ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ: 12 ವರ್ಷ ವನವಾಸದ ಬಳಿಕ ಸ್ವಂತ ಬಲದ ಮೇಲೆ ಅಧಿಕಾರಕ್ಕೆ!

By Ravi Janekal  |  First Published Mar 23, 2023, 4:22 PM IST

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಿದೆ. ಪಾಲಿಕೆಯ ನೂತನ ಮೇಯರ್ ಆಗಿ ವಿಶಾಲ್ ದರ್ಗಿ ಆಯ್ಕೆ, ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.


ಕಲಬುರಗಿ (ಮಾ.23) : ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಿದೆ. ಪಾಲಿಕೆಯ ನೂತನ ಮೇಯರ್ ಆಗಿ ವಿಶಾಲ್ ದರ್ಗಿ ಆಯ್ಕೆ, ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ ಪ್ರಯತ್ನಕ್ಕೆ ಕಡೆಗೂ ಸಿಕ್ತು ಜಯ. ರೇವೂರ ಬೆಂಬಲಿಗನಿಗೆ ಒಲಿದ ಮೇಯರ್ ಗಾದಿ.

Tap to resize

Latest Videos

undefined

ಇಂದು ಚುನಾವಣೆಗೆ ಹಾಜರಾದ 65  ಸದಸ್ಯರಲ್ಲಿ 33 ಮತ ಬಿಜೆಪಿಗೆ ಬಂದಿವೆ. ಜೆಡಿಎಸ್ ಬೆಂಬಲ ಸಿಕ್ಕರೂ 32 ಮತ ಗಳಿಸಿ ಸೋಲನುಭವಿಸಿರುವ ಕಾಂಗ್ರೆಸ್. 

ಕಲಬುರಗಿ ಪಾಲಿಕೆ ಮೇಯರ್ ಎಲೆಕ್ಷನ್‌ಗೆ ಬರ್ತಾರಾ ಎಐಸಿಸಿ ಅಧ್ಯಕ್ಷ: ಕಾಂಗ್ರೆಸ್ ಗೆಲ್ಲಬೇಕಾದ್ರೆ ಖರ್ಗೆ ಬರಲೇಬೇಕು!

ಕಳೆದ 2010 ರಲ್ಲಿ ಅಂದಿನ ಚಂದ್ರಶೇಖರ್(Chandrashekhar revooru) ನೇತೃತ್ವದಲ್ಲಿ ಮೊದಲ ಬಾರಿಗೆ ಮೇಯರ್ ಗಾದಿ ಏರಿದ್ದ ಬಿಜೆಪಿ. ಚಹಾ ಮಾರುವ ಮಹಿಳೆ ಸುನಂದಾ ಮೊದಲ ಬಾರಿಗೆ ಕೇಸರಿ ಪಕ್ಷದಿಂದ ಅಧಿಕಾರಕ್ಕೆರಿದ್ದರು ಆಗ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಅಲ್ಲಿಂದೀಚೆಗೆ ಬಿಜೆಪಿಗೆ ಅಧಿಕಾರ ಸಿಗದಂತೆ ನೋಡಿಕೊಂಡಿದ್ದ ಕಾಂಗ್ರೆಸ್. ಇದೀಗ ಹನ್ನೆರಡು ವರ್ಷ ವನವಾಸದ ಬಳಿಕೆ ಬಿಜೆಪಿ ತೆಕ್ಕೆಗೆ ಆಡಳಿತ ಚುಕ್ಕಾಣಿ.

ಆಗ ಶಾಸಕ ಚಂದ್ರಶೇಖರ್ ಪಾಟೀಲ್ ರೇವೂರ ಪ್ರಯತ್ನಕ್ಕೆ ಫಲ ಸಿಕ್ಕಿತ್ತು. ಈಗ ಅವರ ಮಗ ದತ್ತಾತ್ರೇಯ ಪಾಟೀಲ್ ರೇವೂರ(Dattatraya C. Patil Revoor )ಗೆ ಸಲ್ಲಲಿರುವ ಶ್ರೇಯಸ್ಸು. ಹನ್ನೆರಡು ವರ್ಷದ ಬಳಿಕ ಅಧಿಕಾರ ಸಿಕ್ಕ ಸಂಭ್ರಮದಲ್ಲಿರುವ ಬಿಜೆಪಿ ಕಾರ್ಯಕರ್ತರು. ಇಂದು ಟೌನ್ ಹಾಲ್ ಮುಂದೆ ಕಾರ್ಯಕರ್ತರ ವಿಜಯೋತ್ಸವ. 

 

'ಹೆಸರನ್ನ ಅಲ್ಲೇ ಇಟಗೊಂಡು ಕುಂದ್ರಿ' : ಬಿಜೆಪಿ ಪ್ರಚಾರ ಸಮಿತಿಯಲ್ಲಿ ಸೇರಿಸದ್ದಕ್ಕೆ ಸ್ವಪಕ್ಷದ ವಿರುದ್ಧವೇ ಯತ್ನಾಳ್ ಗರಂ

click me!