ಕೊರೋನಾ ಸೋಂಕಿನಿಂದ ಬಳಲುತ್ತಿರುವ ಮಾಜಿ ಸಿಎಂ ಆರೋಗ್ಯ ಸ್ಥಿತಿ ಗಂಭೀರ

By Suvarna NewsFirst Published Nov 21, 2020, 10:37 PM IST
Highlights

ಕೋವಿಡ್ -19 ಸೋಂಕಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ  ಆರೋಗ್ಯ ಸಚಿವ ಮಾಹಿತಿ ಕೊಟ್ಟಿದ್ದಾರೆ.

ಗುವಾಹಾಟಿ, (ನ.21) : ಕಾಂಗ್ರೆಸ್ ಹಿರಿಯ ನಾಯಕ ಮತ್ತು ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 

ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಅವರು ಚಿಕಿತ್ಸೆ ಪಡೆಯುತ್ತಿದ್ದು, ತರುಣ್ ಅವರ ಅಂಗಗಳ ಕಾರ್ಯವೈಖರಿ ತೀವ್ರವಾಗಿ ಕುಸಿದಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಡಾ. ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 

ಕೋವಿಡ್‌ನಿಂದ ಬಹು ಅಂಗಾಂಗ ವೈಫಲ್ಯ: ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

  ಶನಿವಾರ ಸಂಜೆಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,  ಜಿಎಂಸಿಎಚ್‌ನ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮುಂದಿನ 48-72 ಗಂಟೆಗಳು ಬಹಳ ನಿರ್ಣಾಯಕವಾಗಿದ್ದು, ವೈದ್ಯರ ತಂಡವು ಈಗ ಅವರ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಕೋವಿಡ್ -19 ಸೋಂಕಿನ ಹಿನ್ನೆಲೆ 86 ವರ್ಷದ ತರುಣ್ ಗೊಗೊಯ್ ಅವರನ್ನು ನವೆಂಬರ್ 2 ರಂದು ಜಿಎಂಸಿಎಚ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

click me!