ಜ. 5ರಿಂದ ಜೆಪಿ ನಡ್ಡಾ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ ಪ್ರವಾಸ, ವೀರೇಶ್

By Girish GoudarFirst Published Jan 4, 2023, 11:00 PM IST
Highlights

ಜೆಪಿ ನಡ್ಡಾ ಅವರು ಗುರುವಾರ ಮಧ್ಯಾಹ್ನ ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸುವರು. ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಕಾರ್ಯಕರ್ತ ಸಮಾವೇಶದಲ್ಲಿ ಭಾಗವಹಿಸುವರು ನಂತರ ಮಾದಾರ ಚೆನ್ನಯ್ಯ ಗುರುಪೀಠ, ಸಿರಿಗೆರೆ ಮತ್ತು ತರಳಬಾಳು ಮಠಕ್ಕೆ ಭೇಟಿ ನೀಡುವರು.

ವರದಿ: ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ದಾವಣಗೆರೆ 

ದಾವಣಗೆರೆ(ಜ.04):  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜ. 5, 6 ರಂದು ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಮಠಗಳಿಗೆ ಭೇಟಿ ನೀಡುವ ಜೆಪಿ ನಡ್ಡಾ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ.‌ವೀರೇಶ್ ಹನಗವಾಡಿ ತಿಳಿದರು. ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಪಿ ನಡ್ಡಾ ಅವರು ಗುರುವಾರ ಮಧ್ಯಾಹ್ನ ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸುವರು. ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಕಾರ್ಯಕರ್ತ ಸಮಾವೇಶದಲ್ಲಿ ಭಾಗವಹಿಸುವರು ನಂತರ ಮಾದಾರ ಚೆನ್ನಯ್ಯ ಗುರುಪೀಠ, ಸಿರಿಗೆರೆ ಮತ್ತು ತರಳಬಾಳು ಮಠಕ್ಕೆ ಭೇಟಿ ನೀಡುವರು.

ಗುರುವಾರ ಸಂಜೆ 6ಕ್ಕೆ ಹೆಬ್ಬಾಳ ಟೋಲ್ ಗೇಟ್ ನಿಂದ ಮಾಯಕೊಂಡ, ದಾವಣಗೆರೆ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ನೂರಾರು ಕಾರುಗಳ ಮೆರವಣಿಗೆಯೊಂದಿಗೆ ಜಿಎಂಐಟಿ ಅತಿಥಿ ಗೃಹಕ್ಕೆ ಕರೆತರಲಾಗುವುದು ಎಂದು ತಿಳಿಸಿದರು.

ಅದೃಷ್ಟ ಇದ್ದರೆ ಪರಮೇಶ್ವರ್ ಮುಂದಿನ ಸಿಎಂ ಆಗಬಹುದು: ಶಾಮನೂರು ಶಿವಶಂಕರಪ್ಪ

ಜಿಎಂಐಟಿ ಅತಿಥಿ ಗೃಹದಲ್ಲಿ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು, 14 ಶಾಸಕರು, ವಿಧಾನ ಪರಿಷತ್ ಸದಸ್ಯರು, ‌ಜಿಲ್ಲಾ ಅಧ್ಯಕ್ಷರು, ಮಾಜಿ ಶಾಸಕರು, ಪರಿಷತ್ತು ಮಾಜಿ ಸದಸ್ಯರು ಇತರರು ಭಾಗವಹಿಸುವರು ಎಂದು ತಿಳಿಸಿದರು. ನಡ್ಡಾ ಅವರ ಜೊತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇತರರು ಇರುವರು ಎಂದು ತಿಳಿಸಿದರು.

ಜ.6 ರಂದು ಬೆಳಗ್ಗೆ 9 ರಂದು ಹರಿಹರದ ಪಂಚಮಸಾಲಿ ಮಠ, ಬೆಳ್ಳೊಡಿಯ ಕನಕಗುರುಪೀಠ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9ಕ್ಕೆ ಬೂತ್ ಅಧ್ಯಕ್ಷ ಎರ್ರಿಸ್ವಾಮಿ ಮನೆಗೆ ತೆರಳಿ ಪೇಜ್ ಪ್ರಮುಖರೊಂದಿಗೆ ಸಭೆ ನಡೆಸುವರು. ಬಳಿಕ 11.30ಕ್ಕೆ ತ್ರಿಶೂಲ್ ಕಲಾಮಂದಿರ ದಲ್ಲಿ ಬೂತ್‌ ವಿಜಯ ಅಭಿಯಾನ, ವೃತ್ತಿಪರ, ಪ್ರಭಾವಿ ಮತದಾರರ ಸಭೆಯಲ್ಲಿ  ಭಾಗವಹಿಸುವರು. ಸಂಜೆ ತುಮಕೂರು ಜಿಲ್ಲೆ ಸಿರಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು. ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮಂಜಾನಾಯ್ಕ, ಡಿ.ಎಸ್. ಶಿವಶಂಕರ್, ಸೊಕ್ಕೆ ನಾಗರಾಜ್, ಸಂಗನಗೌಡ್ರು, ಆನಂದರಾವ್ ಶಿಂಧೆ, ಎಚ್.ಪಿ. ವಿಶ್ವಾಸ್, ಶಿವರಾಜ್ ಪಾಟೀಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

click me!