ಗೋಪಾಲಯ್ಯರ ವರ್ಚಸ್ಸು: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ

By Suvarna News  |  First Published Dec 9, 2019, 12:20 PM IST

ಮಧ್ಯಮ ವರ್ಗ ಹಾಗೂ ದುಡಿಯುವ ವರ್ಗವೇ ಹೆಚ್ಚಾಗಿರುವ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪಕ್ಷ, ಜಾತಿಗಿಂತಾ ಹೆಚ್ಚಾಗಿ ಗೋಪಾಲಯ್ಯ ವರ್ಚಸ್ಸು ಹಾಗೂ ಪ್ರಾಬಲ್ಯವೇ ನಿರ್ಣಾಯಕ ಪಾತ್ರ ವಹಿಸಿದ್ದು, ಬಿಜೆಪಿ ಇತಿಹಾಸ ಸೃಷ್ಟಿಸಿದೆ.


ಬೆಂಗಳೂರು, (ಡಿ.09): ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿರುವ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೆ.ಗೋಪಾಲಯ್ಯ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಈ ಹಿಂದೆ ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೋಪಾಲಯ್ಯ ‘ದಳಪತಿ’ಗೆ ಕೈಕೊಟ್ಟು ಈ ಬಾರಿಯ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ವಿಜಯ ಪತಾಕೆ ಹಾರಿಸಿದರು. ಈ ಮೂಲಕ ಗೋಪಾಲಯ್ಯ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು.

Tap to resize

Latest Videos

undefined

ಮಹಾಲಕ್ಷ್ಮೀ ಲೇಔಟ್: ಗೋಪಾಲಯ್ಯ ಹ್ಯಾಟ್ರಿಕ್‌ ಕನಸಿಗೆ ಜೆಡಿಎಸ್‌ ಅಡ್ಡಿ 

ಮಧ್ಯಮ ವರ್ಗ ಹಾಗೂ ದುಡಿಯುವ ವರ್ಗವೇ ಹೆಚ್ಚಾಗಿರುವ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪಕ್ಷ, ಜಾತಿಗಿಂತಾ ಹೆಚ್ಚಾಗಿ ಗೋಪಾಲಯ್ಯ ವರ್ಚಸ್ಸು ಹಾಗೂ ಪ್ರಾಬಲ್ಯವೇ ನಿರ್ಣಾಯಕ ಪಾತ್ರ ವಹಿಸಿದೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಗಿರೀಶ್ ನಾಶಿ ಜೆಡಿಎಸ್ ಅಭ್ಯರ್ಥಿಯಾಗುವ ಮೂಲಕ, ಅಚ್ಚರಿ ಮೂಡಿಸಿದ್ದರು. ಸಿದ್ದರಾಮಯ್ಯ ಆಪ್ತ ಶಿವರಾಜ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆದ್ರೆ, ಇಬ್ಬರೂ ಕೂಡಾ ಗೋಪಾಲಯ್ಯ ಅವರಿಗೆ ಪೈಪೋಟಿ ಕೊಡುವಲ್ಲಿ ವಿಫಲರಾಗಿದ್ದಾರೆ. 

LIVE: ಮುಕ್ತಾಯದ ಹಂತಕ್ಕೆ ಮತ ಎಣಿಕೆ, 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧ್ಯತೆ

ಇತಿಹಾಸ ಸೃಷ್ಟಿಸಿದ ಬಿಜೆಪಿ
ಇದೇ ಮೊದಲ ಬಾರಿಗೆ ಮಹಾಲಕ್ಷ್ಮೀ ಲೇಔಟ್‌ ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ  ಇತಿಹಾಸ ಸೃಷ್ಟಿಸಿದೆ.ಇದುವರೆಗೂ ಮಹಾಲಕ್ಷ್ಮೀ ಲೇಔಟ್‌ ನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ ಗೆಲ್ಲುತ್ತಾ ಬಂದಿತ್ತು. ಆದ್ರೆ, ಉಪಚುನಾವಣೆಯಲ್ಲಿ ಗೋಪಾಲಯ್ಯ, ಕಮಲ ಅರಳಿಸಿದರು. 

2008ರಲ್ಲಿ ಎಲ್‌.ಎನ್‌.ನರೇಂದ್ರ ಬಾಬು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಬಳಿಕ 2018 ಹಾಗೂ 2013ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಗೋಪಾಲಯ್ಯ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು.

ಒಕ್ಕಲಿಗರೇ ನಿರ್ಣಾಯಕವಾಗಿರುವ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಲಿಂಗಾಯತ ಸಮುದಾಯದ ಗಿರೀಶ್ ನಾಶಿ ಆಟ ನಡೆಯಲಿಲ್ಲ. ಇನ್ನು ಸಿದ್ದರಾಮಯ್ಯ ಆಪ್ತ ಶಿವರಾಜ್‌ಗೆ ಟಿಕೆಟ್‌ ಸಿಕ್ಕಿದ್ದು, ಮೂಲ ಕಾಂಗ್ರೆಸ್ಸಿಗರನ್ನು ಕೆರಳಿಸಿತ್ತು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮನದಲ್ಲಿ ಗೋಪಾಲಯ್ಯ ಅವರನ್ನು ಮಣಿಸಲೇಬೇಕು ಎಂದು ಪಟ್ಟು ಹಿಡಿದು ಬಿರುಸಿನ ಪ್ರಚಾರ ಮಾಡಿದ್ದರು. ಅದರಂತೆಯೇ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರವು ಜೆಡಿಎಸ್‌ ಕೋಟೆಯಾಗಿರುವ ಕಾರಣ ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದರು. ಆದ್ರೆ, ಮತದಾರ ಗೋಪಾಲಯ್ಯನವರ ಕೈ ಹಿಡಿದಿದ್ದು, ಕುಮಾರಸ್ವಮಿ, ದೇವೇಗೌಡ್ರಿಗೆ ಮುಖಭಂಗವಾಗಿದೆ.

click me!