ರಾಯಚೂರು (ಆ.12): ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಸಚಿವ ಸ್ಥಾನ ನೀಡದ್ದಕ್ಕೆ ದೇವದುರ್ಗ ಶಾಸಕ ಶಾಸಕ ಕೆ.ಶಿವನಗೌಡ ಅಸಮಾಧಾನ ಹೊರಹಾಕಿದ್ದಾರೆ.
ರಾಯಚೂರಿನಲ್ಲಿಂದು ಮಾತನಾಡಿದ ಶಾಸಕ ಶಿವನಗೌಡ ಹಿರಿಯ ನಾಯಕರ ನಿರ್ಣಯದಿಂದ ನನಗೆ ಅನ್ಯಾಯವಾಗಿದೆ. ರಾಜ್ಯದ ಹಿರಿಯ ನಾಯಕರು ನಮಗೆ ಅನ್ಯಾಯ ಮಾಡಿದ್ದಾರೆ ಎಂದರು.
ಮುಳ್ಳಿನ ಹಾಸಿಗೆಯಾಗಿದೆ ಬೊಮ್ಮಾಯಿ ಅವರಿಗೆ ಸಿಎಂ ಸೀಟು
ರಾಷ್ಟ್ರೀಯ ನಾಯಕರಿಂದ ಸ್ಥಾನಮಾನ ಸಿಕ್ಕಿತ್ತು. ರಾಜ್ಯದ ಕೆಲ ಹಿರಿಯ ನಾಯಕರು ಬೇಕಂತಲೇ ಸ್ಥಾನಮಾನ ತಪ್ಪಿಸಿದ್ದಾರೆ. ಹಿರಿಯ ನಾಯಕರಿಮದ ತುಳಿತಕ್ಕೊಳಗಾಗಿದ್ದೇನೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡದವನಾದ ನನಗೆ ದೊಡ್ಡ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡದವರು ಹಲವು ಶಾಸಕರಿದ್ದಾರೆ. ಕನಿಷ್ಠ ಮೂವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಹದಿಮೂರು ಜಿಲ್ಲೆಗೆ ಅನ್ಯಾಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿವರು ಮುಂದೆಯೂ ಮತ್ತೇ ಸಿಎಂ ಆಗಲಿದ್ದಾರೆ. ಆದ್ದರಿಂದ ನಮಗೆ ಸಿಎಂ ಬೊಮ್ಮಾಯಿ ನ್ಯಾಯ ಒದಗಿಸಬೇಕು ಎಂದ ಶಾಸಕ ಕೆ.ಶಿವನಗೌಡ ಹೇಳಿದರು.