ಜಿಹಾದ್ ಸಂಘಟನೆ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು; ಬಿಜೆಪಿ ಸರಣಿ ಟ್ವೀಟ್

By Ravi JanekalFirst Published Oct 5, 2022, 9:37 AM IST
Highlights

ಕಾಂಗ್ರೆಸ್ ಮತ್ತು ಜಿಹಾದಿ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳು. ದೇಶವನ್ನು ತುಂಡರಿಸುವುದೇ ಅವೆರಡರ ಧ್ಯೇಯ ಎಂದು ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.

ಬೆಂಗಳೂರು (ಅ.5): ಕಾಂಗ್ರೆಸ್ ಮತ್ತು ಜಿಹಾದಿ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳು. ದೇಶವನ್ನು ತುಂಡರಿಸುವುದೇ ಅವೆರಡರ ಧ್ಯೇಯ ಎಂದು ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.

ರಾಜಕೀಯವಾಗಿ ಬಲಿ ಕೊಡಲು ಖರ್ಗೆಗೆ ಎಐಸಿಸಿ ಪಟ್ಟ: ಈಶ್ವರಪ್ಪ

ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಮುಂದುವರಿದರೆ, ಧಾರ್ಮಿಕತೆ ಹೆಸರಿನಲ್ಲಿ ಜಿಹಾದಿ ಸಂಘಟನೆಗಳು ಕಾರ್ಯಚರಿಸುತ್ತಿದ್ದವು. ದೇಶ ತುಂಡರಿಸಲು ಎಷ್ಟೊಂದು ಮುಖವಾಡಗಳು! ದೇಶದಲ್ಲಿ ನಕಲಿ ಗಾಂಧಿ ಕುಟುಂಬ ಉಗ್ರವಾದವನ್ನು ಪೋಷಿಸಿದರೆ ರಾಜ್ಯದಲ್ಲಿ ಅದರ ನೇತೃತ್ವ ವಹಿಸಿಕೊಂಡಿದ್ದು ಸಿದ್ದರಾಮಯ್ಯ. ಸಮಾಜದಲ್ಲಿ ಅಸ್ಥಿರತೆ ಮೂಡಿಸಿ ತಮ್ಮ ವೈಯುಕ್ತಿಕ ಧಾರ್ಮಿಕ ಗುರಿಗಳನ್ನು ಹಿಂಸೆಯ ಮೂಲಕ ಪ್ರತಿಷ್ಠಾಪಿಸುವುದು ಈ ಜಿಹಾದಿಗಳ ಉದ್ದೇಶವಾಗಿತ್ತು. ಇಂತವರಿಗೂ ಕಾಂಗ್ರೆಸ್‌ ಬೆಂಬಲ ನೀಡುತ್ತಿರುವುದೇಕೆ? ಎಂದು ಕಾಂಗ್ರೆಸ್‌ನ್ನ ಪ್ರಶ್ನಿಸಿದೆ.

ಸಹಜ ದೇಶವಾಸಿಗಳ ಸೋಗಿನಲ್ಲಿ ದೇಶದಲ್ಲಿ ಆಂತರಿಕ ಭಯೋತ್ಪಾದನೆ ಸೃಷ್ಟಿಸುವ ಹುನ್ನಾರ ನಡೆಸಿರುವ ಜಿಹಾದಿ ಸಂತತಿಯ ಪಿಎಫ್‌ಐ ಸೇರಿದಂತೆ ಸಮಾಜ ಘಾತುಕ ಸಂಘಟನೆಗಳನ್ನು ಮೋದಿ ಸರ್ಕಾರ ನಿಷೇಧಿಸಿದೆ. ಜಿಹಾದಿ ಮನಸ್ಥಿತಿ ನೆಲೆಯೂರುವಲ್ಲಿ  ಕಾಂಗ್ರೆಸ್ ಪಕ್ಷದ ಪಾತ್ರ, ಸಹಕಾರವಿದೆ.  ಇವರ ಉಗ್ರ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದೇ ಕಾಂಗ್ರೆಸ್ ಎಂದು ನೇರವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ದೇಶ ವಿರೋಧಿ, ಉಗ್ರ ಕೃತ್ಯ, ಕೊಲೆ ಸಂಚು ನಡೆಸುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆ ಕೇಂದ್ರ ಸರ್ಕಾರ ದೇಶದ್ಯಾಂತ ಪಿಎಫ್‌ಐ ಸಂಘಟನೆಗಳ ಮೇಲೆ ದಾಳಿ ನಡೆಸಿ ಕಾರ್ಯಕರ್ತರನ್ನು ಬಂಧಿಸಿತ್ತು. ಪಿಎಫ್‌ಐ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದೆ ಎಂಬ ಸಾಕ್ಷ್ಯಾಧಾರ ದೊರೆತಿರುವ ಹಿನ್ನೆಲೆ ಸಂಘಟನೆಯನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿ. ಸಂಘಟನೆ ನಿಷೇಧ ಮಾಡಿರುವ ಹಿನ್ನೆಲೆ ಇದೊಂದು ಚುನಾವಣೆ ಗಿಮಿಕ್, ಇಷ್ಟು ವರ್ಷ ನಿಷೇಧ ಮಾಡದೆ ಈಗ ಯಾಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿತ್ತು. ಕಾಂಗ್ರೆಸ್ ಅವಧಿಯಲ್ಲೇ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಹುಲುಸಾಗಿ ಬೆಳೆದಿರುವುದು, ಇಂಧಿನ ದೇಶದ ಆಂತರಿಕ ಪರಿಸ್ಥಿತಿ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು.

'ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ.'

click me!