ಸಾಬರು ಭಾರತೀಯರು, ಅವರ ಜನ್ಮ ಭೂಮಿಯೂ ಇದೇ, ಕರ್ಮ ಭೂಮಿಯು ಇದೆ, ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ. ನಾವು ಭಾರತೀಯ ಸಾಬರು, ಈ ದೇಶಕ್ಕೆ ಗಂಡಾಂತರ ಬಂದಾಗ ತಲೆ ಕೊಟ್ಟು ಹೋರಾಡಿದವರು ನಾವೇ ಎಂದು ಜೆ.ಡಿ.ಎಸ್ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಕೋಲಾರ (ಸೆ.19): ಸಾಬರು ಭಾರತೀಯರು, ಅವರ ಜನ್ಮ ಭೂಮಿಯೂ ಇದೇ, ಕರ್ಮ ಭೂಮಿಯು ಇದೆ, ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ. ನಾವು ಭಾರತೀಯ ಸಾಬರು, ಈ ದೇಶಕ್ಕೆ ಗಂಡಾಂತರ ಬಂದಾಗ ತಲೆ ಕೊಟ್ಟು ಹೋರಾಡಿದವರು ನಾವೇ ಎಂದು ಜೆ.ಡಿ.ಎಸ್ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜೆ.ಡಿ.ಎಸ್. ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿ, ಕೇಂದ್ರದ ಬಿಜೆಪಿ ಅಮಿತ್ ಷಾ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಹಿಂದುಗಳು ಮುಸ್ಲಿಮರು ಈ ದೇಶದಲ್ಲಿ ಅಣ್ಣ ತಮ್ಮಂದಿರಂತೆ ಬಾಳ್ವೆ ನಡೆಸುತ್ತಿದ್ದೇವೆ. ಸಿದ್ದರಾಮಯ್ಯನವರಿಗೂ ಒಕ್ಕಲಿಗರಿಗೂ ಆಗದಿದ್ದರೆ ಸಾಬರನ್ನು ಮಧ್ಯಕ್ಕೆ ಏಕೆ ಎಳೆಯಬೇಕು ಎಂದು ಪ್ರಶ್ನಿಸಿದರು. ಈ ರಾಜ್ಯದ ಕನ್ನಂಬಾಡಿ ಕಟ್ಟಲು ಟಿಪ್ಪು ಸುಲ್ತಾನ ತನ್ನ ಮಕ್ಕಳನ್ನೆ ಒತ್ತೆ ಇಟ್ಟ, ರಾಜ್ಯಕ್ಕೆ ರೇಷ್ಮೆ ತಂದ, ಅನೇಕ ದೇವಾಲಯ ಅಭಿವೃದ್ದಿಪಡಿಸಿದ ಇತಿಹಾಸ ಆಳಿಸಿ ಹಾಕಲು ಬಿಜೆಪಿ ಟಿಪ್ಪುವನ್ನೆ ಇತಿಹಾಸದಿಂದ ಮರೆಮಾಚಲು ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ದುರಂತ ಎಂದರು.
ನಾನು ಸಾಬ್ರು, ಜಂಗಮರ ಗಲಾಟೆ ಬಗ್ಗೆ ಮಾತನಾಡಲ್ಲ: ಇಬ್ರಾಹಿಂ
ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಮಾತನಾಡಿ, ಈ ದೇಶದಲ್ಲಿ ಅಲ್ಪಸಂಖ್ಯಾತರು ಸಹ ಭಾರತೀಯರೇ, ಅದರೆ ಇಂದು ಅಲ್ಪಸಂಖ್ಯಾತರು ಆತಂಕ ಪರಿಸ್ಥಿತಿ ಎದುರಿಸುವಂತಾಗಿದೆ. ಭಯಪಡಬೇಡಿ ನಿಮ್ಮ ಜೊತೆ ಕುಮಾರಸ್ವಾಮಿ ಇದ್ದಾರೆ. ಅಲ್ಪಸಂಖ್ಯಾತರು ತುಳಿತಕ್ಕೆ ಒಳಗಾಗಿದ್ದಾರೆ. ದೇಶದಲ್ಲಿ 2 ರಾಜ್ಯಗಳಲ್ಲಿ ಮಾತ್ರ ಕಾಂಗ್ರೇಸ್ ಪಕ್ಷ ಇದ್ದು, ಮುಂದೆ ಕರ್ನಾಟಕದಲ್ಲೂ ಜೆಡಿಎಸ್ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದರು. ಜೆಡಿಎಸ್ ಮುಖಂಡ ಸಿ.ಎಂ.ಆರ್ ಶ್ರೀನಾಥ್, ಮಾಲೂರು ರಾಮೇಗೌಡ, ಮುಳಬಾಗಿಲು ಸಮೃದ್ದಿ ಮಂಜುನಾಥ್, ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಜಮೀರ್ ಆಹಮದ್, ಮಾಜಿ ಸಚಿವ ಎನ್.ಬಿ.ನಭೀ, ಮಹಿಳಾ ಮುಖಂಡರಾದ ನಜ್ಜಾಂ ನಸೀಮ್, ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಇದ್ದರು.
ಸಮಾವೇಶದಲ್ಲಿ ಬಿರಿಯಾನಿ ಗಲಾಟೆ: ನಗರದ ಜೂನಿಯರ್ ಕಾಲೇಜಿನಲ್ಲಿ ಜೆಡಿಎಸ್ ಪಕ್ಷದಿಂದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಬಿರಿಯಾನಿಗಾಗಿ ತಾ ಮುಂದು ತಾಮುಂದು ಕಾರ್ಯಕರ್ತರು ಮುಗಿಬಿದ್ದ ಸಂದರ್ಭದಲ್ಲಿ ಕಾರ್ಯಕರ್ತರನ್ನ ನಿಭಾಯಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಸಮಾವೇಶದ ಹಿನ್ನಲೆಯಲ್ಲಿ ಕ್ಕಾಗಿಯೇ ಸುಮಾರು 2500 ಕೆಜಿ ಚಿಕನ್ ಬಿರಿಯಾನಿ ಸಿದ್ದ ಮಾಡಲಾಗಿತ್ತು. ಬಿರಿಯಾನಿ ಒಂದು ಪಾತ್ರೆ ಖಾಲಿಯಾಗುತಿದ್ದಂತೆ ಕಾರ್ಯಕರ್ತರ ರೋಷಾವೇಶ. ಮತ್ತೊಂದು ಬಿರಿಯಾನಿ ಪಾತ್ರೆ ತರುವಷ್ಟರಲ್ಲಿ ಕಾರ್ಯಕರ್ತರು ಬಿರಿಯಾನಿ ಬಡಿಸುವವರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆಯಿತು.
ವಿಧಾನಸೌಧದಲ್ಲಿ ಚಂಬಲ್ ಡಕಾಯಿತರಿದ್ದಾರೆ: ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಅಲ್ಲಿ ಭಾಗ್ಯಲಕ್ಷ್ಮೇ ತುಂಬಿ ತುಳುಕುತ್ತಿದ್ದಾಳೆ. ಆದರೆ ಚಂಬಲ್ ಡಕಾಯಿತರು ವಿಧಾನಸೌಧದಲ್ಲಿದ್ದಾರೆ. ಈ ನಾಡಿನ ಸಂಪತ್ತು ಲೂಟಿ ಆಗದಂತೆ ತಡೆಯಬೇಕಾದರೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕಾಗಿರುವುದು ನಿಮ್ಮ ಜವಾಬ್ದಾರಿ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕ ನಗರದಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ಕಳೆದ 70 ವರ್ಷದಿಂದ ಅಲ್ಪಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕ್ ಅಗಿ ಬಳಸಿಕೊಂಡಿತೆ ಹೊರತು ಯಾವುದೇ ಸೌಲಭ್ಯ, ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದರು.
ಬಿಜೆಪಿಯಿಂದ ಸಾಮರಸ್ಯ ಹಾಳು: ಬಿಜೆಪಿ ಪಕ್ಷವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ, 370 ಸಿ ತಿದ್ದುಪಡಿ ಕಾಯ್ದೆ, ಹಿಜಾಬ್, ತಲಾಖ್, ಹಲಾಲ್ ಕಟ್, ಜಟಾಕ ಕಟ್, ಹಣ್ಣು ತರಕಾರಿಗಳನ್ನು ಮುಸ್ಲಿಂರ ಬಳಿ ಹಿಂದುಗಳು ಖರೀದಿಸಬಾರದು ಎಂಬುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ಸಾಮರಸ್ಯ ಹಾಳು ಮಾಡಿದೆ. ದೇಶದಲ್ಲಿ ಹಿಂದು ಮುಸ್ಲಿಂ ಸಮುದಾಯದವರು ಅಣ್ಣ ತಮ್ಮಂದಿರಂತಿದ್ದರು. ಆದರೆ ಮತಗಳಿಕೆಗಾಗಿ ಹಿಂದು ಮುಸ್ಲಿಂ ಸಮುದಾಯದಲ್ಲಿ ಭೇದಭಾವ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
Ramanagara: ನೆರೆ ಸಂತ್ರಸ್ತರಿಗೆ 1 ಲಕ್ಷ ಪರಿಹಾರ ನೀಡಿ: ಇಬ್ರಾಹಿಂ
ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್‌ನಲ್ಲಿದ್ದವರು. ಮೋದಿ ನನಗೆ 5 ವರ್ಷಗಳ ಮುಖ್ಯ ಮಂತ್ರಿ ಅಧಿಕಾರ ನೀಡುವುದಾಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದರೂ ಸಹ ನಾನು ಬಿಜೆಪಿಯ ಜೂತೆ ಕೈ ಜೋಡಿಸದೆ ಕಾಂಗ್ರೆಸ್ ಬೆಂಬಲಿಸಿದ್ದೆ. ಕಾಂಗ್ರೆಸ್ ಪಕ್ಷದ ನಿಮ್ಮ ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಕುತಂತ್ರದಿಂದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು 15 ಮಂದಿಯನ್ನು ಬಾಂಬೆಗೆ ಕಳುಹಿಸಿ, ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟರು ಎಂದರು.