ಜಯಲಲಿತಾ ಮಾರ್ಗ ಅನುಸರಿಸುವತ್ತ ಜೆಡಿಎಸ್ : ಏನದು ಹೊಸ ರಾಜಕೀಯ ತಂತ್ರ?

By Suvarna News  |  First Published Nov 18, 2020, 12:10 PM IST

ಜೆಡಿಎಸ್ ಇದೀಗ ಹೊಸ ರಾಜಕೀಯ ತಂತ್ರ ರೂಪಿಸಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಇನ್ನೇನು ಕೆಲ ದಿನದಲ್ಲಿ ಮತ್ತೆ ಉಪ ಚುನಾವಣೆ ಬರಲಿದ್ದು ಈ ವೇಳೆ ಜಯಲಲಿತಾ ಮಾರ್ಗ ಅನುಸರಿಸಲಿದೆ ಎನ್ನಲಾಗುತ್ತಿದೆ. 


ಬೆಂಗಳೂರು (ನ.18):   ಜಯಲಲಿತಾ ಮಾರ್ಗ ಅನುಸರಿಸುವತ್ತ ಜೆಡಿಎಸ್ ಪಕ್ಷ ಮನಸ್ಸು ಮಾಡುತ್ತಿದೆ. ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ನಡೆಯಂತೆ ನಡೆಯುತ್ತಾ ಎನ್ನುವ ಪ್ರಶ್ನೆ ಮೂಡಿದೆ.

ಉಪ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷ ಸ್ಪರ್ಧೆ ಮಾಡುವ ಬಗ್ಗೆ ಒಲವು ಹೊಂದಿರದಿದ್ದ ಜಯಲಲಿತಾ ತಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಯಾವುದೇ ಉಪ ಚುನಾವಣೆ ಎದುರಾದರೂ ಸ್ಪರ್ಧೆ ಗೆ ಮುಂದಾಗುತ್ತಿರಲಿಲ್ಲ.  ಉಪ ಚುನಾವಣೆಗಳಲ್ಲಿ ಯಾವಾಗಲೂ ಜನರ ಒಲವು ಆಡಳಿತ ಪಕ್ಷದ ಕಡೆ ಇರುತ್ತದೆ. ಹಾಗಾಗಿ ಸ್ಪರ್ಧೆ ಮಾಡಿ , ಮುಖಭಂಗ ಅನುಭವಿಸುವುದಕ್ಕಿಂತ ಸುಮ್ಮನಿರುವುದು ಲೇಸು ಎನ್ನುತ್ತಿದ್ದರು.

Tap to resize

Latest Videos

 ಈಗಾಗಲೇ ಆರ್ ಆರ್ ನಗರ ಮತ್ತು  ಶಿರಾ ಉಪ ಚುನಾವಣೆಗಳಲ್ಲಿ ಸೋಲಿನ ರುಚಿ ಸವಿದ ಜೆಡಿಎಸ್ ನಾಯಕರು ಇಜಯಲಲಿತಾ ಮಾದರಿ ಅನುಸರಿಸಲು ಮುಂದಾಗಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿದೆ.  ಮುಂಬರುವ ಉಪ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದೇ ಇರಲು ತೀರ್ಮಾನಿಸಿದ್ದಾರೆನ್ನಲಾಗುತ್ತಿದೆ. 

ಒತ್ತಾಯಕ್ಕೆ ಒಪ್ಪಿದ್ದ ಅನಿತಾಗೆ ಸಾಕಾಯ್ತು : ರಾಮನಗರದತ್ತ ಹೊರಡಲು ಸಿದ್ಧವಾದ್ರು ನಿಖಿಲ್ ದಂಪತಿ ...

ತಮ್ಮ ನೆಲೆ ಇರುವ ಕ್ಷೇತ್ರಗಳಲ್ಲೇ ಮುಖಭಂಗ ಅನುಭವಿಸಿದ ಜೆಡಿಎಸ್, ಕಾರ್ಯಕರ್ತರ ಬಲವೇ ಇಲ್ಲದ ಉತ್ತರ ಕರ್ನಾಟಕದ ಭಾಗದ ಮುಂದಿನ ಉಪ ಚುನಾವಣೆಗಳಿಂದ ದೂರ ಉಳಿಯುತ್ತಿದೆ ಎನ್ನಲಾಗಿದೆ. 

ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಜೆಡಿಎಸ್ ಆಸಕ್ತಿ ತೋರಿಸಿಲ್ಲ. 

click me!