ಹೊಸ ಪ್ಲಾನ್ : ಜೆಡಿಎಸ್ ಪಕ್ಷ ವಿಸರ್ಜನೆ ಬಗ್ಗೆ ಮಾತಾಡಿದ ಎಚ್‌ಡಿಕೆ

By Kannadaprabha News  |  First Published Jan 19, 2021, 9:48 AM IST

ಜೆಡಿಎಸ್  ಮುಖಂಡರು ಹೊಸ ಪ್ಲಾನ್ ಮಾಡುತ್ತಿದ್ದು ಪಂಚ ರತ್ನ ಐಡಿಯಾಗಳನ್ನು ಮಾಡಿದ್ದಾರೆ. ಇದೇ ವಳೆ ಪಕ್ಷ ವಿಸರ್ಜನೆ ಬಗ್ಗೆಯೂ ಮಾತನಾಡಿದ್ದಾರೆ. 


 ಬೆಂಗಳೂರು (ಜ.19):  2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಂತ್ರವಾಗಿ ಜೆಡಿಎಸ್‌ ಅಧಿಕಾರದ ಗದ್ದುಗೆ ಹಿಡಿದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈಗಲೇ ಹಲವು ಯೋಜನೆಗಳ ಜಾರಿಗೆ ರೂಪರೇಷೆಗಳನ್ನು ರೂಪಿಸಿಕೊಂಡಿದ್ದು, ‘ಪಂಚರತ್ನ’ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾದರೆ ಪಕ್ಷವನ್ನೇ ವಿಸರ್ಜಿಸುವ ಶಪಥ ಮಾಡಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನನ್ನದೇ ಆಲೋಚನೆಗಳನ್ನು ಮಾಡಲಾಗಿದ್ದು, ‘ಪಂಚರತ್ನ’ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಸೂರು, ವಿದ್ಯೆ, ಉದ್ಯೋಗ, ಆರೋಗ್ಯ ಮತ್ತು ರೈತರಿಗೆ ಸಾಲಮುಕ್ತ ಬದುಕು ಎಂಬ ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

Tap to resize

Latest Videos

ಸುಪ್ರೀಂ ಬಿಗ್ ಶಾಕ್: ಕುಮಾರಸ್ವಾಮಿಗೆ ಎದುರಾಯ್ತು ಸಂಕಷ್ಟ..!

ಈ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಜನರ ಮುಂದೆ ಹೋಗಲಾಗುವುದು. ಜಾತಿ, ಹಣದ ವ್ಯಾಮೋಹ ಬಿಟ್ಟು ಮತ ಹಾಕುವಂತೆ ಕೇಳುತ್ತೇವೆ. ಒಂದು ವೇಳೆ ಐದು ವರ್ಷದ ಅವಧಿಯಲ್ಲಿ ಪಂಚರತ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದಿದ್ದರೆ ಪಕ್ಷವನ್ನೇ ವಿಸರ್ಜನೆಗೊಳಿಸುತ್ತೇನೆ ಎಂದರು.

1. ಸೂರು

2. ವಿದ್ಯೆ

3. ಉದ್ಯೋಗ

4. ಆರೋಗ್ಯ

5. ರೈತರಿಗೆ ಸಾಲಮುಕ್ತ ಬದುಕು

click me!