Karnataka Politics: 'ಜೆಡಿಎಸ್‌ಗೆ ದ್ರೋಹ ಎಸಗಿದ ಹೊರಟ್ಟಿ'

By Kannadaprabha NewsFirst Published Jun 4, 2022, 8:03 AM IST
Highlights

*  ಶಿಕ್ಷಕರ ಕ್ಷೇತ್ರ ಕಳೆದ 42 ವರ್ಷಗಳಿಂದ ಜೆಡಿಎಸ್‌ ವಶದಲ್ಲಿದೆ
*  ಬಸವರಾಜ ಹೊರಟ್ಟಿಗೆ ಪಕ್ಷ ಎಲ್ಲ ಸ್ಥಾನಮಾನ ನೀಡಿ ಸಭಾಪತಿಯನ್ನಾಗಿಯೂ ಮಾಡಿದೆ
*  ಹೊರಟ್ಟಿ ಪಕ್ಷಕ್ಕೆ ಋುಣಿಯಾಗಲಿಲ್ಲ. ಸ್ವಾರ್ಥ ಮತ್ತು ಅಧಿಕಾರ ದಾಹಕ್ಕಾಗಿ ಬಿಜೆಪಿ ಸೇರಿದರು 

ಕುಮಟಾ(ಜೂ.04): ಸುದೀರ್ಘ 42 ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಬಸವರಾಜ ಹೊರಟ್ಟಿಈಗ ಜೆಡಿಎಸ್‌ಗೆ ದ್ರೋಹ ಎಸಗಿ ಪಕ್ಷ ತೊರೆದಿರುವುದು ಕೇವಲ ಸ್ವಾರ್ಥಕ್ಕಾಗಿ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶ್ರೀಶೈಲ ನಿಂಗಪ್ಪ ಗಡದಿನ್ನಿ ಟೀಕಿಸಿದ್ದಾರೆ.

ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಿಕ್ಷಕರ ಕ್ಷೇತ್ರ ಕಳೆದ 42 ವರ್ಷಗಳಿಂದ ಜೆಡಿಎಸ್‌ ವಶದಲ್ಲಿದೆ. ಬಸವರಾಜ ಹೊರಟ್ಟಿಅವರಿಗೆ ಪಕ್ಷ ಎಲ್ಲ ಸ್ಥಾನಮಾನಗಳನ್ನು ನೀಡಿ ಸಭಾಪತಿಯನ್ನಾಗಿಯೂ ಮಾಡಿದೆ. ಹಲವು ಹುದ್ದೆಗಳನ್ನು ನೀಡಿದೆ. ಆದರೆ ಹೊರಟ್ಟಿಪಕ್ಷಕ್ಕೆ ಋುಣಿಯಾಗಲಿಲ್ಲ. ಸ್ವಾರ್ಥ ಮತ್ತು ಅಧಿಕಾರ ದಾಹಕ್ಕಾಗಿ ಬಿಜೆಪಿ ಸೇರಿದರು. ಆದರೆ ಈ ಬಾರಿಯೂ ಪಶ್ಚಿಮ ಶಿಕ್ಷಕರ ಕ್ಷೇತ್ರ ಜೆಡಿಎಸ್‌ ವಶದಲ್ಲೇ ಇರಲಿದೆ ಎಂದರು.

MLC Election: ಶಿಕ್ಷಕರಿಂದ ನಯಾಪೈಸೆ ಪಡೆಯದೇ ಸೇವೆ ಸಲ್ಲಿಸಿದ್ದೇನೆ: ಹೊರಟ್ಟಿ

ಆಡಳಿತ ಸರ್ಕಾರವನ್ನು ಬಳಸಿಕೊಂಡು ಹೇಗಾದರೂ ಅಧಿಕಾರದ ಗದ್ದುಗೆ ಏರಲು ವಾಮಮಾರ್ಗ ಹಿಡಿದಿದ್ದಾರೆ. ಶಿಕ್ಷಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಮುಖಂಡ ಗುರುರಾಜ, ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ, ಸೂರಜ ನಾಯ್ಕ, ಮುನಾಫ್‌ ಮಿರ್ಜಾನಕರ್‌, ಟಿ.ಟಿ. ನಾಯ್ಕ, ಜಿ.ಕೆ. ಪಟಗಾರ, ನಾಗೇಶ ನಾಯ್ಕ, ಬಲೀಂದ್ರ ಗೌಡ, ಮೋಹಿನಿ ನಾಯ್ಕ, ರಮೇಶ, ಸೋಮೆಶ್ವರ ಇನ್ನಿತರರು ಇದ್ದರು.
 

click me!