ಓಲೈಕೆಗಾಗಿ ಖರ್ಗೆ ಕುಟುಂಬದ ಅವಹೇಳನ ಸಲ್ಲ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ

By Kannadaprabha News  |  First Published Nov 16, 2022, 9:30 PM IST

ಚಿತ್ತಾಪುರ ಮತಕ್ಷೇತ್ರದ ಮತದಾರರು ಪ್ರಬುದ್ದರಾಗಿದ್ದಾರೆ. ಅವರು ಕ್ಷೇತ್ರದಲ್ಲಿ ತಮ್ಮ ಶಾಸಕತ್ವದ ಮೂರು ಬಾರಿಯ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಈಗ ಪ್ರಿಯಾಂಕ್‌ ಖರ್ಗೆರವರಿಂದ ಆಗುತ್ತಿರುವ ಅಭಿವೃದ್ಧಿಯನ್ನು ಗಮನಿಸಿದ್ದಾರೆ. 


ಚಿತ್ತಾಪುರ(ನ.16): ಚಿತ್ತಾಪುರ ಮತಕ್ಷೇತ್ರದವರಲ್ಲದಿದ್ದರೂ ಬಾಬುರಾವ ಚಿಂಚನಸೂರ ಅವರನ್ನು 1989ರಿಂದ ರಾಜಕೀಯವಾಗಿ ಬೆಳೆಯಲು ಅವರಿಗೆ ಸತತವಾಗಿ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದಲ್ಲದೇ ಶಾಸಕರಾಗಿ, ಸಚಿವರಾಗಲು ಕಾರಣಿಕರ್ತರಾದ ಖರ್ಗೆ ಕುಟುಂಬವನ್ನು ರಾಜಕೀಯಕ್ಕಾಗಿ ಮತ್ತು ಬಿಜೆಪಿ ಮುಖಂಡರ ಓಲೈಕೆ ಮಾಡುವ ಭರದಲ್ಲಿ ಪ್ರಿಯಾಂಕ್‌ ಖರ್ಗೆ ಅವರನ್ನು ಸೊಲಿಸುವುದೇ ನನ್ನ ಗುರಿ ಎಂದು ಹೇಳಿರುವದು ಸರಿಯಾದ ನಡೆ ಅಲ್ಲಾ ಎಂದು ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹಾಗೂ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಕ್ಷೇತ್ರ ಮರುವಿಂಗಡಣೆ ಆದ ಸಮಯದಲ್ಲಿ ಚಿತ್ತಾಪುರ ಮತಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ರಾಜ್ಯದ ಸರ್ಕಾರದಲ್ಲಿ ಸಚಿವರಾಗಿದ್ದವರಿಗೆ ನಮ್ಮ ಕ್ಷೇತ್ರವು ಮೀಸಲು ಕ್ಷೇತ್ರವಾದಾಗ ಕ್ಷೇತ್ರ ಇಲ್ಲದೇ ಅಲೆದಾಡುವ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಅವರು ತಾವು ಪ್ರತಿನಿಧಿಸುತ್ತಿದ್ದ ಗುರಮಿಠಕಲ್‌ ಕ್ಷೇತ್ರವನ್ನು ಅವರಿಗೆ ನೀಡಿದಲ್ಲದೇ ಎರಡು ಬಾರಿ ಗೆಲುವಿಗೆ ಕಾರಣರಾಗಿದ್ದಾರೆ. ಇದನ್ನು ಮರೆತು ಅವರ ಬಗ್ಗೆ ಹಗುರವಾಗಿ ಮಾತನಾಡುವುದಲ್ಲದೇ ಪ್ರಿಯಾಂಕ್‌ ಖರ್ಗೆ ಅವರನ್ನು ಸೊಲಿಸುವುದೇ ನನ್ನ ಗುರಿ ಎಂದು ಹೇಳುತ್ತಿರುವುದು ನೊಡಿದರೆ ಉಂಡ ಮನೆಗೆ ದ್ರೋಹ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

ಬಿಜೆಪಿ ಸೇರಿಕೊಳ್ಳಲಿದ್ದ ಜೆಡಿಎಸ್ ನಾಯಕನ ಬರ್ಬರ ಹತ್ಯೆ, ಕಲ್ಲಿನಿಂದ ಗುಪ್ತಾಂಗಕ್ಕೆ ಹೊಡೆದು ಕೊಲೆ!

ಚಿತ್ತಾಪುರ ಮತಕ್ಷೇತ್ರದ ಮತದಾರರು ಪ್ರಬುದ್ದರಾಗಿದ್ದಾರೆ. ಅವರು ಕ್ಷೇತ್ರದಲ್ಲಿ ತಮ್ಮ ಶಾಸಕತ್ವದ ಮೂರು ಬಾರಿಯ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಈಗ ಪ್ರಿಯಾಂಕ್‌ ಖರ್ಗೆರವರಿಂದ ಆಗುತ್ತಿರುವ ಅಭಿವೃದ್ಧಿಯನ್ನು ಗಮನಿಸಿದ್ದಾರೆ. ಅವರು ಚುನಾವಣೆಯಲ್ಲಿ ನಿರ್ಧರಿಸುತ್ತಾರೆ. ಹೊರತು ಯಾರೋ ಹೊರಗಿನವರು ಬಂದು ಹೇಳಿದರೆ ಆಗುವುದಿಲ್ಲಾ. ಇಷ್ಟೆಲ್ಲಾ ಹೇಳುವ ಅವರು ಮುಂದಿನ ಚುನಾವಣೆಯಲ್ಲಿ ಗುರಮಠಕಲ್‌ ಕ್ಷೇತ್ರದಿಂದ ಗೆದ್ದು ತೊರಿಸಲಿ ಅದು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲಾ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಸಂಜಯ ಬುಳಕರ್‌, ನಾಗಯ್ಯ ಗುತ್ತೆದಾರ, ನಾಗರೆಡ್ಡಿ ಗೊಬಶೇನ್‌, ಈರಪ್ಪ ಬೊವಿ, ಅಹ್ಮದ್‌ ಶೇಟ್‌, ಶಿವಾಜಿ ಕಾಶಿ, ಮಹ್ಮದ ಖಾಜಾಮಿಯ್ಯ, ಲಕ್ಷಿತ್ರ್ಮೕಕಾಂತ ಸಾಲಿ ಇತರರು ಇದ್ದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ಅವರು ಲೊಕಸಭೆ ಚುನಾವಣೆ ಸಮಯದಲ್ಲಿ ಬಹಿರಂಗ ಸಭೆಯಲ್ಲಿ ಕೊಲಿ ಸಮಾಜ ಎಸ್‌ಟಿ ಸೇರ್ಪಡೆ ಖಚಿತ ಅದನ್ನು ರಕ್ತದಲ್ಲಿ ಬರೆದುಕೊಡುವೆ ಎಂದು ಹೇಳಿದ್ದೀರಿ. ನಿಮ್ಮ ಹೇಳಿಕೆ ನೀಡಿ ಮೂರು ವರ್ಷ ಕಳೆಯಿತು. ನಿಮ್ಮ ಭರವಸೆ ಏನಾಯಿತು ಎನ್ನುವದು ಮೊದಲು ಜನರಿಗೆ ತಿಳಿಸಿ. ಕ್ಷೇತ್ರಕ್ಕೆ ನೀವು ಬಂದಾಗ ಪ್ರತಿ ಗ್ರಾಮದಲ್ಲೂ ಕೊಲಿ ಸಮಾಜದವರು ಎಸ್‌.ಟಿ ಕುರಿತಾಗಿ ಪ್ರಶ್ನೆ ಮಾಡುವೆವು ಎಂದು ಕಾಂಗ್ರೆಸ್‌ ಮುಖಂಡ ಭೀಮಣ್ಣ ಸಾಲಿ ತಿಳಿಸಿದರು.
 

click me!