ಮೋದಿ ಬರಲಿ ಅಮಿತ್‌ ಶಾ ಬರಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ: ಸಿ.ಎಸ್‌. ಪುಟ್ಟರಾಜು

By Kannadaprabha News  |  First Published Mar 10, 2023, 1:00 AM IST

ನಿಖಿಲ್‌ ಕುಮಾರಸ್ವಾಮಿ ಸೋತಿರಬಹುದು. ಆದರೆ, 5.45 ಲಕ್ಷ ಮತ ಪಡೆದಿದ್ದಾರೆ. ಅವರನ್ನು ಜಂಟಿಯಾಗಿ ಸೋಲಿಸಿದ ಸುಮಲತಾ ಬಿಜೆಪಿ ಸೇರ್ತಾರೆ. ಮಂಡ್ಯ ಜಿಲ್ಲೆಯಲ್ಲಿರುವ ಶಾಸಕರು ಬಲಿಷ್ಠವಾಗಿದ್ದಾರೆ. ಮಂಡ್ಯದಲ್ಲಿ ಬೇರೆಯವರ ಆಟ ನಡೆಯೋದಿಲ್ಲ ಎಂದ ಜೆಡಿಎಸ್‌ ಶಾಸಕ ಸಿ.ಎಸ್‌. ಪುಟ್ಟರಾಜು. 


ಮೈಸೂರು(ಮಾ.10): ಮೋದಿ ಬರಲಿ ಅಮಿತ್‌ ಶಾ ಬರಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ ಎಂದು ಜೆಡಿಎಸ್‌ ಶಾಸಕ ಸಿ.ಎಸ್‌. ಪುಟ್ಟರಾಜು ತಿಳಿಸಿದರು. ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ನಡುವೆ ಪೈಪೋಟಿ ಇದೆ. ಬಿಜೆಪಿ, ರೈತ ಸಂಘದವರು ಬಲಿಷ್ಠವಾದರೆ ಮತಗಳು ಹರಿದು ಹಂಚಿ ಹೋಗುತ್ತವೆ. ಇದರಿಂದ ನೇರವಾಗಿ ಜೆಡಿಎಸ್‌ಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ನಿಖಿಲ್‌ ಕುಮಾರಸ್ವಾಮಿ ಸೋತಿರಬಹುದು. ಆದರೆ, 5.45 ಲಕ್ಷ ಮತ ಪಡೆದಿದ್ದಾರೆ. ಅವರನ್ನು ಜಂಟಿಯಾಗಿ ಸೋಲಿಸಿದ ಸುಮಲತಾ ಬಿಜೆಪಿ ಸೇರ್ತಾರೆ. ಮಂಡ್ಯ ಜಿಲ್ಲೆಯಲ್ಲಿರುವ ಶಾಸಕರು ಬಲಿಷ್ಠವಾಗಿದ್ದಾರೆ. ಮಂಡ್ಯದಲ್ಲಿ ಬೇರೆಯವರ ಆಟ ನಡೆಯೋದಿಲ್ಲ ಎಂದು ಅವರು ತಿಳಿಸಿದರು.

Latest Videos

undefined

ಮಹಿಳೆಯರಿಗೆ ಶೇ. 50ರಷ್ಟು ಸ್ಥಾನಗಳ ಮೀಸಲಾತಿ ನೀಡಿ : ಸಾ.ರಾ. ಮಹೇಶ್‌

ಸುಮಲತಾ ಬಿಜೆಪಿ ಸೇರ್ತಾರೆ: 

ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ. ಸುಮಲತಾ ಅಂಬರೀಶ್‌ ಅವರು ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಲು ಪ್ಲಾನ್‌ ಮಾಡಿದ್ದರು. ಆದರೆ, ಅದು ಸರ್ಕಾರಿ ಕಾರ್ಯಕ್ರಮವಾದ ಕಾರಣ ಅದಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ, ನನಗೆ ಇರುವ ಮಾಹಿತಿ ಪ್ರಕಾರ ಇನ್ನೂ ಬೇಗ ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮೇಲ್ಜಾತಿಯವರಲ್ಲವೇ? : ಲಕ್ಷ್ಮಣ್

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಜೆಡಿಎಸ್‌ನದ್ದೂ ಪಾಲಿದೆ

ಮೈಸೂರು- ಬೆಂಗಳೂರು ನಡುವಿನ ದಶಪಥ ಹೆದ್ದಾರಿ ನಿರ್ಮಾಣದಲ್ಲಿ ಜೆಡಿಎಸ್‌ನದ್ದೂ ಪಾಲಿದೆ ಎಂದು ಜೆಡಿಎಸ್‌ ಶಾಸಕ ಸಿ.ಎಸ್‌. ಪುಟ್ಟರಾಜು ತಿಳಿಸಿದರು.ದಶಪಥ ಕ್ರೆಡಿಟ್‌ ವಾರ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಜೆಡಿಎಸ್‌ನದ್ದೂ ಪಾಲಿದೆ. ಕೇಂದ್ರ ಸರ್ಕಾರ ಪ್ರತಾಪ್‌ ಸಿಂಹಗೆ ಹೆದ್ದಾರಿ ಯೋಜನೆ ಗುತ್ತಿಗೆ ಕೊಟ್ಟಿದೆಯಾ? ಇಡೀ ಯೋಜನೆ ನಾನೊಬ್ಬನೇ ಮಾಡಿಸಿದ್ದೇನೆ ಅಂತಾ ಓಡಾಡಿಕೊಂಡಿದ್ದಾರೆ. ನಾನು ಸಹ ಎಂಪಿ ಆಗಿದ್ದವನು. ದೆಹಲಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದೀನಿ ಅಂತ ಯಡಿಯೂರಪ್ಪ ಅವರ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಯೋಜನೆಯ ಅಲೈನ್‌ಮೆಂಟ್‌ ಮಾಡಿ ಅನುಮೋದನೆ ನೀಡದಿದ್ದರೇ ಹೆದ್ದಾರಿ ಹೇಗೆ ಆಗುತ್ತಿತ್ತು? ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದಿದ್ರೂ ಈ ಯೋಜನೆಗೆ ಸಹಕಾರ ಕೊಡಲೇಬೇಕಿತ್ತು. ಹೆದ್ದಾರಿ ಬಂದಿರುವುದರಿಂದ ಚನ್ನಪಟ್ಟಣ, ರಾಮನಗರ, ಮಂಡ್ಯ, ಶ್ರೀರಂಗಪಟ್ಟಣದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ. ಪ್ರತಾಪ್‌ ಸಿಂಹ ಹೆಜ್ಜೆ ಹೆಜ್ಜೆಗೂ ಚೀಫ್‌ ಎಂಜಿನಿಯರ್‌ ತರಹ ಆಡ್ತಿದ್ದಾರೆ ಎಂದು ಅವರು ಟಾಂಗ್‌ ನೀಡಿದರು.

click me!