ರಾಜಕೀಯ ಬದ್ಧವೈರಿ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಎಚ್‌ಡಿ ದೇವೇಗೌಡ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಕಾರಣ?
ಬೆಂಗಳೂರು, (ಏ.19): ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ ಅವರು ಕೊರೋನಾದಿಂದ ಗುಣಮುಖರಾಗಿದ್ದು, ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕೃತಜ್ಞತೆ ಪತ್ರ ಬರೆದಿದ್ದಾರೆ.
ಹೌದು...ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ವೇಳೆ ದೇವಗೌಡ್ರ ಆರೋಗ್ಯ ಸುಧಾರಿಸಲಿ ಎಂದು ಪ್ರತಾಪ್ ಸಿಂಹ ಪ್ರಾರ್ಥಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಜಕೀಯ ಬದ್ಧವೈರಿ ಪ್ರತಾಪ್ ಸಿಂಹ ಅವರಿಗೆ ದೇವೇಗೌಡ ಅವರು ಪತ್ರದ ಮೂಲಕ ಕೃತಜ್ಞತೆ ಹೇಳಿದ್ದಾರೆ. ದೊಡ್ಡಗೌಡ್ರ ಬರೆದ ಪತ್ರ ಈ ಕೆಳಗಿನಂತಿದೆ.
ದೇವೇಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್...ಎಚ್‌ಡಿಡಿಗೆ ಮಹತ್ವದ ಸಲಹೆ ಕೊಟ್ಟ ವೈದ್ಯರು
ನಾನು ಮತ್ತು ನನ್ನ ಪತ್ನಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದಾಗ ಯತಾವು ವ್ಯಕ್ತಪಡಿಸಿದ ಆತಂಕ ತೋರಿದ ಕಾಳಜಿಗೆ ನಾನು ಕೃತಜ್ಞ, ತಾವು ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದು, ಹಲವು ಕಾರ್ಯ, ಒತ್ತಡದ ಮಧ್ಯೆ ನನ್ನ ಆರೋಗ್ಯದ ಬಗ್ಗೆ ತಾವು ಯೋಗಕ್ಷೇಮ ವಿಚಾರಿಸಿದ್ದು, ನಿಮ್ಮ ದೊಡ್ಡತನಕ್ಕೆ ಸಾಕ್ಷಿ, ನಿಮ್ಮ ಹಾರೈಕೆ ಹರಕೆಯೊಂದಿಗೆ ನಾವಿಬ್ಬರು ಗುಣಮುಖರಾಗಿದ್ದೇವೆ. ಈ ನಿಮ್ಮ ಸೌಜನ್ಯ ನಡಾವಳಿಗೆ ನಾನು ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದಕ್ಕೆ ಪ್ರತಿಯಾಗಿ ಪ್ರತಾಪ್ ಸಿಂಹ, ಸರ್, ನೀವು ಹೆಸರಿಗಷ್ಟೇ ಅಲ್ಲ, ಗುಣ, ಸೌಜನ್ಯದಲ್ಲೂ ದೊಡ್ಡ ಗೌಡರೇ. ತಾಯಿ ಚಾಮುಂಡೇಶ್ವರಿ ಮತ್ತು ಹಾಸನಾಂಬ ಕೃಪೆ ನಿಮಗಿದೆ. ಧನ್ಯವಾದಗಳು ಹೇಳಿದ್ದಾರೆ.
ಸರ್, ನೀವು ಹೆಸರಿಗಷ್ಟೇ ಅಲ್ಲ, ಗುಣ, ಸೌಜನ್ಯದಲ್ಲೂ ದೊಡ್ಡ ಗೌಡರೇ. ತಾಯಿ ಚಾಮುಂಡೇಶ್ವರಿ ಮತ್ತು ಹಾಸನಾಂಬ ಕೃಪೆ ನಿಮಗಿದೆ. ಧನ್ಯವಾದಗಳು.
Posted by Pratap Simha on Monday, April 19, 2021