ಕಾಂಗ್ರೆಸ್‌ ರಾಷ್ಟ್ರೀಯನೋ, ಗಲ್ಲಿ ಪಾರ್ಟಿನೋ?: ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌

Published : Nov 18, 2023, 02:00 AM IST
ಕಾಂಗ್ರೆಸ್‌ ರಾಷ್ಟ್ರೀಯನೋ, ಗಲ್ಲಿ ಪಾರ್ಟಿನೋ?: ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌

ಸಾರಾಂಶ

ಸರ್ಕಾರ ಬರಲಾರದ ಕಡೆಗೆ ಕಾಂಗ್ರೆಸ್‌ನವರು ಆಶ್ವಾಸನೆ ನೀಡುತ್ತಿದ್ದಾರೆ. ನಮ್ಮಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿಯ ರೈತರಿಗೆ ಏನು ಪರಿಹಾರ ಕೊಟ್ಟಿಲ್ಲ. ಅಲ್ಲಿ ಪರಿಹಾರ ಕೊಡ್ತಿನಿ ಎಂದಿದ್ದಾರೆ. ಇದ್ಯಾಕ್‌ ಈ ರೀತಿಯ ದ್ವಂದ್ವ ನಿಲುವುಗಳನ್ನು ಕಾಂಗ್ರೆಸ್‌ನವ್ರು ಮಾಡ್ತಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವೇ ಇಲ್ಲವೇ ಗಲ್ಲಿ ಪಾರ್ಟಿಯೇ ಎಂದು ಖಾರವಾಗಿ ಪ್ರಶ್ನಿಸಿದ ಬಂಡೆಪ್ಪ ಖಾಶೆಂಪುರ್

ಬೀದರ್‌(ನ.18):  ತನ್ನ ಪಕ್ಷದ ಸರ್ಕಾರ ಬಾರದಿರುವ ಕಡೆಗೆಲ್ಲ ಹೆಚ್ಚೆಚ್ಚು ಗ್ಯಾರಂಟಿಗಳ ಘೋಷಣೆ ಮಾಡುತ್ತ, ಸರ್ಕಾರ ಇರುವ ರಾಜ್ಯಗಳಲ್ಲಿ ಜನರನ್ನು ಕಡೆಗೆಣಿಸುತ್ತಿರುವ ಕಾಂಗ್ರೆಸ್‌ ನ್ಯಾಷನಲ್‌ ಪಾರ್ಟಿನಾ ಅಥವಾ ಗಲ್ಲಿ ಪಾರ್ಟಿನಾ ಎಂಬುವುದಕ್ಕೆ ರಾಹುಲ್‌ ಗಾಂಧಿ ಅವರೇ ಉತ್ತರಿಸಲಿ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಸವಾಲೆಸೆದರು.

ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಗುಜರಾತ್‌ನಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಅವರ ಸರ್ಕಾರ ಬರೋಲ್ಲ ಆದರೆ ಅಲ್ಲಿ ಕಾಂಗ್ರೆಸ್‌ ರೈತರ ಸಾಲ ಮನ್ನಾ ಎಂದು ಘೋಷಿಸಿದೆ. ತೆಲಂಗಾಣಾದಲ್ಲಿ ಮಹಿಳೆಯರಿಗೆ ಎರಡೂವರೆ ಸಾವಿರ ರು., 300 ಯುನಿಟ್‌ವರೆಗೆ ವಿದ್ಯುತ್‌ ಉಚಿತವೆಂದು ಹೇಳಿದೆ ಎಂದರು.

ರಾಜ್ಯದಲ್ಲಿ ಕೊಲ್ಕತ್ತಾ ಡ್ಲೂಪಿಕೇಟ್ ಡಾಕ್ಟರ್ಸ್ ಹಾವಳಿ..! ಕವರ್ ಸ್ಟೋರಿಯಲ್ಲಿ ನಕಲಿ ವೈದ್ಯರ ಬಣ್ಣಬಯಲು..!

ಹೀಗೆಯೇ ಸರ್ಕಾರ ಬರಲಾರದ ಕಡೆಗೆ ಕಾಂಗ್ರೆಸ್‌ನವರು ಆಶ್ವಾಸನೆ ನೀಡುತ್ತಿದ್ದಾರೆ. ನಮ್ಮಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿಯ ರೈತರಿಗೆ ಏನು ಪರಿಹಾರ ಕೊಟ್ಟಿಲ್ಲ. ಅಲ್ಲಿ ಪರಿಹಾರ ಕೊಡ್ತಿನಿ ಎಂದಿದ್ದಾರೆ. ಇದ್ಯಾಕ್‌ ಈ ರೀತಿಯ ದ್ವಂದ್ವ ನಿಲುವುಗಳನ್ನು ಕಾಂಗ್ರೆಸ್‌ನವ್ರು ಮಾಡ್ತಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವೇ ಇಲ್ಲವೇ ಗಲ್ಲಿ ಪಾರ್ಟಿಯೇ ಎಂದು ಬಂಡೆಪ್ಪ ಖಾಶೆಂಪುರ್ ಅವರು ಖಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಶಿಷ್ಯ ವೇತನ, ಶಾಸಕರ ಅನುದಾನವನ್ನು ಈ ಸರ್ಕಾರ ಕಡಿಮೆ ಮಾಡಿದೆ. ಗ್ಯಾರಂಟಿ ಗದ್ದಲದಲ್ಲಿ ಅಭಿವೃದ್ಧಿ ಕುಂಠಿತಗೊಳಿಸಿದೆ. ಗ್ಯಾರಂಟಿ ಕೂಡ ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ. ಏನೇ ಕೇಳಿದರೂ ಸರ್ವರ್‌ ಡೌನ್‌ ಅಂತಾರೆ, ಅದೆಲ್ಲ ಸುಳ್ಳು. ಸರ್ವರ್‌ ಅಲ್ಲ ಸರ್ಕಾರವೇ ಡೌನ್‌ ಆಗಿದೆ ಎಂದೆನಿಸ್ತಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ವ್ಯಂಗ್ಯವಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ