
ಬೀದರ್, (ಜುಲೈ.29): ಮಂಗಳೂರಿನಲ್ಲಿ ನಡೆದ ಸರಣಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಇಂದು(ಶುಕ್ರವಾರ) ಬೀದರ್‌ನಲ್ಲಿ ಮಾತನಾಡಿದ ಅವರು,ಡಬಲ್ ಇಂಜಿನ್ ಸರಕಾದಲ್ಲಿ ಡಬಲ್ ಡಬಲ್ ಮರ್ಡರ್ ಆಗಿದೆ. ಸೌಜನ್ಯಕ್ಕಾದರೂ ಫಾಜಿಲ್ ಕುಟುಂಬಕ್ಕೆ ಸಿಎಂ ಸಾಂತ್ವಾನ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ತೆವಲು ತೀರಿಸಿಕೊಳ್ಳಲು ಅಮಾಯಕರನ್ನ ಬಲಿ ಕೊಡಬೇಡಿ, ಎಚ್‌ಡಿಕೆ
ಮುಖ್ಯಮಂತ್ರಿಗಳು ಅಲ್ಲಿ ಇದ್ದಾಗಲೇ ಕೊಲೆ ನಡೆದಿದೆ. ಪ್ರವೀಣ್ ಕುಟುಂಬಕ್ಕೆ ಭೇಟಿ ನೀಡಿ ಪರಿಹಾರ ನೀಡಿದ ಮುಖ್ಯಮಂತ್ರಿ ಬಸವರಾಜ್ಬೊಮ್ಮಾಯಿಗೆ ಸ್ವಲ್ಪಾದರೂ ಸೌಜನ್ಯ ಬೇಡ್ವಾ? ಸಿಎಂ ಅವರ ಮನೆಗೆ ಹೋಗಿದ್ದಾರೆ. ಅವತ್ತು ಅಲ್ಲಿ ಇದಾರೂ ಫಾಜಿಲ್ ಕುಟುಂಬಕ್ಕೆ ಸಾಂತ್ವಾನ ಕೂಡ ಹೇಳಲಿಲ್ಲ. ಯಾವುದೇ ಸಮಾಜ ಆದರೇನು ಸೌಜನ್ಯದ ಒಂದು ಹೇಳಬಹುದಾಗಿತ್ತು, ಆದರೆ ಅವರು ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ಒಂದೇ ಒಂದು ಪರಿಹಾರ ಪ್ರಾದೇಶಿಕ ಪಕ್ಷ
ರಾಜ್ಯದಲ್ಲಿ ಸರ್ಕಾರ ಉಳಿದೇ ಇಲ್ಲ, ಬಿಜೆಪಿಯವರೇ ಹೇಳುತ್ತಾರೆ ಉಳಿದಿಲ್ಲ ಎಂದು,. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಕೊಲೆಗಳು ದಿನನಿತ್ಯ ನಡೆಯುತ್ತಿವೆ,. ಗೃಹ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು,. ಬಸವರಾಜ ಬೊಮ್ಮಾಯಿಗೆ ಮುಗಿಸಬೇಕೆಂದು ಮಾಡುತ್ತಿದ್ದಾರೆ ಇವರು ಈ ರೀತಿ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೆಸರು ಕೆಡಿಸಲು ಮಂಗಳೂರಲ್ಲಿ ಕೊಲೆಯಾಗಿವೆ, ಸ್ವ ಪಕ್ಷದವರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೆಸರು ಕೆಡಿಸುತ್ತಿದ್ದಾರೆ. ಮಂಗಳೂರು ಘಟನೆ ಬಗ್ಗೆ ಇಂಟಲಿಜೆನ್ಸಿ ಹಾಗೂ ಗೃಹ ಇಲಾಕೆಯೂ ವಿಫಲವಾಗಿದೆ ಎಂದು ಹೇಳಿದರು.
ರಾಜ್ಯದ ಗುಪ್ತಚರ ಇಲಾಖೆ ಸಮರ್ಥವಾಗಿದೆ, ಆದರೂ ವಿಫಲವಾಗಿದ್ದರ ಬಗ್ಗೆ ಸಿಎಂ ತನಿಕೆ ಮಾಡಲಿ,. ಮಂಗಳೂರಿನ ಇಂಥಹ ಘಟನೆ ನಡೆಯುತ್ತಲೆ ಇವೆ. ಇಲ್ಲಿ ಎರಡು ಸಂಘಟನೆಗಳು ಬಲಿಷ್ಟವಾಗಿವೆ, ಬಸವಾದಿ ಶರಣರು ಬಾಳಿ ಬದುಕಿದ ನಾಡಿದು. ಇಲ್ಲಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿವೆ, ಸಿಎಂ ಜಿಲ್ಲೆಯಲ್ಲಿ ಇರವ ಸಮಯದಲ್ಲಿಯೇ ಕೊಲೆ ಆಗುತ್ತದೆಂದರೆ ಏನು.. ಕಾಂಗ್ರೆಸ್ ಅವಧಿಯಲ್ಲಿ ರೀಟೇಲ್ ನಲ್ಲಿ ಕೊಲೆಯಾಗುತ್ತಿದ್ದವು. ಆದರೆ ಬಿಜೆಪಿ ಅವಧಿಯಲ್ಲಿ ಹೋಲ್ ಸೇಲ್ ನಲ್ಲಿ ಕೊಲೆಯಾಗುತ್ತಿವೆ ಎಂದು ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.