ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಜೆಡಿಎಸ್‌ಗೆ ಆಗಮಿಸುವುದರ ಕುರಿತು ಯಾವುದೇ ರೀತಿಯ ಚರ್ಚೆ ಆಗಿಲ್ಲ ಅದರ ಅವಶ್ಯಕತೆಯೂ ಸಹ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾಂಗ್‌ಕೊಟ್ಟರು.
ರಾಯಚೂರು (ಜ.26): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಜೆಡಿಎಸ್‌ಗೆ ಆಗಮಿಸುವುದರ ಕುರಿತು ಯಾವುದೇ ರೀತಿಯ ಚರ್ಚೆ ಆಗಿಲ್ಲ ಅದರ ಅವಶ್ಯಕತೆಯೂ ಸಹ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾಂಗ್‌ಕೊಟ್ಟರು. ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಬುಧವಾರ ಮಾತನಾಡಿದ ಅವರು. ಮಹಾನ ನಾಯಕರಾಗಿರುವ ರಮೇಶ ಜಾರಿಕಿಹೊಳಿ ರಾಷ್ಟ್ರೀಯ ಪಕ್ಷದಲ್ಲಿದ್ದು, ಅಂತಹ ಪಕ್ಷವನ್ನು ಬಿಟ್ಟು ಬರುವುದು ಚೆನ್ನಾಗಿ ಕಾಣಲ್ಲ. ಜೆಡಿಎಸ್‌ನ ಆಸ್ತಿ ಬಡ ಹೆಣ್ಣು ಮಕ್ಕಳು, ಬಡವರೇ ಆಗಿದೆ. ನಮ್ಮದು ಸಣ್ಣ ಪಕ್ಷ ದೊಡ್ಡ ದೊಡ್ಡ ಸಾಹುಕಾರರನ್ನು ಕಟ್ಟಿಕೊಂಡು ಏನು ಮಾಡಲಿ ಎಂದು ವ್ಯಂಗ್ಯವಾಡಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆ ಮಾಡಿಕೊಳ್ಳಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ರಾಜ್ಯದಲ್ಲಿ ಸರ್ಕಾರ ತರುವುದಕ್ಕೆ ರಮೇಶ ಜಾರಕಿಹೊಳಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ಕೈಯಲ್ಲಿ ಇಡೀ ಇಲಾಖೆಯೆ ಇದೆ ತನಿಖೆ ನಡೆಸಲಿ. ದೆಹಲಿಗೆ ಹೋಗಿ ಇಂತಹ ಸಿಡಿಗಳನ್ನು ಮಾಡಿದ್ದಾರೆ ಎನ್ನುವ ಸಂತ್ಯಾಂಶವನ್ನು ಹೊರಗಡೆ ತರಲಿ. ಇದು ಒಳ್ಳೆಯದೆ ಇದರಲ್ಲೇನು ತಪ್ಪಿದೆ ಎಂದರು.
undefined
ಸ್ಯಾಂಕಿ ಮೇಲ್ಸೇತುವೆ ಬೇಡ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ 2000ಕ್ಕೂ ಹೆಚ್ಚು ಮಕ್ಕಳು
ಮಂಡ್ಯ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ರಾಜಕೀಯ ಜನ್ಮಕೊಟ್ಟಿದ್ದು ರಾಮನಗರ ಜಿಲ್ಲೆ. ನಂತರ ರಾಜ್ಯದಲ್ಲಿ ನನ್ನ ಬೆಳವಣಿಗೆ ಮಂಡ್ಯದ ಜನರು ಶಕ್ತಿ ತುಂಬಿದ್ದಾರೆ. ನಾನು ಮಂಡ್ಯಕ್ಕೆ ಹೊಸದಾಗಿ ಹೋಗಬೇಕಾಗಿಲ್ಲ. ಯಾವ ಹಿನ್ನೆಲೆಯಲ್ಲಿ ಶ್ರೀನಿವಾಸ ಅವರು ಆಹ್ವಾನ ನೀಡಿದ್ದಾರೆಯೋ ಗೊತ್ತಿಲ್ಲ. ನನ್ನ ಮೇಲೆ ಇರುವ ಅಭಿಮಾನ, ಪ್ರೀತಿಯಿಂದ ಹೇಳಿಕೆ ನೀಡಿರಬಹುದು. ಮಂಡ್ಯದಲ್ಲಿ ಸಮರ್ಥ ಅಭ್ಯಥಿಗಳಿದ್ದಾರೆ. ಈ ಕುರಿತು ಶ್ರೀನಿವಾಸ ಅವರೊಂದಿಗೆ ಸಮಾಲೋಚಿಸಲಾಗುವುದು ಎಂದರು.
ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರ ಕೋಟೆಯಾಗಿದ್ದು, ಅಲ್ಲಿ ನಿಷ್ಠಾವಂತ ಕಾರ್ಯರ್ತರ ಪಡೆಯಿದೆ. ಮತದಾರರು ಸಹ ನಿರಂತರವಾಗಿ ಪಕ್ಷಕ್ಕೆ ಬೆಂಬಲ ಕೊಡುತ್ತಾ ಬಂದಿದ್ದಾರೆ. ಈಗಾಗಲೇ ಚೆನ್ನಪಟ್ಟಣದ ಅಭ್ಯರ್ಥಿ ಯಾರೆಂದು ನಿರ್ಧರಿಸಿದ್ದು ಯಾವ ಕಾರಣಕ್ಕೆ ಸುದ್ದಿಯನ್ನು ಹರಿದು ಬಿಡುತ್ತಿದ್ದಾರೆಯೋ ತಿಳಿಯದಾಗಿದೆ ಎಂದು ಹೇಳಿದರು.
ಜೆಡಿಎಸ್ ಅಲಿಬಾಬ ಗ್ಯಾಂಗ್ ನಿಜ. ಆದರೆ, ಸಿದ್ದರಾಮಯ್ಯ ಅವರದ್ದು ಯಾವ ಗ್ಯಾಂಗ್ ಎನ್ನುವುದನ್ನು ಹೇಳಬೇಕು. ಸಿದ್ದರಾಮಯ್ಯ ಅವರಿಗೆ ತಿಂದ ಅನ್ನ ಅರಗುವುದಿಲ್ಲ. ಅದಕ್ಕಾಗಿಯೇ ಜೆಡಿಎಸ್ ಕುರಿತು ಮಾತನಾಡುತ್ತಿದ್ದಾರೆ. ಬೆಳೆದು ಬಂದ ಪಕ್ಷದ ಬಗ್ಗೆ ಟೀಕೆ ಮಾಡಬಾರದು ಎಂದು ಒಂದು ಕಡೆ ಮಾಜಿ ಸಚಿವ ರಾಮಲಿಂಗರೆಡ್ಡಿ ಅವರು ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಯಾವ ಪಕ್ಷದಿಂದ ಬೆಳೆದು ಬಂದಿದ್ದಾರೆ ಎನ್ನುವುದು ಎಲ್ಲರಿಗು ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭ್ರಷ್ಟಾಚಾರ: ಅಧಿಕಾರಿಗಳ ಬಣ್ಣ ಬಯಲು ಮಾಡಿದ ರುಪ್ಸಾ
ಡಿನೋಟಿಫಿಕೇಷನ್ ಮಾಡಿ ರು.600 ಕೋಟಿ ಹಣ ಸಂಗ್ರಹಿಸಿದ್ದರು ಕೆಂಪಯ್ಯ ಆಯೋಗವು ಅಕ್ರಮ ಮಾಡಿದೆ ಎಂದು ಮುಚ್ಚಿಹಾಕಿಕೊಂಡರು. ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಅಲಿಬಾಬ 40 ಜನ ಕಳ್ಳರ ಕಥೆ ಹೋಲುತ್ತದೆ. ದರೋಡೆಕೋರರ ಗ್ಯಾಂಗ್ ಎಂದರೆ ನಾನು ಒಪ್ಪಿಕೊಳ್ಳುತ್ತೇನೆ ಹಾಗಾದರೆ ಕಾಂಗ್ರೆಸ್ ಚಂಬಲ ಕಣಿವೆ ದರೋಡೆಕೋರರಾ? ಸಿದ್ದರಾಮಯ್ಯ ಆ್ಯಂಡ್ ಟೀಮ್ ಚೆಂಬಲ್ ಕಣಿವೆ ಸಂಸ್ಕೃತಿಯಲ್ಲಿ ಬಂದವರು, ಹಗುರವಾಗಿ ಮಾತನಾಡಬೇಕಾದರೆ ನಮಗೂ ಬರುತ್ತದೆ, ನಾವು ಸಹ ಪದ ಬಳಕೆಯನ್ನು ಚೆನ್ನಾಗಿ ಕಲಿತಿದ್ದೇವೆ ಎಂದು ತಿರುಗೇಟು ನೀಡಿದರು.