ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ

By Govindaraj S  |  First Published Jan 16, 2023, 10:51 PM IST

ಮಾಜಿ ಸಿಎಂ ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ. ಕೊನೆಗೆ ಹೈಕಮಾಂಡ್‌ ಮೇಲೆ ಹಾಕುತ್ತಿದ್ದಾರೆ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಇಲ್ಲಿಗೆ ಕೆಲವರು ಕರೆದುಕೊಂಡು ಬರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 123 ಸೀಟು ಗೆಲ್ಲುವುದು ಖಚಿತ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.


ಕೋಲಾರ (ಜ.16): ಮಾಜಿ ಸಿಎಂ ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ. ಕೊನೆಗೆ ಹೈಕಮಾಂಡ್‌ ಮೇಲೆ ಹಾಕುತ್ತಿದ್ದಾರೆ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಇಲ್ಲಿಗೆ ಕೆಲವರು ಕರೆದುಕೊಂಡು ಬರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 123 ಸೀಟು ಗೆಲ್ಲುವುದು ಖಚಿತ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಎಚ್‌.ಮುನಿಯಪ್ಪರನ್ನು ಸೋಲಿಸಿದವರು ಇವತ್ತು ಕಾಂಗ್ರೆಸ್‌ಗೆ ಮತ ಕೇಳುತ್ತಿದ್ದಾರೆ, ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಣ ಪಡೆದು ಶ್ರೀನಿವಾಸಗೌಡರಿಂದ ಬಿಜೆಪಿಗೆ ಮತ ಹಾಕಿಸಿದರು, ಲೆಹರ್‌ ಸಿಂಗ್‌ರನ್ನು ಗೆಲ್ಲಿಸಿದರು. ಕುಪೇಂದ್ರ ರೆಡ್ಡಿರನ್ನು ಸೋಲಿಸಿದರು, ಕೋಲಾರದಲ್ಲಿ ಕಾಂಗ್ರೆಸ್‌ ಪಾಲಿಟಿಕ್ಸ್‌ ನೆಲೆಕಚ್ಚಿದೆ ಎಂದರು.

Tap to resize

Latest Videos

ಮಕ್ಕಳ ಅನ್ನಕ್ಕೂ ಕುತ್ತು: ಅಕ್ರಮ ಅಕ್ಕಿಯೇ ಮಕ್ಕಳಿಗೆ ಬಿಸಿಯೂಟ ಆಹಾರ!

70 ಸಾವಿರ ಅಂತರದಿಂದ ಗೆಲ್ಲುತ್ತೇವೆ: ಇವತ್ತು ಕೋಲಾರದಲ್ಲಿ ಸಾಮೂಹಿಕ ವಿವಾಹ ಉದ್ಟಾಟನೆಗೆ ಬಂದಿರುವೆ, ಕೋಲಾರ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದೆ, ಕಳೆದ ಬಾರಿ ಶ್ರೀನಿವಾಸಗೌಡ ಜೆಡಿಎಸ್‌ ಪಕ್ಷದಿಂದ 40 ಸಾವಿರ ಮತಗಳಿಂದ ಗೆದಿದ್ದರು, ಈ ಬಾರಿ ಜೆಡಿಎಸ್‌ ಶ್ರೀನಾಥ್‌ ಅವರು 70 ಸಾವಿರ ಮತಗಳು ಬರುವುದು ಖಚಿತ. ಕೋಲಾರ ಜಿಲ್ಲೆ ಕಾಂಗ್ರೆಸ್‌ ಮುಕ್ತವಾಗಲಿದೆ, ಸಿದ್ದರಾಮಯ್ಯ ಬಂದಾಗ 2 ಸಾವಿರ ಜನ ಸೇರಿಸಿಲ್ಲ, 7 ಎಂಎಲ್‌ಎಗಳು ಸೇರಿಸಿ ಕಾರ್ಯಕ್ರಮ ಮಾಡಿದ್ದು 2 ಸಾವಿರ ಸೇರಿಸಲು ಆಗಿಲ್ಲ, ಕಾಂಗ್ರೆಸ್‌ ವರ್ಚಸ್ಸು ಕಳೆದುಕೊಂಡಿದೆ ಎಂದರು.

ಈ ಬಾರಿ ನಾವೇ ಅಧಿಕಾರ ನಾವೇ ಮಾಡುವುದು, ಮುಂದಿನ ಚುನಾವಣೆ ನಂತರ ನಾವು ಬಿಜೆಪಿಯೊಂದಿಗೆ ಸರ್ಕಾರ ರಚನೆ ಇಲ್ಲ, ನಾವೇ ಸಂಪೂರ್ಣ ಬಹುಮತ ಪಡೆಯುತ್ತೇವೆ, ಸ್ಯಾಂಟ್ರೋ ರವಿ ಪ್ರಕರಣ ಸಿಬಿಐ ತನಿಖೆ ಆಗಬೇಕು, ಕಾಂಗ್ರೆಸ್‌ನವರು ಊ ಬಗ್ಗೆ ಬಾಯಿ ಬಿಡತ್ತಿಲ್ಲ, 13 ಶಾಸಕರ ಸಿಡಿ ಇದೆಯಂತೆ. ನಮ್ಮ ಪಕ್ಷ ಸಿಎಂ ಕುಮಾರಸ್ವಾಮಿ ಸಿಎಂ ಅಂತಾ ಹೇಳುತ್ತಿದ್ದೀವೆ ನೀವು ಹೇಳಿ ನೋಡಿ ನೋಡೋಣ ಎಂದು ಕಾಂಗ್ರೆಸ್‌ಗೆ ಇಬ್ರಾಹಿಂ ಸವಾಲು ಹಾಕಿದರು.

ಮಂಡ್ಯ ದೇವೇಗೌಡ ಕ್ಷೇತ್ರ: ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ಕೋಲಾರ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ನೆಂಟಸ್ತನವಿದೆ. ಕುಮಾರಸ್ವಾಮಿ ಸಹ ಒಂದು ಸಂದರ್ಭದಲ್ಲಿ ಸ್ಪರ್ಧೆ ಮಾಡಿದರೆ ಈ ಭಾಗದಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ನಮ್ಮ ಪಕ್ಷ ಮತ್ತು ನಮ್ಮ ಮೇಲೆ ಕೋಲಾರದ ಜನತೆಗೆ ಅಭಿಮಾನವಿದೆ. ಮಂಡ್ಯಗೆ 10 ಬಾರಿ ಅಮಿತಾ ಷಾ ಬಂದರೂ ಅದು ದೇವೇಗೌಡರ ಕ್ಷೇತ್ರವಾಗಿದೆ. ಅಮುಲ್‌ಗೆ ನಂದಿನಿ ಯನ್ನು ಸೇರಿಸುವೆ ಎನ್ನುತ್ತಾರೆ, ಅದು ಯಾರಪ್ಪನ ಆಸ್ತಿ, ನಂದಿನಿಯನ್ನು ಬಡ ರೈತರ ಬೆಳೆಸಿದ್ದಾರೆ. ಅದು ಶಕ್ತಿಯಾಗಿ ಬೆಳೆದಿದೆ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ತಾವೂ ಗೆಲ್ಲುವುದಿಲ್ಲವೆಂದು ಯೋಗೇಶ್ವರ ಹೇಳಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬರವುದಿಲ್ಲ, ಆದರೆ ಅಪರೇಷನ್‌ ಕಮಲ ಆಗುತ್ತೆ, ಅಧಿಕಾರಕ್ಕೆ ತರುವ ಕೆಲಸ ಆಗಲಿದೆ ಎಂದು ಯೋಗೇಶ್ವರ್‌ ಹೇಳಿದ್ದಾರೆ. ಇವರು ಯಾವ ಬಾಯಲ್ಲಿ ಹೇಳುತ್ತಾರೆ. ಗೆಲ್ಲುವ ಆತ್ಮಸ್ಥೈರ್ಯವಿಲ್ಲವೇ ಎಂದು ಪ್ರಜ್ವಲ್‌ ರೇವಣ್ಣ ಕಿಡಿಕಾರಿದರು.

ಜ.17ರಂದು ಹೊಸಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ: ಶಾಸಕ ಪರಮೇಶ್ವರ ನಾಯ್ಕ

ಸಿದ್ದರಾಮಯ್ಯ ಹರಕೆಯ ಕುರಿ: ಹಾಸನದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ದತ್ತ ಅವರು ಕಾಂಗ್ರೆಸ್‌ಗೆ ಹೋದರೆ ಗೆಲುವ ನಂಬಿಕೆಯಿಟ್ಟು ಹೋಗಿದ್ದಾರೆ, ಆದರೆ ಇವತ್ತಿನ ಪರಿಸ್ಥಿಯಲ್ಲಿ ಕಾಂಗ್ರೆಸ್‌ ಮೂರು ಬಾಗಿಲು ಆಗಿದೆ. ಸಿದ್ದು ಕೋಲಾರ ಸ್ಪರ್ಧೆ ಅವರ ವೈಯಕ್ತಿಕ ವಿಷಯ, ಹರಿಕೆ ಕುರಿ ಮಾಡುತ್ತಿದ್ದಾರೆ, ಅವರದ್ದೇ ಪಾರ್ಟಿ ಅವರು ಬಲಿ ಕೊಡಲು ನಿಂತಿದ್ದಾರೆ ಎಂದರು. ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮುಖಂಡರಾದ ಸಿಎಂಆರ್‌ ಶ್ರೀನಾಥ್‌, ಮಲ್ಲೇಶ್‌ಬಾಬು, ಕುರ್ಕಿ ರಾಜೇಶ್ವರಿ, ತೂಪಲ್ಲಿ ಚೌಡರೆಡ್ಡಿ, ಬಣಕನಹಳ್ಳಿ ನಟರಾಜ್‌, ವಕ್ಕಲೇರಿ ರಾಮು, ವಡಗೂರು ರಾಮು, ಮಲಾಂಡ್ಲಹಳ್ಳಿ ಲೋಕೇಶ್‌ ಇದ್ದರು.

click me!