ಆರ್‌ಎಸ್‌ಎಸ್‌, ಭಗವದ್ಗೀತೆ ಹಾಗೂ ಬ್ರಾಹ್ಮಣರ ವಿರುದ್ಧ ಹಂಸಲೇಖ ವಿವಾದಾತ್ಮಕ ಹೇಳಿಕೆ

By Sathish Kumar KH  |  First Published Aug 28, 2024, 9:34 PM IST

ಆರ್‌ಎಸ್‌ಎಸ್‌ನ ಚಿಂತನಗಂಗಾ ಪುಸ್ತಕವನ್ನು ಓದುವ ಬ್ರಾಹ್ಮಣರು ರಾಷ್ಟ್ರದಲ್ಲಿ ನಡೆಯುವ ಘಟನೆಗಳ ವಿರುದ್ಧ ಪ್ರತಿದಾಳಿಗೆ ಸಿದ್ಧರಾಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ನಾದಬ್ರಹ್ಮ ಖ್ಯಾತಿಯ ಹಂಸಲೇಖ ವಿವಾದ ಸೃಷ್ಟಿಸಿದ್ದಾರೆ. 


ಬೆಂಗಳೂರು (ಆ.28): ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಂವಿಧಾನವಾಗಿರುವ ಚಿಂತನಗಂಗಾ ಎಂಬ ಪುಸ್ತಕವನ್ನು ಓದುವ ಬ್ರಾಹ್ಮಣರು ರಾಷ್ಟ್ರದಲ್ಲಿ ಏನು ನಡೆಯುತ್ತದೆಯೋ ಅದರ ವಿರುದ್ಧ ಪ್ರತಿದಾಳಿ ಮಾಡಲು ಸಿದ್ಧಗೊಳ್ಳುತ್ತಾರೆ ಎಂದು ನಾದಬ್ರಹ್ಮ ಖ್ಯಾತಿಯ ಹಂಸಲೇಖ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಾದಬ್ರಹ್ಮನೆಂದೇ ಖ್ಯಾತಿ ಪಡೆದಿರುವ ಹಂಸಲೇಖ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಬ್ರಾಹ್ಮಣರ ವಿರುದ್ಧ ಮಾತನಾಡುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾನು ಕಳೆದ 40 ವರ್ಷಗಳ ಹಿಂದೆ ಚಿಂತನ ಗಂಗಾ ಎಂಬ ಪುಸ್ತಕವನ್ನು ಓದಿದೆ. ಈ ಪುಸ್ತಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಂವಿಧಾನವಾಗಿದೆ. ಇದನ್ನು ಚಿಂತನ ಗಂಗಾ ಎಂಬ ಪುಸ್ತಕವಾಗಿ ಮುದ್ರಣ ಮಾಡಿ ಜನರಿಗೆ ಹಂಚಿಕೆ ಮಾಡುತ್ತಾರೆ. ಅವರು ಕೊಟ್ಟ ಪುಸ್ತಕ ಎಷ್ಟು ಕೆಲಸ ಮಾಡುತ್ತದೆಂದರೆ ಪ್ರತಿಯೊಬ್ಬ ಬ್ರಾಹ್ಮಣರ ಮನೆಯಲ್ಲಿಯೂ ಭಗವದ್ಗೀತೆ ಪುಸ್ತಕದ ಪಕ್ಕದಲ್ಲಿಯೇ ಅದನ್ನು ಇಟ್ಟುಕೊಂಡಿರುತ್ತಾರೆ ಎಂದರು.

Tap to resize

Latest Videos

ಮೋದಿ ಸಂಸತ್‌ಗೆ ಕೈಮುಗಿದು ಹೋಗಿದ್ರು, ಸಂಸತ್‌ ಬದಲಾಯ್ತು, ಈಗ ಸಂವಿಧಾನಕ್ಕೆ ಕೈಮುಗಿದಿದ್ದಾರೆ, ಇದೂ ಬದಲಾಗುತ್ತೆ: ಹಂಸಲೇಖ

ಮುಂದುವರೆದು, ಬ್ರಾಹ್ಮಣರು ಭಗವದ್ಗೀತೆಯನ್ನೂ ಓದುತ್ತಾರೆ. ಜೊತೆಗೆ ಆರ್‌ಎಸ್‌ಎಸ್‌ನವರು ಕೊಟ್ಟ ಚಿಂತನಗಂಗಾ ಪುಸ್ತಕವನ್ನು ಕೂಡ ಓದುತ್ತಾರೆ. ನಂತರ ರಾಷ್ಟ್ರದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ವಿರುದ್ಧವಾದ ಪ್ರತಿದಾಳಿಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಚಿಂತನಗಂಗಾ ಪುಸ್ತಕದಲ್ಲಿ ಮುದ್ರಿಸಿ ಮೆಲ್ಲ ಮೆಲ್ಲಗೆ ಎಲ್ಲ ಬ್ರಾಹ್ಮಣರಿಗೆ ಸಂದೇಶವನ್ನು ಕಳಿಸುತ್ತಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನೆಟ್ಟಿಗರೊಬ್ಬರು, ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ದ್ವೇಷ ಸಾರುವ ಪಕ್ಷ. ಹೌದು! ಕನ್ನಡದ ಬಗ್ಗೆ ಮಾತಾಡ್ತಿವಿ ಅಂತ ಜನರನ್ನ ಮಂಗ ಮಾಡಿ, ದೇವರ ಪೂಜೆ ಮಾಡೋ ಪೂಜಾರಿಗಳ ಮೇಲೆ ವಿಷ ಬಿತ್ತುವ ಕೆಲಸ ಮಾಡ್ತಿದ್ದಾರೆ. ಇವರಿಗೆ ಕನ್ನಡದ ಮೇಲೆ ಪ್ರೀತಿ ಅಲ್ಲ, ಬ್ರಾಹ್ಮಣರ ಮೇಲೆ ದ್ವೇಷ ಅಷ್ಟೆ. ಇವರ ಗುರು ಹುಚ್ಚಾಸ್ಪತ್ರೆಲಿ ಇರಬೇಕಾದ ಹಂಸಲೇಖ ಎಂದು ಕಿಡಿಕಾರಿದ್ದಾರೆ.

ನಾದಬ್ರಹ್ಮನ ಸುತ್ತ ವಿವಾದಗಳ ಹುತ್ತ: ಪ್ರೇಮಲೋಕದ ಹಾಡುಗಾರ ಹಂಸಲೇಖನಿಗೆ ಇದೇ ಕುತ್ತಾಯ್ತಾ?

ಇನ್ನು ಸಾಮಾಜಿಕ ಜಾಲತಾಣದ ವಿಡಿಯೋ ಪೋಸ್ಟ್‌ಗೆ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ ವ್ಯಕ್ತಿಯೊಬ್ಬರು ' ಇವರು ಎಷ್ಟು ಜನರ ಮನೆಗೆ ಹೋಗಿ ನೋಡಿದಾರಂತೆ? ನಾನು ಫಸ್ಟ್ ಟೈಮ್ ಆ ಬುಕ್ ಬಗ್ಗೆ ಕೇಳಿದ್ದು.. ಈ ಸಾಮಾಜಿಕ ತಾಣದ ಯುಗದಲ್ಲಿ ಈ ಪರಿ ಸುಳ್ಳು ಹೇಳ್ತಾರಲ್ಲ, ನಿಜವಾಗ್ಲೂ ಇವರು ತಿಳುವಳಿಕೆ ಇರೋವ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇವರು ಹುಚ್ಚಾಸ್ಪತ್ರೆಯಲ್ಲಿ ಇರಲಿಕ್ಕೂ ಲಾಯಕ್ಕಲ್ಲ, ನಮ್ಮ ಡಿ ಬಾಸ್ ಬಳಿ ಕಳುಹಿಸಿ ಸರಿ ಹೋಗ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ದ್ವೇಷ ಸಾರುವ ಪಕ್ಷ!

ಹೌದು! ಕನ್ನಡದ ಬಗ್ಗೆ ಮಾತಾಡ್ತಿವಿ ಅಂತ ಜನರನ್ನ ಮಂಗ ಮಾಡಿ, ದೇವರ ಪೂಜೆ ಮಾಡೋ ಪೂಜಾರಿಗಳ ಮೇಲೆ ವಿಷ ಬಿತ್ತುವ ಕೆಲಸ ಮಾಡ್ತಿದ್ದಾರೆ.

ಇವರಿಗೆ ಕನ್ನಡದ ಮೇಲೆ ಪ್ರೀತಿ ಅಲ್ಲ, ಬ್ರಾಹ್ಮಣರ ಮೇಲೆ ದ್ವೇಷ ಅಷ್ಟೆ!

ಹುಚ್ಚಾಸ್ಪತ್ರೆಲಿ ಇರಬೇಕಾದ ಹಂಸಲೇಖ ಇವರ ಗುರು🤣 pic.twitter.com/T4ZAHNOSBB

— Homelander (Bad Manners) (@aham_brahmasmi_)
click me!