ಕಾಂಗ್ರೆಸ್ ಮತ್ತು ಬಿಜೆಪಿಯವರು ತಮ್ಮ ಸುದೀರ್ಘ ಆಡಳಿತಾವಧಿಯಲ್ಲಿ ಜನ ಸಾಮಾನ್ಯರ ಬದುಕಿನ ಜತೆ ಚೆಲ್ಲಾಟವಾಡುತ್ತ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಅಳ್ನಾವರ (ಫೆ.11): ಕಾಂಗ್ರೆಸ್ ಮತ್ತು ಬಿಜೆಪಿಯವರು ತಮ್ಮ ಸುದೀರ್ಘ ಆಡಳಿತಾವಧಿಯಲ್ಲಿ ಜನ ಸಾಮಾನ್ಯರ ಬದುಕಿನ ಜತೆ ಚೆಲ್ಲಾಟವಾಡುತ್ತ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆಗೆ ತೆರಳುವ ಸಮಯದಲ್ಲಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ರಾಜ್ಯದ ಉದ್ದಗಲಕ್ಕೂ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರತಿ ಹಳ್ಳಿಗಳಲ್ಲಿಯೂ ಜನರು ಈ ಯೋಜನೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಸ್ಥಳೀಯ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಜನತೆಯ ನಿರ್ಧಾರ ನಮಗೊಂದು ಹೊಸ ಭಾವನೆ ಮೂಡಿಸಿದೆ. ಈ ಬಾರಿ 123 ಸ್ಥಾನಗಳ ಗುರಿ ಮುಟ್ಟುವ ಮೂಲಕ ಸ್ಪಷ್ಟಬಹುಮತದ ಸರ್ಕಾರ ರಚಿಸುತ್ತೇವೆ ಎಂದರು. ಧಾರವಾಡ ಜಿಲ್ಲೆಯ ಇಬ್ಬರು ನಾಯಕರಾದ ಬಸವರಾಜ ಹೊರಟ್ಟಿ ಮತ್ತು ಎನ್.ಎಚ್. ಕೋನರೆಡ್ಡಿಯವರು ಪಕ್ಷ ಬಿಟ್ಟು ಹೋಗಿದ್ದರಿಂದ ಪಕ್ಷದಲ್ಲಿ ಯಾವುದೇ ಬದಲಾವಣೆ ಅಥವಾ ಪಕ್ಷಕ್ಕೆ ಯಾವುದೇ ತರಹದ ಹಿನ್ನಡೆ ಆಗುವುದಿಲ್ಲ. ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ, ಅದಕ್ಕೆ ತಯಾರಿಯೂ ನಡೆಯುತ್ತಿದೆ. ಜಿಲ್ಲೆಯಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹೊಸ ತಾಲೂಕುಗಳ ಜನರಿಗೆ ಆಡಳಿತ ಕಚೇರಿಗಳ ಪ್ರಾರಂಭದ ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ತಲುಪಿಸಲು ಬದ್ಧವಾಗಿರುವುದಾಗಿ ಹೇಳಿದರು. ಈ ವೇಳೆ ಬೆಳಗಾವಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ, ಖಾನಾಪೂರ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಲಿರುವ ನಾಶೀರ ಬಾಗವಾನ, ಮಾಜಿ ಸಭಾಪತಿ ಸಚ್ಚಿದಾನಂದ ಖೋತ, ಸ್ಥಳೀಯ ಪಪಂ ಉಪಾಧ್ಯಕ್ಷ ನದೀಮ ಕಂಟ್ರಾಕ್ಟರ, ಪಕ್ಷದ ಮುಖಂಡ ಫಯೀಂ ಕಂಟ್ರಾಕ್ಟರ, ತಾಲೂಕು ಅಧ್ಯಕ್ಷ ರಮೇಶ ಹೂಗಾರ, ಶ್ರೀನಿವಾಸ ಅಷ್ಟೇಕರ, ರಾಜು ಯಲಕಪಾಟಿ, ಸುನಂದಾ ಕಲ್ಲು, ಜೈಲಾನಿ ಸುದರ್ಜಿ, ಯಲ್ಲಪ್ಪ ಹೂಲಿ, ರಶೀದ ಖಾನಾಪೂರಿ ಇನ್ನಿತರರು ಇದ್ದರು
ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ
ಟಿಕೆಟ್ ಗೊಂದಲ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಪ್ರೀತಮ್‌ಗೌಡ ಅವರು ಎಚ್.ಡಿ. ರೇವಣ್ಣ ಅವರನ್ನು ಕೆಣಕುತ್ತಿದ್ದಾರೆ. ಇದನ್ನು ರೇವಣ್ಣ ಅವರೂ ಜಿದ್ದಿಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ನಾಯಕರೊಂದಿಗೆ ಚರ್ಚೆ ಮಾಡಿದ್ದು, ಹಾಸನದ 7 ಕ್ಷೇತ್ರಗಳನ್ನು ನಾವೇ ಗೆಲ್ಲುತೇವೆ. ಈ ವಾರದಲ್ಲಿ ಹಾಸನ ಜಿಲ್ಲೆಯ ಟಿಕೆಟ್ ಗೊಂದಲ ಕೂಡ ಬಗೆಹರಿಯಲಿದೆ. ನಮ್ಮ ಕುಟುಂಬದಲ್ಲಿ ಏನೆ ತೀರ್ಮಾನಗಳಾದರೂ ನಾವೆಲ್ಲರೂ ಸೇರಿಕೊಂಡೇ ತೆಗೆದುಕೊಂಡಿರುತ್ತೇವೆ. ಯಾರೂ ಕೂಡ ನಮ್ಮ ಕುಟುಂಬದಲ್ಲಿ ಗೊಂದಲವನ್ನು ತರುವುದಕ್ಕೆ ಆಗುವುದಿಲ್ಲ. ಬೆಳಗಾವಿಯ ರಾಯಭಾಗ ಮತ್ತು ಕುಡಚಿಯಲ್ಲಿ ಸಮರ್ಥವಾದ ಅಭ್ಯರ್ಥಿಗಳು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ. ಅದಕ್ಕೆ ತಯಾರಿಯೂ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.