
ಬೆಂಗಳೂರು, (ಸೆ.28): ಯಡಿಯೂರಪ್ಪ ಒಬ್ಬ ಡೋಂಗಿ ರೈತ ನಾಯಕ. ಹಸಿರು ಶಾಲು ಹಾಕಿಕೊಂಡು ಬಿಂಬಿಸಿದ್ದರು. ನಿಜವಾಗಲೂ ರೈತರ ಪರ ಇದ್ದಿದ್ದರೆ ಇಂತಹ ಕಾಯ್ದೆ ತರುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಿಎಸ್ವೈ ವಿರುದ್ಧ ಗುಡುಗಿದ್ದಾರೆ.
"
ಬೆಂಗಳೂರಿನಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ದೇವರಾಜು ಅರಸು ಭೂ ಸುಧಾರಣೆ ಕಾಯ್ದೆ ತಂದಿದ್ದರು. ಉಳುವವನೇ ಭೂಮಿ ಒಡೆಯ ಮಾಡಿದ್ದರು. ಜಮೀನು ಮಾಲೀಕರು ವಿರೋಧ ಮಾಡಿದ್ದು, ಭೂ ರಹಿತರು ಭೂ ಮಾಲೀಕರಾದರು. ಆದರೆ, ಯಡಿಯೂರಪ್ಪ ರೈತರ ಜಮೀನು ಕಸಿದುಕೊಳ್ಳುತ್ತಿದ್ದಾರೆ ಕಿಡಿಕಾರಿದರು.
`ರೈತನ ಅನ್ನ ತಿನ್ನುತ್ತಿರುವ ನಾನು ರೈತನಿಗೆ ಯಾವುದೇ ಅನ್ಯಾಯ ಮಾಡಲ್ಲ'
ಇನ್ನು ರೈತರು ಜಮೀನು ಮಾರಿ, ಅದೇ ಜಮೀನಿನಲ್ಲಿ ಕೂಲಿ ಮಾಡಲು ಹೋಗುತ್ತಾರೆ. ಉಳುವವನೇ ಭೂ ಒಡೆಯ ಮಾಡಿದ್ದೆವು. ಬಿಜೆಪಿ ಉಳ್ಳವನೇ ಭೂಮಿ ಒಡೆಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
"
ಎಷ್ಟು ಲೂಟಿ ಹೊಡೆಯುತ್ತೀರಿ ಮಿಸ್ಟರ್ ಯಡಿಯೂರಪ್ಪ, ಕೋವಿಡ್ ಸಮಯದಲ್ಲೂ ಲೂಟಿ ಹೊಡೆದಿದ್ದ ಗಿರಾಕಿಗಳು, ಯಡಿಯೂರಪ್ಪ ಮತ್ತು ಪುತ್ರ ಲೂಟಿ ಮಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕಂಪನಿ ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಆದರೆ, ಈಗ ಆರ್ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.