ಹೊರಟ್ಟಿ ಬೆನ್ನಲ್ಲೇ ಜೆಡಿಎಸ್ ತೊರೆಯಲು ಮುಂದಾದ ಮತ್ತೋರ್ವ ಪ್ರಭಾವಿ ನಾಯಕ..!

Published : May 09, 2022, 04:31 PM IST
ಹೊರಟ್ಟಿ ಬೆನ್ನಲ್ಲೇ ಜೆಡಿಎಸ್ ತೊರೆಯಲು ಮುಂದಾದ ಮತ್ತೋರ್ವ ಪ್ರಭಾವಿ ನಾಯಕ..!

ಸಾರಾಂಶ

* ಜೆಡಿಎಸ್ ತೊರೆಯಲು ಮುಂದಾದ ಮತ್ತೋರ್ವ ಪ್ರಭಾವಿ ನಾಯಕ * ಜೆಡಿಎಸ್ ವರಿಷ್ಠರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಎಂಲ್‌ಸಿ * ಹೊರಟ್ಟಿ ಬೆನ್ನಲ್ಲೇ ಮತ್ತೊಂದು ಜೆಡಿಎಸ್ ವಿಕೆಟ್ ಬೀಳುತ್ತಾ?

ಬೆಂಗಳೂರು, (ಮೇ. 09): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಮದು ವರ್ಷ ಬಾಕಿ ಇದೆ ಆಗಲೇ ಪಕ್ಷಾಂತರ ಪರ್ವ ಶುರುವಾಗಿದೆ. ಈಗಾಗಲೇ ಬಸವರಾಜ್ ಹೊರಟ್ಟಿಯಂತಹ ಜೆಡಿಎಸ್‌ನ ಹಲವು ಘಟಾನುಘಟಿ ನಾಯಕರು ಪಕ್ಷ ತೊರೆದಿದ್ದಾರೆ. ಇದೀಗ ರಿಷತ್ ಸದಸ್ಯ ಮರಿತಿಬ್ಬೇಗೌಡ ಸಹ ಜೆಡಿಎಸ್‌ ತೊರೆಯಲು ಮುಂದಾಗಿದ್ದು, ವರಿಷ್ಠರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು...ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್ ಜಯರಾಂಗೆ ನೀಡುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ಮರಿತಿಬ್ಬೇಗೌಡ ಬೇಸರಗೊಂಡಿದ್ದಾರೆ. ನಮ್ಮ ಯಾರ ಅಭಿಪ್ರಾಯವನ್ನೂ ಕೇಳದೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದು, ರಾಮು ಎಂಬುವರಿಗೆ ಟಿಕೆಟ್ ಘೋಷಿಸಿದ್ದಾರೆ. ಜಯರಾಂ ಬಳಿ ಹಣ ಇಲ್ಲವೆಂದು ರಾಮು ಎಂಬುವರಿಗೆ ಟಿಕೆಟ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ರಾಮು ಬಳಿ ಹಣ ಇರುವ ಕಾರಣಕ್ಕೆ ಮಣೆ ಹಾಕಿದ್ದಾರಾ? ಇಷ್ಟು ವರ್ಷ ಪಕ್ಷಕ್ಕಾಗಿ ದುಡಿಯುತ್ತಿರುವವರ ಮಾತಿಗೆ ಬೆಲೆಯೇ ಇಲ್ಲವೆ? ಶ್ರೀಕಂಠೇಗೌಡ ಕರೆದುಕೊಂಡು ಬಂದ ವ್ಯಕ್ತಿಗೆ ಅವಕಾಶ ನೀಡಿದ್ದಾರೆ. ಇದು ನಿಜಕ್ಕೂ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಮಧ್ವರಾಜ್‌, ವರ್ತೂರ್‌ ಸೇರಿದಂತೆ ಸಪ್ತ ನಾಯಕರು ಕಮಲ ತೆಕ್ಕೆಗೆ!

ಮುಂದೆ ಪಕ್ಷದ ನಾಯಕರನ್ನು ಭೇಟಿ ಮಾಡುವುದಿಲ್ಲ. ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆಯೇ ಇಲ್ಲವೆಂದಾದ ಮೇಲೆ ಯಾಕೆ ಭೇಟಿ ಮಾಡಬೇಕು? ಇಂದು ಜೆಡಿಎಸ್ ದಿನೇ ದಿನೇ ಕುಗ್ಗುತ್ತಿರುವುದಕ್ಕೆ ಪಕ್ಷದ ನಾಯಕರೇ ನೇರ ಹೊಣೆ ಎಂದು ಆರೋಪಿಸಿದರು. 

 ಜೆಡಿಎಸ್​ ನಾಯಕರ ಕೆಟ್ಟ ನಿರ್ಧಾರಕ್ಕೆ ನನ್ನ ಬೆಂಬಲ ಕೊಡಲ್ಲ. ನಾನು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಕೇಳೋದಿಲ್ಲ. ಯಾರಿಗೆ ಚುನಾವಣೆ ಮಾಡಬೇಕು ಅಂತ ನೋಟಿಫಿಕೇಷನ್ ಬಳಿಕ ತೀರ್ಮಾನ ಮಾಡ್ತೀವಿ ಎಂದರು. ಆ ಮೂಲಕ ಜೆಡಿಎಸ್​ನಿಂದ ಹೊರ ಹೋಗುವ ಮುನ್ಸೂಚನೆ ಕೊಟ್ಟಿದ್ದಾರೆ.

ಸಚಿವರ ಕಚೇರಿ ಮುಂದೆ ಮರಿತಿಬ್ಬೇಗೌಡ‌ ಧರಣಿ
ಪದವಿ ತರಗತಿಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ಮೌಲ್ಯಮಾಪನ ಪ್ರಾರಂಭವಾಗಿದೆ. ಏಳೆಂಟು ವರ್ಷಗಳಿಂದ ನಿಯೋಜನೆ ಮೇಲೆ ಇದ್ದ 1000 ಹೆಚ್ಚು ಮಂದಿ ಪ್ರಾಧ್ಯಾಪಕರ ನಿಯೋಜನೆ ರದ್ದು ಮಾಡಿದ್ದಾರೆ. ಮಧ್ಯ ರಾತ್ರಿಯಲ್ಲಿ ಈ‌ ಆದೇಶ ಮಾಡಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ ಎಂದು ಪರಿಷತ್ ಸದಸ್ಯ ಮರಿತಿಬ್ಬೇಗೌಡ‌ ಹೇಳಿದ್ದಾರೆ.

ಸಚಿವ ಅಶ್ವತ್ಥ ನಾರಾಯಣ ಕಚೇರಿ ಮುಂದೆ ಧರಣಿ ನಡೆಸಿ, ಪದವಿ ಕಾಲೇಜುಗಳ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ನಿಯೋಜನೆ ರದ್ದು ಹಾಗೂ ಕಡ್ಡಾಯ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇವರು ಬಿಡುಗಡೆಗೊಂಡ ಬಳಿಕ ಇವರ ಸ್ಥಾನದಲ್ಲಿ ನಿಯೋಜನೆಗೊಂಡ ಅಥಿತಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಾರೆ. ನಿಯೋಜನೆ ರದ್ದು ಮಾಡಿದ್ದರಿಂದ ಅವರ ಜಾಗಕ್ಕೆ ಮೂರು ಸಾವಿರ ಅಥಿತಿ ಉಪನ್ಯಾಸಕರನ್ನು ನೇಮಕ ಮಾಡಬೇಕಾಗುತ್ತದೆ ಎಂದರು.

ನಿಯೋಜನೆ ರದ್ದು ಮಾಡಿ‌ ಮೂಲ ಸ್ಥಾನಕ್ಕೆ ಕಳುಹಿಸುವ ಬಗ್ಗೆ ವಿರೋಧ ಇಲ್ಲ. ಆದರೆ, ಹತ್ತಾರು ವರ್ಷಗಳಿಂದ ನಿಯೋಜನೆಗೊಂಡಿದ್ದ ಅಷ್ಟು ಜನರನ್ನು ಒಮ್ಮೆಲೆ ರದ್ದು ಮಾಡುವುದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ.ಈ ನಿಟ್ಟಿನಲ್ಲಿ ಮೂರು ಹಂತದಲ್ಲಿ ಈ ಪ್ರಕ್ರಿಯೆ ಮಾಡಬೇಕಿತ್ತು. ಇದರಲ್ಲಿ ವಿಕಲ ಚೇತನರು, ಪತಿ ಪತ್ನಿ ಪ್ರಕರಣದವರು, ಕ್ಯಾನ್ಸರ್ ರೋಗಿಗಳು ಇದ್ದಾರೆ. ನಿಯೋಜನೆ ರದ್ದು ಸಂದರ್ಭದಲ್ಲಿ ಇದನ್ನು ಪರಿಗಣಿಸಿಲ್ಲ ಎಂದು ಸಚಿವರಿಗೆ ಪತ್ರ ಬರೆದಿದ್ದೆ, ಸಭೆ ಕರೆದು ಚರ್ಚಿಸುವಂತೆ ಮನವಿ ಮಾಡಿದ್ದೆ. ಆ ಪತ್ರಕ್ಕೆ ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ