
ಬೆಂಗಳೂರು (ಮೇ.09): ‘ಸಿದ್ರಾಮಣ್ಣನಷ್ಟು (Siddaramaiah) ಭ್ರಷ್ಟಾಚಾರಿ ಈ ರಾಜ್ಯದಲ್ಲಿ ಬೇರೆ ಯಾರೂ ಇರಲಿಲ್ಲ’ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Katil) ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಪಾದನೆ ಮಾಡಿದ್ದಾರೆ. ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅರ್ಕಾವತಿ ಮತ್ತು ರೀಡು ಕುರಿತ ಕೆಂಪಣ್ಣ ಆಯೋಗದ ವರದಿಯನ್ನು ಹೊರಹಾಕಿದರೆ ಸಿದ್ರಾಮಣ್ಣ ಶಾಶ್ವತವಾಗಿ ಜೈಲಲ್ಲಿ ಇರುತ್ತಾರೆ.
ಅದನ್ನು ಹೊರಕ್ಕೆ ಹಾಕುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ ಎಂದರು. ಹಾಸಿಗೆ ಹಗರಣ, ದಿಂಬಿನ ಹಗರಣ, ಹಾಸ್ಟೆಲ್ ಹಗರಣ, ಪಿಡಬ್ಲ್ಯುಡಿ ಹಗರಣ, ಬೋರ್‌ವೆಲ್ ಹಗರಣ, ಮೆಡಿಕಲ್ ಹಗರಣ ಸೇರಿದಂತೆ ಹತ್ತು ಹಲವು ಹಗರಣಗಳು ನಡೆದಿದ್ದು ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ. ಗಣಪತಿ ಆತ್ಮಹತ್ಯೆ ಆಗಿ ಏಳು ತಿಂಗಳ ಬಳಿಕ ಹಾಗೂ ಕೋರ್ಚ್ ಸೂಚಿಸಿದ್ದರಿಂದ ಸಚಿವ ಜಾಜ್‌ರ್ ರಾಜೀನಾಮೆ ಕೊಟ್ಟರು. ಯಾವುದೇ ಹಗರಣಗಳ ತನಿಖೆಗೆ ಸಿದ್ರಾಮಣ್ಣ ಸರಕಾರ ಮುಂದಾಗಲಿಲ್ಲ ಎಂದು ಟೀಕಿಸಿದರು. ಅಧಿಕಾರವನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡಬೇಡಿ.
ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಮಾತು, ಸಂಕಷ್ಟಕ್ಕೆ ಸಿಲುಕಿದ ಯತ್ನಾಳ್
ಇದೊಂದು ಈಶ್ವರೀಯ ಕಾರ್ಯ. ಕಾಂಗ್ರೆಸ್‌ನಲ್ಲಿ ಒಂದು ಕುಟುಂಬದ ವ್ಯಕ್ತಿಗಳಿಗೆ ಜೈಕಾರ ಕೂಗಲಾಗುತ್ತದೆ. ಆದರೆ, ಕೌಟುಂಬಿಕವಾಗಿ ಇಲ್ಲದ ಬಿಜೆಪಿ ಬೆಳೆಯುತ್ತಾ ಸಾಗಿದೆ. ಜಗತ್ತಿನ ಅತಿ ದೊಡ್ಡ ಪಕ್ಷವಾಗಿದೆ. ಒಂದೆಡೆ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ. ಇದೀಗ ಮೋದಿ ಯುಗ ಪ್ರಾರಂಭವಾಗಿದೆ ಎಂದರು. ಕಾಂಗ್ರೆಸ್‌ಗೆ ರಾಜ್ಯ ಪದಾಧಿಕಾರಿಗಳ ಘೋಷಣೆಗೇ ಎರಡು ವರ್ಷ ಬೇಕಾಯಿತು. ಅದು ರಾಜ್ಯದಲ್ಲಿ ಸತ್ತು ಹೋಗಿದೆ. ಒಂದು ಪಕ್ಷ ನಡೆಸಲು ಅಸಾಧ್ಯವಾದ ಮುಖಂಡರಿಗೆ ಮುಂದಿನ ದಿನಗಳಲ್ಲಿ ಸರಕಾರ ನಡೆಸಲು ಸಾಧ್ಯವೇ?
ಕಾಂಗ್ರೆಸ್ ಐಸಿಯು ಒಳಗಿದೆ. ಚುನಾವಣೆಗೆ ಮೊದಲು ಅದು ಸತ್ತು ಹೋಗಲಿದೆ. ಕಾಂಗ್ರೆಸ್ ಪಕ್ಷದ ಒಳಜಗಳದಿಂದ ಬೂತ್‌ಗೆ ಒಬ್ಬ ಪ್ರಧಾನ ಕಾರ್ಯದರ್ಶಿ ನೇಮಕ ಆದರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದರು. ನಾವು ರಾಜಕಾರಣದ ಮೂಲಕ ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಪಕ್ಷವು ವ್ಯಕ್ತಿತ್ವ ಮತ್ತು ಚಾರಿತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ವ್ಯಕ್ತಿತ್ವ ಮತ್ತು ಚಾರಿತ್ರ್ಯ ಒಂದೇ ನಾಣ್ಯದ ಎರಡು ಮುಖಗಳು. ಚಾರಿತ್ರ್ಯ ಮತ್ತು ವ್ಯಕ್ತಿಗಳ ಮೂಲಕವೇ ನಾವು ದೇಶ ನಿರ್ಮಾಣಕ್ಕೆ ಹೊರಟಿದ್ದೇವೆ ಎಂದರು.
ಹುಬ್ಬಳ್ಳಿ ಗಲಭೆಗೆ ಸಿದ್ದರಾಮಯ್ಯ ಪ್ರೇರಣೆ: ನಳಿನ್ ಕುಮಾರ್ ಕಟೀಲ್
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅತಿ ಹೆಚ್ಚು ಶಾಸಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ಪಟ್ಟಿಮಾಡಲು ಪುರುಸೊತ್ತಿಲ್ಲದಷ್ಟುಮುಖಂಡರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ.
-ನಳಿನ್‌ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.