ಪ್ರಧಾನಿ ನರೇಂದ್ರ ಮೋದಿಯವರು ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಹೇಳುತ್ತಿದ್ದರು. ಆದರೆ, ತೀನ್ ಸೌ ಪಾರ್ ಕೂಡ ಆಗಲಿಲ್ಲ. ಮತದಾರರು ಅವರನ್ನು ತಿರಸ್ಕರಿಸಿದ್ದಾರೆ ಎಂದು ಟೀಕಿಸಿದ ಕಾಗವಾಡ ಶಾಸಕ ರಾಜು ಕಾಗೆ
ಕಾಗವಾಡ(ಜೂ.06): ಒಂದು ವರ್ಷದಿಂದ ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಬೀಗುತ್ತಿದ್ದ ಬಿಜೆಪಿಯವರ ಕನಸು ಢಮಾರ್ ಆಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳದೇ ಕೇವಲ ಭಾವನಾತ್ಮಕವಾಗಿ ಮಾತನಾಡಿದರೇ ಹೊರತು, ದೇಶದಲ್ಲಿ ರೈತರ, ದೀನ ದಲಿತರ, ಶ್ರಮಿಕರ, ಮಹಿಳೆಯರ ಪರ ಕೆಲಸ ಮಾಡಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಪ್ರತಿತಂತ್ರ, ಕುತಂತ್ರ ಮಾಡಿದರೂ ಬಿಜೆಪಿಗರ ಆಟ ನಡೆಯಲಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಹೇಳುತ್ತಿದ್ದರು. ಆದರೆ, ತೀನ್ ಸೌ ಪಾರ್ ಕೂಡ ಆಗಲಿಲ್ಲ. ಮತದಾರರು ಅವರನ್ನು ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು.
ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ಭಿಕಾರಿಗಳು ಎಂದ ಕಾಂಟ್ರೊವರ್ಸಿ ಕಿಂಗ್ ರಾಜು ಕಾಗೆ!
ಕಳೆದ ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಕಳಪೆ ಪ್ರದರ್ಶನದಿಂದ 244 ಕ್ಕೆ ಕುಸಿದಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಬಿಜೆಪಿಗರು ಅಧಿಕಾರ ಬಿಟ್ಟು ಕೊಡಬೇಕು. ಈ ಬಾರಿ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಜನಮನ ಗೆಲ್ಲುವಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇದು ಇಂಡಿಯಾ ಒಕ್ಕೂಟಕ್ಕೆ ಜನ ಬೆಂಬಲ ಇರುವುದನ್ನು ಸಾಬೀತು ಪಡಿಸಿದೆ ಎಂದು ತಿಳಿಸಿದರು.
ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ರಫೀಕ್ ಪಟೇಲ(ಪಾರ್ಥನಳ್ಳಿ), ಮುಖಂಡರಾದ ರಾವಸಾಹೇಬ ಐಹೊಳಿ, ರಾಜು ಬಿಳ್ಳೂರ, ರಿಯಾಜ್ ಸನದಿ, ವಿನಾಯಕ ಬಾಗಡಿ, ರಮೇಶ ಚೌಗುಲಾ, ಶಿವಾನಂದ ಮಗದುಮ್, ಸೌರಭ ಪಾಟೀಲ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಭಿರಡಿ, ಸುರೇಶ ಗಾಣಿಗೇರ, ರಾಜು ಮದನೆ, ಸಂಜಯ ಸಲಗರೆ, ಶಂಕರ ಮಗದುಮ್, ಬಸನಗೌಡ ಪಾಟೀಲ, ಕೆ.ಆರ್.ಪಾಟೀಲ ಉಪಸ್ಥಿತರಿದ್ದರು.