
ಬೆಳಗಾವಿ (ಮೇ.09): ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ಉಚಿತವಾಗಿ (Rice) ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಘೋಷಿಸಿದರು. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಅಗತ್ಯವಸ್ತು ಬೆಲೆ ದುಪ್ಪಟ್ಟಾಗಿದೆ.
ಒಂದು ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ಲೂಟಿ ಹೊಡೆಯುವುದು ನಡೆಯುತ್ತಿದೆ. ಪಿಎಸ್‌ಐ ನೇಮಕಾತಿಯಲ್ಲಿ (PSI Recruitment Scam) ಸುಮಾರು .300 ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಇಂಥ ಸರ್ಕಾರ ಯಾವುದೇ ಕಾರಣಕ್ಕೂ ಇರಬಾರದು, ಇಂಥ ಸರ್ಕಾರವನ್ನು ಬೇರು ಸಮೇತ ಕಿತ್ತು ಎಸೆದಾಗ ದೇಶ, ನಾವು, ನೀವು ಉಳಿಯುತ್ತೇವೆ. ಈ ಸರ್ಕಾರಕ್ಕೆ ಕಣ್ಣು ಕಾಣಿಸಲ್ಲ, ಕಿವಿಯೂ ಕೇಳಿಸಲ್ಲ. ಈ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾಮೃಗದ ಚರ್ಮ ಎಂದು ತೀವ್ರ ಕಿಡಿಕಾರಿದರು.
Karnataka Politics: ಸಿದ್ರಾಮಣ್ಣನಷ್ಟು ಭ್ರಷ್ಟಾಚಾರಿ ಈ ರಾಜ್ಯದಲ್ಲಿ ಬೇರಿಲ್ಲ: ನಳಿನ್ ಕುಮಾರ್ ಕಟೀಲ್
ಕೈ ಜೋಡಿಸಿ ಕೇಳುವೆ ಮತ್ತೆ ಅವಕಾಶ ಕೊಡಿ: ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಮತ್ತೆ ಕಾಂಗ್ರೆಸ್‌ಗೆ (Congress) ಅವಕಾಶ ಕೊಡಿ. ಕೊರೋನಾ (Corona) ಕಾಲದಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಇಲ್ಲದಿದ್ದರೆ ಜನ ಬದುಕಲು ಆಗುತ್ತಿತ್ತಾ? ರಾಜ್ಯದಲ್ಲೀಗ ಜನ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರಿಯಬಾರದು ಎಂದು ಆಕ್ರೋಶ ಹೊರಹಾಕಿದರು.
ನೇಕಾರರ ಸಾಲ ಮನ್ನಾ ಮಾಡಿದ್ದು ನಾನು. ಬಿ.ಎಸ್.ಯಡಿಯೂರಪ್ಪ (BS Yediyurappa) ಮತ್ತು ಬೊಮ್ಮಾಯಿ (Basavaraj Bommai) ಅವರು ಒಂದೇ ಒಂದು ರುಪಾಯಿ ಸಾಲ ಮನ್ನಾ ಮಾಡಿದ್ದನ್ನು ತೋರಿಸಲಿ ಎಂದು ಸವಾಲು ಹಾಕಿದ ಅವರು, ಪ್ರವಾಹ ಬಂದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಕೊಡಿ ಎಂದು ಯಡಿಯೂರಪ್ಪಗೆ ಹೇಳಿದೆ. ಆದರೆ, ಅವರು ಕೊಡಲೇ ಇಲ್ಲ. ಬಸವರಾಜ ಬೊಮ್ಮಾಯಿ ಕೂಡ ನಿರ್ಲಕ್ಷ್ಯ ಮಾಡಿದರು. ಬಸವರಾಜ ಬೊಮ್ಮಾಯಿ ಚುನಾಯಿತ ಮುಖ್ಯಮಂತ್ರಿ ಅಲ್ಲ, ನೇಮಕಗೊಂಡ ಮುಖ್ಯಮಂತ್ರಿ ಎಂದು ಲೇವಡಿ ಮಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ. ಇವರ ಜನ್ಮಕ್ಕೆ ಒಂದು ಮನೆ ಕಟ್ಟಿಸಿಕೊಡಲೂ ಆಗಿಲ್ಲ. ಏಳು ಕೆ.ಜಿ. ಅಕ್ಕಿಯನ್ನು ನಾನು ಉಚಿತವಾಗಿ ಕೊಟ್ಟಿದ್ದೆ. ಈಗ ಅವರು ಅದರಲ್ಲೂ ಎರಡು ಕೆ.ಜಿ. ಕಡಿಮೆ ಮಾಡಿದ್ದಾರೆ. ಮುಂದೇನು ಮಾಡ್ತಾರೋ ಗೊತ್ತಿಲ್ಲ ಎಂದರು ಸಿದ್ದರಾಮಯ್ಯ.
ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಜೆಡಿಎಸ್ ಸಜ್ಜು, ಎಚ್‌ಡಿಕೆಗೆ ಬಾದಾಮಿಯೇ ಟಾರ್ಗೆಟ್
ನೇಕಾರರ ಸಾಲ ಮನ್ನಾ ಮಾಡಿದ್ದು ನಾನು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಒಂದೇ ಒಂದು ರುಪಾಯಿ ಸಾಲ ಮನ್ನಾ ಮಾಡಿದ್ದನ್ನು ತೋರಿಸಲಿ. ಪ್ರವಾಹ ಬಂದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ, ಪರಿಹಾರ ಕೊಡಿ ಎಂದು ಯಡಿಯೂರಪ್ಪಗೆ ಹೇಳಿದೆ. ಆದರೆ, ಅವರು ಕೊಡಲೇ ಇಲ್ಲ. ಬೊಮ್ಮಾಯಿ ಕೂಡ ನಿರ್ಲಕ್ಷ್ಯ ಮಾಡಿದರು.
-ಸಿದ್ದರಾಮಯ್ಯ, ವಿಪಕ್ಷ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.