ನಾನು ಪಟ್ಟ ಹಿಂಸೆ ನನಗೇ ಗೊತ್ತು: ಬಿಜೆಪಿ, ಕಾಂಗ್ರೆಸ್ ಜತೆಗಿನ ಮೈತ್ರಿ ಅನುಭವ ಸ್ಮರಿಸಿಕೊಂಡ HDK

By Suvarna NewsFirst Published Nov 22, 2020, 3:06 PM IST
Highlights

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಸಿಎಂ ಆಗಿದ್ದ ವೇಳೆ ನಡೆದ ಕೆಲ ಘಟನೆಗಳನ್ನ ಸ್ಮರಿಸಿಕೊಂಡಿದ್ದಾರೆ.

ಮಂಡ್ಯ, (ನ.22):  ಈ ಹಿಂದೆ ಒಂದು ಸಲ ಬಿಜೆಪಿ ಮತ್ತೊಂದು ಸಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅನುಭವಿಸಿದ ಕಷ್ಟಗಳನ್ನ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮೆಲುಕು ಹಾಕಿದ್ದಾರೆ.

"

ಮಂಡ್ಯದಲ್ಲಿ ಇಂದು (ಭಾನುವಾರ) ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಕುಮಾರಸ್ವಾಮಿ,  ಸಮ್ಮಿಶ್ರ ಸರ್ಕಾರಗಳಲ್ಲಿ ನಾನು ಪಟ್ಟ ಹಿಂಸೆ ನನಗೇ ಗೊತ್ತು. ಎರಡೂ ಸಮ್ಮಿಶ್ರ ಸಂದರ್ಭಗಳಲ್ಲೂ ಅಭಿವೃದ್ಧಿಗೆ ಅವಕಾಶ ಸಿಗಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. 

ನಿಲ್ಲಿಸಿದ್ರು, ಮುಗಿಸಿಬಿಟ್ರು! ನಿಖಿಲ್‌ ಸೋಲಿನ ಬಗ್ಗೆ ಹೆಚ್‌ಡಿಕೆ ಶಾಕಿಂಗ್ ಹೇಳಿಕೆ

ನಾನು ರೈತರ ಸಾಲ ಮನ್ನಾ ಮಾಡಿದೆ. ಅದರಲ್ಲೇನು ನನಗೆ ಕಮೀಷನ್ ಬರೋದಿಲ್ಲ. ನಾನು ಬಂದಿದ್ದು ಜನರ ದುಡ್ಡು ಲೂಟಿ ಹೊಡೆಯಲು ಅಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ 10% ಕಮೀಷನ್‌ ಸರ್ಕಾರ ಎನ್ನುತ್ತಾರೆ. ನನ್ನ ಸರ್ಕಾರಕ್ಕೆ ಯಾವನಾದರೂ ಹಾಗೆ‌ ಹೇಳಿದ್ದಾನಾ? ಎಂದು ಪ್ರಶ್ನಿಸಿದರು.

ಚುನಾವಣೆಗೂ ಮುನ್ನ‌ ಕಾಂಗ್ರೆಸ್ 15 ಲಕ್ಷ ಮನೆ ಕಟ್ಟಿಸಿಕೊಡುವ ಭರವಸೆ ಕೊಟ್ಟಿತ್ತು . ಆದ್ರೆ ಸಮ್ಮಿಶ್ರ ಸರ್ಕಾರ ಆದಾಗ ಜನರಿಗೆ ಮನೆ ಕಟ್ಟಲು ಹಣ ಕೊಡಕ್ಕಾಗಲಿಲ್ಲ. ನಾನು ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲದಿಂದ ಸಿಎಂ ಆಗಿದ್ದೆ. ಆ ಅವಧಿಯಲ್ಲಿ ಪಟ್ಟ ಕಷ್ಟ ನನಗೆ ಗೊತ್ತು ಎಂದರು.

click me!