ರಾಜೀನಾಮೆ ಸುಳಿವು ಕೊಟ್ಟ ಬೆನ್ನಲ್ಲೇ ಬಿಎಸ್‌ವೈಗೆ ಜೆಡಿಎಸ್‌ ಸೇರುವಂತೆ ಬಂತು ಆಹ್ವಾನ

By Suvarna NewsFirst Published Jul 22, 2021, 4:52 PM IST
Highlights

* ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ
* ಸಿಎಂ ಸ್ಥಾನಕ್ಕೆ ರಾಜೀನಾಮೆ ಸುಳಿವು ನೀಡಿದ ಬಿಎಸ್‌ ಯಡಿಯೂರಪ್ಪ
* ಇದರ ಬಿಎಸ್‌ವೈಗೆ ಬೆನ್ನಲ್ಲೇ ಜೆಡಿಎಸ್ ಪಕ್ಷಕ್ಕೆ ಆಹ್ವಾನ 

ಹಾಸನ, (ಜು.22): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಖಚಿತವಾಗಿದ್ದು, ಸ್ವತಃ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.  ಇದರ ಬೆನ್ನಲ್ಲೇ ಯಡಿಯೂರಪ್ಪಗೆ ಜೆಡಿಎಸ್‌ಗೆ ಆಹ್ವಾನ ಬಂದಿದೆ.

ಹೌದು...  ಅವಧಿ ಮುಗಿಯುವವರೆಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಸಿಎಂ ಯಡಿಯೂರಪ್ಪ ಅವರನ್ನ ಬದಲಾವಣೆ ಮಾಡಬಾರದು. ಬದಲಾವಣೆ ಮಾಡಿದರೆ ಬಿ.ಎಸ್.ಯಡಿಯೂರಪ್ಪ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರ ಜತೆ ಸೇರಿ ಪ್ರಬಲ ಪ್ರಾದೇಶಿಕ ಪಕ್ಷ ಕಟ್ಟಲಿ ಎಂದು ಜೆಡಿಎಸ್ ಶಾಸಕ ಲಿಂಗೇಶ್ ಸಲಹೆ ನೀಡಿದರು.

ನಾಯಕತ್ವ ಬದಲಾವಣೆ: ದೇಶಕ್ಕೆ ಮೋದಿ, ರಾಜ್ಯಕ್ಕೆ ಸವದಿ

ಬೇಲೂರಿನಲ್ಲಿ  ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆ ಬೇಸರ ತರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸುತ್ತಿವೆ. ಸಂಪೂರ್ಣ ಅಧಿಕಾರವಿದ್ದರೆ ಯಾರಾದರೂ ಸಾಧನೆ ಮಾಡಬಹುದು. ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ನಾಯಕತ್ವ ಬದಲಾವಣೆ ತಂದು ರಾಜಕೀಯ ದೊಂಬರಾಟ ಸೃಷ್ಟಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸೈದ್ಧಾಂತಿಕವಾಗಿ ನಾವು ಬಿಜೆಪಿಯನ್ನು ವಿರೋಧಿಸುತ್ತೇವೆ. ಆದರೆ ವೈಯುಕ್ತಿಕವಾಗಿ ಅಧಿಕಾರ ಮುಗಿಯುವವರೆಗೂ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು. ಬದಲಾವಣೆ ಮಾಡಿದರೆ ದೇವೇಗೌಡರು, ಯಡಿಯೂರಪ್ಪ ಸೇರಿ ಪ್ರಾದೇಶಿಕ ಪಕ್ಷ ಕಟ್ಟಬೇಕು. ಪಕ್ಷಗಳಿಂದ ಹೊರಬರುವ ಎಲ್ಲಾ ಶಾಸಕರನ್ನು ಪ್ರಾದೇಶಿಕ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಲಿಂಗೇಶ್ ಪರೋಕ್ಷವಾಗಿ ಸಿಎಂ ಯಡಿಯೂರಪ್ಪರನ್ನ  ಜೆಡಿಎಸ್ ಪಕ್ಷಕ್ಕೆ ಆಹ್ವಾನ ಕೊಟ್ಟರು.

click me!