ಅಡ್ಡಮತದಾನ: ಸ್ವಪಕ್ಷ ಶಾಸಕ ಗುಬ್ಬಿ ಶ್ರೀನಿವಾಸ್‌ಗೆ ಬಿಸಿ ಮುಟ್ಟಿಸಿಲು ಮುಂದಾದ ಜೆಡಿಎಸ್...!

By Suvarna News  |  First Published Jun 10, 2022, 5:52 PM IST

* ಶಾಸಕ ಶ್ರೀನಿವಾಸ್ ಗೌಡ ವಿರುದ್ದ ಶಿಸ್ತು ಕ್ರಮಕ್ಕೆ ಮುಂದಾದ ಜೆಡಿಎಸ್
* ಶ್ರೀನಿವಾಸ್ ಗೌಡ ಅಮಾನತು ಮಾಡಲು ನಿರ್ಧಾರ ಮಾಡಿರೋ ಜೆಡಿಎಸ್?
* ಪಕ್ಷದ ವರಿಷ್ಠ ದೇವೇಗೌಡರ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ


ಬೆಂಗಳೂರು, (ಜೂನ್.10): ಜೆಡಿಎಸ್ ನಾಯಕರಿಗೆ ಗುಬ್ಬಿ ಶ್ರೀನಿವಾಸ್ ಶಾಕ್ ಕೊಟ್ಟಿದ್ದಾರೆ. ಇಂದು(ಶುಕ್ರವಾರ) ರಾಜ್ಯಸಭಾ ಚುನಾವಣೆಯಲ್ಲಿ ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದಾರೆ ಎಂದು ತಿಳಿಸಿದುಬಂದಿದೆ.

ಖಾಲಿ ಪೇಪರ್ ಅನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿದ್ದಾರೆ ಎಂದು ಸ್ವತಃ ಜೆಡಿಎಸ್‌ ಶಾಸಕಾಂಗ ನಾಯಕ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ. ಸಾಯಂಕಾಲ ಇವರ ಹಣೆಬರಹ ಗೊತ್ತಾಗುತ್ತದೆ. ನಮ್ಮ ಪಕ್ಷದಲ್ಲಿ ನಿಂತು ನಮಗೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಖಾಲಿ ಡಬ್ಬಾ: ಕುಮಾರಸ್ವಾಮಿಗೆ ಜೆಡಿಎಸ್‌ ಶಾಸಕ ಗುಬ್ಬಿ ಶ್ರೀನಿವಾಸ್ ಓಪನ್ ಚ್ಯಾಲೆಂಜ್‌ 

ಕ್ರಮಕ್ಕೆ ಮುಂದಾದ ಜೆಡಿಎಸ್?
ಹೌದು...ಅಡ್ಡಮತದಾನ ಮಾಡಿದ ಆರೋಪದ ಮೇಲೆ ಗುಬ್ಬಿ ಶ್ರೀನಿವಾಸ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜೆಡಿಎಸ್‌ ಹಿರಿಯ ನಾಯಕರು ಮುಂದಾಗಿದ್ದಾರೆ. ಶ್ರೀನಿವಾಸ್ ಗೌಡ ಅಮಾನತು ಮಾಡಲು ನಿರ್ಧಾರ ಮಾಡಿದ್ದು, ಪಕ್ಷದ ವರಿಷ್ಠ ದೇವೇಗೌಡರ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಖಾಲಿ ಡಬ್ಬಾ: ಕುಮಾರಸ್ವಾಮಿಗೆ ಜೆಡಿಎಸ್‌ ಶಾಸಕ ಗುಬ್ಬಿ ಶ್ರೀನಿವಾಸ್ ಓಪನ್ ಚ್ಯಾಲೆಂಜ್‌

ಅಲ್ಲದೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಗುಬ್ಬಿ ಶ್ರೀನಿವಾಸ್ ವಿರುದ್ಧ ದೂರು ನೀಡಲು ಚಿಂತನೆ ನಡೆದಿದ್ದು, ದೇವೇಗೌಡರ ಜೊತೆ ಚರ್ಚೆ ಬಳಿಕ ಪಕ್ಷದಿಂದ ಅಂತಿಮ ತೀರ್ಮಾನ ಸಾಧ್ಯತೆ ಇದೆ.

ಗುಬ್ಬಿ ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಹಾಕಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಒಂದು ವೇಳೆ ಯಾರಿಗೂ ಮತ ಹಾಕದೇ ಖಾಲಿ ಬ್ಯಾಲೆಟ್ ಹಾಕಿದರೆ ಮತ ತಿರಸ್ಕೃತವಾಗಲಿದೆ. ಸಂಜೆ ಚುನಾವಣಾ ಎಣಿಕೆಯ ವೇಳೆ ಎಲ್ಲವೂ ಸ್ಪಷ್ಟವಾಗಲಿದೆ. ಇನ್ನು ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯಿಸಿದ ಗುಬ್ಬಿ ಶ್ರೀನಿವಾಸ್ ಅವರು ನಾನು ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದ್ದೇನೆ ಎಂದಿದ್ದಾರೆ. 

2016ರ ಕ್ರಮ ಈಗಲೂ ಕೈಗೊಳ್ಳುತ್ತಾ  ಜೆಡಿಎಸ್?
ಯೆಸ್‌....2016ರಲ್ಲಿ ಕರ್ನಾಟಕ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾದನ ಮಾಡಿರುವ ಆರೋಪದ ಮೇಲೆ ಜೆಡಿಎಸ್ ಶಾಸಕರಾಗಿದ್ದ ಜಮೀರ್ ಅಹಮ್ಮದ್ ಖಾನ್, ಚಲುವರಾಯಸ್ವಾಮಿ, ಎಚ್‌ಸಿ ಬಾಲಕೃಷ್ಣ ಸೇರಿದಂತೆ ಏಳು ಶಾಸಕನ್ನು  ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದೀಗ ಗುಬ್ಬಿ ಶ್ರೀನಿವಾಸ್ ಅವರು ಅಡ್ಡಮತದಾನ ಮಾಡಿದ ಆರೋಪದ ಮೇರೆಗೆ ಪಕ್ಷದಿಂದ ಉಚ್ಛಾಟನೆ ಮಾಡುವ ಮಾತುಕತೆಗಳು ನಡೆದಿವೆ.

ಸೋಲೋಪ್ಪಿಕೊಂಡ್ರಾ ಕುಮಾರಸ್ವಾಮಿ?

ಭಾರೀ ಕುತೂಹಲ ಮೂಡಿಸಿರುವ ರಾಜ್ಯಸಭೆ ಚುನಾವಣೆ ಕ್ಲೈಮಾಕ್ಸ್​ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ಕ್ಷಣದಲ್ಲಿ ಗೆಲುವಿನ ಮಾಲೆ ಯಾರಿಗೆ ಎಂಬ ಕುತೂಹಲಕ್ಕೆ ತೆರಬೀಳಲಿದೆ. ಆದರೆ, ಮತದಾನ ಮಾಡಲೆಂದು ಜೆಡಿಎಸ್​ ಶಾಸಕರೊಂದಿಗೆ ಆಗಮಿಸಿದ ಎಚ್​.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಆಡಿದ ಆ ಒಂದು ಮಾತು 'ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡ್ರಾ ಎಚ್​ಡಿಕೆ? ಕುಪೇಂದ್ರ ರೆಡ್ಡಿಗೆ ಸೋಲು ಖಚಿತವಾಯ್ತೆ?, ಕಾಂಗ್ರೆಸ್​-ಜೆಡಿಎಸ್​ ನಡುವಿನ ಕದನದಲ್ಲಿ ಬಿಜೆಪಿಗೆ ಲಾಭವಾಯ್ತೆ?' ಎಂಬ ಪ್ರಶ್ನೆಗಳು ಮೂಡಿವೆ.

click me!