆ ಗೆಲುವಾಗಿದೆ. ದೂರದ ಊರುಗಳಿಂದ ದೂರದ ದೇಶದಿಂದ ದೂರದ ರಾಜ್ಯಗಳಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ನನಗೆ ಒಂದು ಮತ ನೀಡಲು ಜನ ಬಂದಿದ್ದಾರೆ. ನಾನು ಅವರಿಗೆ ಚಿರ ಋಣಿಯಾಗಿರುತ್ತೇನೆ.

ಜನ ಮುಂಬೈ ಪುನಾ ಬೆಂಗಳೂರು ವಿದೇಶಗಳಿಂದ ಹುಬ್ಬಳ್ಳಿ ಧಾರವಾಡ ಬಳ್ಳಾರಿಯಿಂದ ಅಂಚೆ ಮತಗಳನ್ನು ಹಾಕಿ ನನ್ನ ಗೆಲುವಿಗೆ ಕಾರಣರಾಗಿದ್ದಾರೆ. ಆ ಮೂಲಕವೂ ನನಗೆ ವಿಶ್ವಾಸ ತುಂಬಿದ್ದಾರೆ. ಕಾಪು ಅಭ್ಯರ್ಥಿಯಾಗಿ ಅವರಿಗೆಲ್ಲ ನಾನು ಧನ್ಯವಾದಗಳು ಅರ್ಪಿಸುತ್ತೇನೆ. ಕಾಪು ಜನರ ಋಣ ತೀರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ಗೆಲುವಿನ ಬಗ್ಗೆ ವಿಶ್ವಾಸ ಇದ್ದಿರಬಹುದು. ಇದು ಚುನಾವಣೆ, ಸೋಲು ಗೆಲುವನ್ನು ನಿರ್ಧರಿಸುವವರು ಜನಗಳು. ಬೆವರು ಸುರಿಸಿ ಪ್ರಚಾರ ಮಾಡಿದ ಕಾರ್ಯಕರ್ತರ ಬಗ್ಗೆ ನನಗೆ ವಿಶ್ವಾಸ ಇತ್ತು. 

Tap to resize

Latest Videos

undefined

Udupi: ಚುನಾವಣೆ ಮುಗಿತು, ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಅಭ್ಯರ್ಥಿಗಳು

ಕಾರ್ಯಕರ್ತರು ನನ್ನ ಗೆಲುವನ್ನ ಅವರ ಗೆಲುವೆಂದು ನನ್ನ ಸೋಲನ್ನ ಅವರ ಸೋಲೆಂದು ಭಾವಿಸಿ ಹಗಲಿರುಳು ಶ್ರಮಿಸಿದ್ದಾರೆ. ನಾನು ಎಷ್ಟರ ಮಟ್ಟಿಗೆ ಕಾರ್ಯಕರ್ತರ ಋಣ ತೀರಿಸುತ್ತೇನೆ ಗೊತ್ತಿಲ್ಲ. ವಿನಯ್ ಕುಮಾರ್ ಸೊರಕೆ ಅವರು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿರಬಹುದು. ಯುದ್ಧ ರಂಗದಲ್ಲಿ ಈ ರೀತಿ ಹೇಳಿಕೆ ಕೊಡುವುದು ಸಹಜ. ನಾನು ಹತ್ತು ಹನ್ನೆರಡು ವರ್ಷಗಳಿಂದ ಈ ಊರಿನಲ್ಲಿ ಇದ್ದೇನೆ. ಜನರ ಕಷ್ಟ ಸುಖಗಳ ಜೊತೆ ಬೆರೆತಿದ್ದೇನೆ ಎಂಬ ಸಮಾಧಾನ ನನಗಿದೆ. ಈ ಕಾರಣಕ್ಕಾಗಿ ಮತದಾರರು ನನ್ನ ಕೈ ಹಿಡಿದಿದ್ದಾರೆ. ಮನುಷ್ಯನ ಬದುಕೇ ಒಂದು ಸವಾಲು. 

ನನ್ನದು ಹೋರಾಟದ ಬದುಕು, ಸದಾ ಎಲ್ಲದಕ್ಕೂ ಸನ್ನದ್ಧನಾಗಿಯೇ ಇರುತ್ತೇನೆ. ನಾನು ಹುಟ್ಟು ಶ್ರೀಮಂತ ಅಲ್ಲ, ಬಡತನದಿಂದ ಬೆಳೆದು ಬಂದ ಬಡ ಮನೆತನದ ವ್ಯಕ್ತಿ ರಾಜಕೀಯ ಹಿನ್ನೆಲೆಯೂ ನನಗೆ ಇಲ್ಲ. ವಿರೋಧ ಪಕ್ಷದಲ್ಲಿ ಇದ್ದು ಕೆಲಸ ಮಾಡುವುದು ಒಂದು ಹೋರಾಟವೇ ಅದನ್ನು ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಕೆಲಸ ಮಾಡುತ್ತೇನೆ. ಉಡುಪಿಯಲ್ಲಿ ಹೊಸ ಮುಖಗಳಿಗೆ ಆದ್ಯತೆ ಕೊಟ್ಟ ಪ್ರಯೋಗ ಯಶಸ್ವಿಯಾಗಿದೆ. ಇಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಒಂದು ನೆವನ ಮಾತ್ರ, ಗೆದ್ದದ್ದು ಪಕ್ಷ ಮತ್ತು ಕಾರ್ಯಕರ್ತರು. ನನ್ನ ಸ್ವಂತದ್ದು ಎಂಬುದು ಏನು ಇಲ್ಲ. 

ನನ್ನ ಗೆಲುವು ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಅರ್ಪಣೆ: ಬಿಜೆಪಿ ನೂತನ ಶಾಸಕ ಕಿರಣ್‌ ಕೊಡ್ಗಿ

ಸಂಘಟನಾತ್ಮಕವಾಗಿ ಬಹಳ ಶಕ್ತಿ ಇರುವಂತಹ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಗೆಲ್ಲಿಸುವುದು ಕಾರ್ಯಕರ್ತರು. ಕಾಪುವಿನಲ್ಲಿ ಬಂಟ ಮತ್ತು ಬಿಲ್ಲವ ಸಮುದಾಯಗಳ ನಡುವೆ ಚುನಾವಣೆ ಆಗಿಲ್ಲ. ಬಿಜೆಪಿಯ ಒಂದೇ ಒಂದು ಬಿಲ್ಲವ ಕಾರ್ಯಕರ್ತ ಅಲುಗಾಡಿಲ್ಲ. ಒಂದೇ ತಾಯಿಯ ಮಕ್ಕಳಂತೆ ನಾವು ಕೆಲಸ ಮಾಡಿದ್ದೇವೆ. ರಾಜಕೀಯದಲ್ಲಿ ಜಾತಿ ಬರಬಾರದು. ಯಾವ ಧರ್ಮ ಯಾವ ಜಾತಿಯಲ್ಲಿ ಹುಟ್ಟುವುದು ದೈವ ನಿರ್ಧಾರ. ಮತಕ್ಕೋಸ್ಕರ ಜಾತಿ ವಿಂಗಡಣೆ ತಪ್ಪು ಎಂದರು.

click me!