ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಕೊಂಚ ಕೊಂಚವೇ ಜೆಡಿಎಸ್ ನಿಂದ ದೂರ ಸರಿಯುತ್ತಿದ್ದಾರೆ. ಇದೀಗ ವೀಕ್ಷಕರ ಪಟ್ಟಿಯಿಂದಲೂ ಅವರು ದೂರ ಉಳಿದಿದ್ದಾರೆ.
ಬೆಂಗಳೂರು (ಜ.19): ಜೆ ಡಿ ಎಸ್ ರಾಜ್ಯ ವೀಕ್ಷಕರ ಪಟ್ಟಿ ಬಿಡುಗಡೆಯಾಗಿದ್ದು, ಮೈಸೂರು ವಿಭಾಗದ ವೀಕ್ಷಕರ ಪಟ್ಟಿಯಲ್ಲಿ ಶಾಸಕ ಜಿ ಟಿ ದೇವೇಗೌಡಗೆ ಸ್ಥಾನ ನೀಡಿಲ್ಲ.
ಜೆಡಿಎಸ್ ವೀಕ್ಷಕರ ಪಟ್ಟಿಯಲ್ಲಿ ಜೆಡಿಎಸ್ ಶಾಸಕ ಮಾಜಿ ಸಚಿವ ಜಿ ಟಿ ದೇವೇಗೌಡ ಪುತ್ರ ಹರೀಶ್ ಗೌಡ ಶಾಸಕ ಮಹದೇವ್‌ಗೂ ಯಾವುದೇ ಸ್ಥಾನ ನೀಡಿಲ್ಲ.
ಬಿಡುವವರು ಪಕ್ಷ ಬಿಡಲಿ : ಜಿಟಿಡಿಗೆ ಎಚ್ಡಿಕೆ ಟಾಂಗ್ ...
ಮೈಸೂರು ವಿಭಾಗಕ್ಕೆ ಸಾರಾ ಮಹೇಶ್, ಎಚ್ ಡಿ ರೇವಣ್ಣ, ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಅನ್ನದಾನಿ, ಅಬ್ಬುಲ್ ಅಜೀಜ್, ಜಫರುಲ್ಲಾ ಖಾನ್, ಅಶ್ವಿನ್ ಕುಮಾರ್ ಕೋಟೆ ಚಿಕ್ಕಣ್ಣಗೆ ಸ್ಥಾನ ನೀಡಲಾಗಿದೆ.
ಕೆಲ ದಿನಗಳಿಂದ ಜೆ ಡಿ ಎಸ್‌ನಿಂದ ದೂರು ಉಳಿದಿರುವ ಜಿ ಟಿ ದೇವೇಗೌಡರನ್ನು ಇದೀಗ ಪಕ್ಷವು ದೂರ ಸರಿಸಿದಂತೆ ಕಾಣುತ್ತೊದೆ. ಇನ್ನು ಜಿಟಿಡಿ ಜೆಡಿಎಸ್ ಕೋರ್ ಕಮಿಟಿ ಸಭೆಗೂ ಕೂಡ ಗೈರು ಹಾಜರಾಗಿದ್ದರು.