ಕುಮಾರಣ್ಣ ಮಾತೃ ಹೃದಯಿ: ಟಿ ಎ ಶರವಣ

Kannadaprabha News   | Asianet News
Published : Dec 17, 2020, 09:31 AM IST
ಕುಮಾರಣ್ಣ ಮಾತೃ ಹೃದಯಿ: ಟಿ ಎ ಶರವಣ

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  ತಾಯಿ ಹೃದಯವುಳ್ಳವರಾಗಿದ್ದು, ರೈತ ಪರ ಕಾಳಜಿಯಿರುವಂತಹ ಇನ್ನೊಬ್ಬ ಇಂತಹ ನಾಯಕರನ್ನು ನಾನು ನೋಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಟಿ ಎ ಶರವಣ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಡಿ.17): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಾಯಿ ಹೃದಯವುಳ್ಳವರಾಗಿದ್ದು, ಯಾವುದೇ ವ್ಯಕ್ತಿ ಸಮಸ್ಯೆಗಳ ಮೂಟೆ ಹೊತ್ತು ಕುಮಾರಣ್ಣನ ಮನೆ ಬಾಗಿಲಿಗೆ ಬಂದರೆ ತಕ್ಷಣವೇ ಸ್ಪಂದಿಸಿ ಅವರ ಕಣ್ಣೊರೆಸುವ ಸದ್ಗುಣವಂತರು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ ಬಣ್ಣಿಸಿದ್ದಾರೆ.

ಕುಮಾರಸ್ವಾಮಿ ಅವರ ಜನುಮದಿನದ ಪ್ರಯುಕ್ತ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಬಳಿಕ ಮಾತನಾಡಿದ ಅವರು, ಬಡವರ ಬಗ್ಗೆ ಕುಮಾರಸ್ವಾಮಿ ಅವರಿಗಿರುವ ಕಳಕಳಿ, ರೈತರ ಬಗೆಗಿನ ಹಿತಾಸಕ್ತಿ ಬೇರೆ ಯಾರಲ್ಲಿಯೂ ಕಂಡಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಜನತಾದರ್ಶನ, ಗ್ರಾಮವಾಸ್ತವ್ಯದಂತಹ ಜನಪರ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. 26 ಸಾವಿರ ಕೋಟಿ ರು. ಸಾಲ ಮನ್ನಾ, ಬಡವರ ಬಂಧು ಸೇರಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕೀರ್ತಿ ಕುಮಾರಸ್ವಾಮಿಗೆ ಸಲ್ಲುತ್ತದೆ ಎಂದರು.

ಜನಪ್ರಿಯ ಮಾಜಿ ಮುಖ್ಯಮಂತ್ರಿ , ನಮ್ಮ ಪಕ್ಷದ ನಾಯಕರಾದ ಶ್ರೀ ಹೆಚ್ಡಿ. ಕುಮಾರಸ್ವಾಮಿ ರವರ 61 ನೇ ಹುಟ್ಟುಹಬ್ಬದ ಪ್ರಯುಕ್ತ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜಿಪಿ ಭವನದಲ್ಲಿ ರಕ್ತದನ ಮಾಡುವ ಮುಖೇನ ಸರಳವಾಗಿ , ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

Posted by T.A.Sharavana on Tuesday, December 15, 2020

ಎಚ್‌ಡಿಕೆಗೆ ಮೋದಿ ಹಾರೈಕೆ; ರಾಜಕೀಯ ಸಮೀಕರಣ ಸುಳಿವು?

2023ಕ್ಕೆ ಕುಮಾರಣ್ಣ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ಬಹಳಷ್ಟು ಮಂದಿಯ ಕನಸು. ಪಕ್ಕದ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಹೇಗೆ ಪ್ರಬಲವಾಗಿ ಆಡಳಿತ ಚುಕ್ಕಾಣಿ ಹಿಡಿದಿದೆಯೋ, ಅದೇ ರೀತಿಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸುವರ್ಣ ಕಾಲವೇ ಆರಂಭವಾಗಲಿದೆ. ಕುಮಾರಸ್ವಾಮಿ ಹುಟ್ಟುಹಬ್ಬವನ್ನು ‘ನಾನು ಕಂಡ ಕುಮಾರಣ್ಣ’ ಸಂವಾದ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುಮಾರಸ್ವಾಮಿ ಅವರ ಕಾರ್ಯವೈಖರಿಯೇ ನನಗೆ ಪ್ರೇರಣೆ, ಆದರ್ಶ, ಅವರ ತತ್ವಗಳನ್ನು ಅನುಸರಿಸಿಯೇ ನಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಎಂಎಲ್‌ಸಿಯಾಗಿದ್ದು, ಕುಮಾರಸ್ವಾಮಿ ಅವರೊಂದಿಗೆ ಸದಾ ನಿಲ್ಲಬೇಕೆಂಬುದು ನನ್ನ ಗುರಿ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!