
ಚೆನ್ನೈ (ಡಿ.18): 2021ರ ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡಕ್ಕಿಳಿಯಲು ತಮ್ಮ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಅನ್ನು ಚಿಹ್ನೆಯನ್ನಾಗಿ ನೀಡಬೇಕೆಂಬ ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀದಿ ಮಯ್ಯಂ(ಎಂಎನ್‌ಎಂ) ಕೋರಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಕಮಲ್‌ರಿಂದ ತಮಿಳುನಾಡು ರಾಜಕಾರಣದ ದಿಕ್ಕು ಬದಲಿಸುವ ಘೋಷಣೆ! .
ಯಾವುದೇ ಕಾರಣ ನೀಡದೆ ತಮಗೆ ಚಿಹ್ನೆ ನಿರಾಕರಿಸಿ, ಅದನ್ನು ಎಂಜಿಆರ್ ಮಕ್ಕಳ್ ಕಚ್ಚಿ ಎಂಬ ಪಕ್ಷಕ್ಕೆ ನೀಡಿರುವುದು ಕಮಲ್ ಹಾಸನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಪ್ರಜಾಪ್ರಭುತ್ವ ಈಗ ಹಾಸಿಗೆ ಹಿಡಿದಿದೆ. ನಮಗೆ ಬ್ಯಾಟರಿ ಟಾಚ್‌ರ್ ಕೊಡದಿದ್ದರೆ, ನಾವು ಲೈಟ್ ಹೌಸ್ ಆಗುತ್ತೇವೆ ಎಂದು ಕಮಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.