ಜೆಡಿಎಸ್ ಪ್ರತಿಭಟನೆಗೆ ಬ್ರೇಕ್: ನಿಖಿಲ್ ಕುಮಾರಸ್ವಾಮಿ ಆಕ್ರೋಶ

By Suvarna NewsFirst Published Jun 27, 2021, 10:09 PM IST
Highlights

* ಜೆಡಿಎಸ್ ಪ್ರತಿಭಟನೆ ಗೆ ಅನುಮತಿ ನಿರಾಕರಣೆ ವಿಚಾರ.
* ರಾಜ್ಯ ಸರ್ಕಾರದ ದೋರಣೆಗೆ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಖಂಡನೆ
* ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನಿಖಿಲ್ ಕುಮಾರಸ್ವಾಮಿ...

ಬೆಂಗಳೂರು, (ಜೂ.27): ತೈಲ ಬೆಲೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ನಾಳೆ (ಸೋಮವಾರ) ನಗರದಲ್ಲಿ ಪ್ರತಿಟನೆ ನಡೆಸಲು ಸಜ್ಜಾಗಿತ್ತು. ಆದ್ರೆ, ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಇದರಿಂದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗರಂ ಆಗಿದ್ದು, ಪೊಲೀಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫುಡ್ ಕಿಟ್ ವಿತರಣೆಗೆ ಮಾಜಿ ಸಿಎಂ ಚಾಲನೆ, ಈ ವೇಳ ಸರ್ಕಾರದ ವಿರುದ್ಧ ಗುಡುಗಿದ ಎಚ್‌ಡಿಕೆ

ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನಿಖಿಲ್ ಕುಮಾರಸ್ವಾಮಿ, ನಾಳೆ (ಜೂನ್.28) ಜೆಡಿ ಎಸ್ ಪಕ್ಷದಿಂದ ಬೆಲೆಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದರೆ ಕೋವಿಡ್ ನಿಯಮಾವಳಿ ಗಳನ್ನು ಮುಂದಿಟ್ಟು ರಾಜ್ಯ ಸರ್ಕಾರ ಪ್ರತಿಭಟನೆಗೆ ಅವಕಾಶ ನಿರಾಕರಿಸಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಸಮಾವೇಶ ಗಳಿಗೆ ಇಲ್ಲದ ನಿರ್ಬಂಧ ನಮಗೆ ಮಾತ್ರಾ ಯಾಕೆ.? ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳ ಆದಾಯವನ್ನು ಕೇಂದ್ರಕ್ಕೆ ತಿರುಗಿಸುವುದು ಬಿಜೆಪಿ ಕಾಂಗ್ರೆಸ್‌ ವಾದ. ಇದಕ್ಕೆ ಪೂರಕವಾದ ಕಾಂಗ್ರೆಸ್‌ ಪ್ರತಿಭಟನೆಗೆ ಅನುಮತಿ ನೀಡಲಾಯಿತು. ಪೆಟ್ರೋಲಿಯಂ ಅನ್ನು GSTಗೆ ತರಬಾರದೆಂಬ ನಿಲುವುಳ್ಳ ನಮ್ಮ ಹೋರಾಟವನ್ನು ತಡೆಯಲಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆ ವಿರೋಧಿಗಳೆಂಬುದು ಸಾಬೀತಾಗಿದೆ.
5/5

— Nikhil Kumar (@Nikhil_Kumar_k)

ಕೋವಿಡ್ ನಿಯಮಾವಳಿಗಳ ಪ್ರಕಾರವೇ ನಾವು ಪ್ರತಿಭಟನೆ ಮಾಡಲು ಮುಂದಾಗಿದ್ದೆವು. ಇಲ್ಲಿಯವರೆಗೆ ನಮ್ಮ ಪಕ್ಷದಿಂದ ಯಾವುದೇ ಸಮಾವೇಶ, ಹೋರಾಟಗಳನ್ನು ಮಾಡಿರಲಿಲ್ಲ. ಬೆಲೆ ಏರಿಕೆ ವಿರುದ್ದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಪ್ರತಿಭಟನೆ ಉದ್ದೇಶ ವಾಗಿತ್ತು. ಪೂರ್ವ ಭಾವಿ ಸಭೆಯಲ್ಲಿ ಕೂಡಾ ಇದನ್ನೇ ಚರ್ಚಿಸಿದ್ದೆವು.

ಕಾಂಗ್ರೆಸ್ ಪ್ರತಿಭಟನೆಗೆ ಇರುವ ಅವಕಾಶ ಜೆಡಿಎಸ್‌ಗೆ ಏಕಿಲ್ಲ? ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆಯ ವಿರೋಧಿಗಳು ಎಂಬುದನ್ನು ಮತ್ತೆ  ಸಾಬೀತುಪಡಿಸಿವೆ ಎಂದು ಟ್ವಟ್ಟರಲ್ಲಿ ಕಿಡಿಕಾರಿದ್ದಾರೆ.

click me!