ಲೋಕಸಭೆಗಿಂತ, ವಿಧಾನಸಭೆ ಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಭಾವ ಬೀರುತ್ತೆ: ಸಿ.ಎಂ.ಇಬ್ರಾಹಿಂ

By Govindaraj S  |  First Published Oct 4, 2023, 1:01 PM IST

ಲೋಕಸಭೆ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ರಾಯಭಾರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ರಂತೆ ಎಂಬ ಪ್ರಶ್ನೆಗೆ, ಇದ್ದಿದ್ದೇ ಬಿಟ್ಡು ಬಂದಿದ್ದೇನೆ. 


ಬೆಂಗಳೂರು (ಅ.04): ಲೋಕಸಭೆ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ರಾಯಭಾರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ರಂತೆ ಎಂಬ ಪ್ರಶ್ನೆಗೆ, ಇದ್ದಿದ್ದೇ ಬಿಟ್ಡು ಬಂದಿದ್ದೇನೆ. ಹೊಸದಾಗಿ ಯಾವುದಕ್ಕೆ ಆಸೆ ಪಡಲಿ...? ಈ ಮೈತ್ರಿ ಬಗ್ಗೆ ಜೆಡಿಎಸ್‌ನ ಹತ್ತೊಂಬತ್ತು ಶಾಸಕರಿಗೂ ಸಮಾಧಾನ ಇಲ್ಲ. ಅದರಲ್ಲೇ ಹಲವಾರು ಜನ ಇದರ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ನನ್ನ ಜೊತೆ ನೋವು ತೋಡಿಕೊಂಡಿದ್ದಾರೆ. ಈ ಮೈತ್ರಿ ನಮಗೆ ಇಷ್ಟ ಇರಲಿಲ್ಲ ಎಂದು ಹೇಳಿದರು. 

ದೆಹಲಿಗೆ  ಹೋಗಬೇಕಾದ್ರೆ ಒಂದು ಮಾತು ನನಗೂ ಹೇಳಬೇಕಿತ್ತು. ನಾನು ರಾಜ್ಯಾಧ್ಯಕ್ಷ. ಬಿಜೆಪಿಯವರು ಬಿಡಿ (ರಾಜ್ಯಾಧ್ಯಕ್ಷ) ಅವರಿಗೆ ಕರೆದ್ರೂ ಒಂದೇ, ಕರೆಯದಿದ್ರೂ ಒಂದೇ. ಅವರು ನರಸತ್ತವರಂತೆ ಇರ್ತಾರೆ. ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ಇರುತ್ತಾ, ಕೆಲವೊಂದು ವಿಚಾರದಲ್ಲಿ ಇತ್ತು, ಕೆಲವೊಂದು ವಿಚಾರದಲ್ಲಿ ಇರಲಿಲ್ಲ. ನಾನು ಹೊಂದಿಕೊಂಡು ಹೋಗ್ತಾ ಇದ್ದೆ. ಅದರಿಂದಲೇ ಹತ್ತೊಂಭತ್ತು ಗೆದ್ದಿದ್ದೇವೆ. ಮುಂದಿನ ತೀರ್ಮಾನ.? ಜನ ಏನು ಹೇಳ್ತಾರೋ ಕೇಳ್ತೀನಿ. ಹದಿನಾರನೇ ತಾರೀಖು ಸಭೆಯಲ್ಲಿ ನಿರ್ಧಾರ ಆಗುತ್ತೆ ಎಂದರು. 

Tap to resize

Latest Videos

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಮಗೇ ಪ್ಲಸ್ ಆಗುತ್ತೆ: ಸಚಿವ ಜಮೀರ್

ಬಿಜೆಪಿ ಜೊತೆ ಮೈತ್ರಿಗೆ ವಿರೋಧ ಓಕೆ. India ಮೈತ್ರಿ ಕೂಟಕ್ಕೆ ಕರೆಯದೇ ಇದ್ದಿದ್ದು ಅವರ ವಿಚಾರ. ದೇವೇಗೌಡರು ಈ ವಿಚಾರದಲ್ಲಿ ತೀರ್ಮಾನ ಮಾಡಬೇಕಿತ್ತು. ಮೈತ್ರಿಯಿಂದ ಲಾಭವಾ ನಷ್ಟವಾ ಎಂಬ ಪ್ರಶ್ನೆಗೆ ಹಾಳಾದ ಮೇಲೆ ಇವರೇ ಹೇಳ್ತಾರೆ, ಇವರನ್ನು ಕಟ್ಟಿಕೊಂಡು ಹಾಳಾದ್ವಿ ಅಂತ. ಲೋಕಸಭೆಗಿಂತ, ವಿಧಾನಸಭೆ ಮೇಲೆ ಈ ಮೈತ್ರಿ ಪ್ರಭಾವ ಬೀರುತ್ತೆ. ಮುಂದಿನ ಸಲ ಹತ್ತೊಂಬತ್ತು ಸ್ಥಾನ ಕೂಡಾ ಬರಲ್ಲ. ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡ್ತೀನಿ. ಜಾತಿ ಗಣಿತ ಬಿಡುಗಡೆ ಬಿಡುಗಡೆ ಮಾಡಬೇಕು ಎಂದು ಇಬ್ರಾಹಿಂ ಹೇಳಿದರು.

click me!