ವರುಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತವಾದ ನಂತರ ಜೆಡಿಎಸ್ ಅಭ್ಯರ್ಥಿ ಎಸ್.ಎಂ.ಅಭಿಷೇಕ್ ನಿಷ್ಕ್ರಿಯರಾಗಿದ್ದಾರೆ.
ಮೈಸೂರು (ಏ.08): ವರುಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತವಾದ ನಂತರ ಜೆಡಿಎಸ್ ಅಭ್ಯರ್ಥಿ ಎಸ್.ಎಂ.ಅಭಿಷೇಕ್ ನಿಷ್ಕ್ರಿಯರಾಗಿದ್ದಾರೆ. ಅಭ್ಯರ್ಥಿಯಾಗಿ ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾದ ನಂತರ ಅವರು ಪ್ರಚಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಹಾಲಿ ಶಾಸಕ ಡಾ.ಯತೀಂದ್ರ ಬದಲು ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಗೊತ್ತಾದ ನಂತರ ಪಕ್ಷದ ಪರ ಚಟುವಟಿಕೆ ನಡೆಸುತ್ತಿಲ್ಲ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ಹೋಗಿದೆ. ಎರಡು ದಿನ ಕಾದು ನೋಡಿ ಅಗತ್ಯವಿದ್ದಲ್ಲಿ ಅಭ್ಯರ್ಥಿ ಬದಲಿಸುವ ಬಗ್ಗೆ ಪರಿಶೀಲಿಸಲಾಗುವುದು. ಕಳೆದ ಬಾರಿ ಕೂಡ ಅಭಿಷೇಕ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕೇವಲ 28,123 ಮತ ಪಡೆದಿದ್ದರು ಎಂದು ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕಾಂಗ್ರೆಸ್ ಬಂಡಾಯ ತೀವ್ರ: 2ನೇ ಟಿಕೆಟ್ ಪಟ್ಟಿ ಪ್ರಕಟ ಬೆನ್ನಲ್ಲೇ ತಲೆನೋವು
ಸಿದ್ದರಾಮಯ್ಯ ‘ಕೈ’ ಬಲಿಪಡಿಸಲು ತೀರ್ಮಾನ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸದಿರಲು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ತೀರ್ಮಾನಿಸಿದೆ. ನಗರದಲ್ಲಿ ಶುಕ್ರವಾರ ವೇದಿಕ ಆಯೋಜಿಸಿದ್ದ ಬಿಜೆಪಿ ಅಳಿಸಿ- ಮೀಸಲಾತಿ ಉಳಿಸಿ ಅಭಿಯಾನದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿ ರಕ್ಷಣೆ ಹಾಗೂ ಮೀಸಲಾತಿಯ ವಿರುದ್ಧ ಇರುವ ಬಿಜೆಪಿಯನ್ನು ಬೆಂಬಲಿಸದಿರಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮೀಸಲಾತಿ ವಿಚಾರದಲ್ಲಿ ಗೊಂದಲ ಉಂಟು ಮಾಡುತ್ತಿರುವ ಬಿಜೆಪಿಯ ನಡೆಯ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಎಲ್ಲಾ ವರ್ಗದವರ ಪರವಾಗಿದ್ದಾರೆ. ಸಾಮಾಜಿಕ ನ್ಯಾಯದ ಬದ್ಧರಾಗಿದ್ದಾರೆ. ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಲು ಮತ್ತು ಹಿಂದುಳಿದ ವರ್ಗಗಳಿಗೆ ಶೇ 15ರಷ್ಟುಮೀಸಲಾತಿಯನ್ನು ನೀಡಬೇಕಾಗಿ ಕಾಂಗ್ರೆಸ್ ಪಕ್ಷವನ್ನು ಸಭೆ ಆಗ್ರಹಿಸಿತು. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಮುಖಂಡರಿಗೆ ಟಿಕೆಟ್ ನೀಡಬೇಕು ಎಂದು ತೀರ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಸಮಾಜದಲ್ಲಿ ಎಲ್ಲವನ್ನೂ ಜಾತಿಯಿಂದಲೇ ನೋಡುವ ಮನೋಭಾವ ಹಾಗೆಯೇ ಇದೆ.
ಕ್ರೈಸ್ತ ಮಿಷನರಿಗಳಿಗಿಂತ ದಕ್ಷಿಣದ ಹಿಂದು ಶ್ರೀಗಳ ಸೇವೆ ಅಧಿಕ: ಮೋಹನ್ ಭಾಗವತ್
ಜಾತಿ ವ್ಯವಸ್ಥೆ ಇಂದಿಗೂ ಹೋಗಿಲ್ಲ. ಅದು ಹೋಗಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಬಹಳಷ್ಟುಕಾಳಜಿ, ಕನಿಕರ ಇರುವ ನಾಯಕರು ಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಈ ವರ್ಗಗಳ ಬಗ್ಗೆ ಅಪಾರ ಸಾಮಾಜಿಕ ಕಳಕಳಿ ಇತ್ತು. ಅವರ ನಂತರ ಸಿದ್ದರಾಮಯ್ಯ ಆ ಕೆಲಸವನ್ನು ಮಾಡುತ್ತಿದ್ದಾರೆ. ಬೇರೆಲ್ಲ ನಾಯಕರೂ ಅವರವರ ಹಿತ ಹಾಗೂ ಸಮಾಜದ ಹಿತವನ್ನಷ್ಟೆನೋಡಿಕೊಳ್ಳುತ್ತಾರೆ ಎಂದರು. ಮೀಸಲಾತಿ ವಿಷಯದಲ್ಲಿ ಬಿಜೆಪಿ ನಾಟಕ ಮಾಡುತ್ತಿದೆ. ಅವರು ಮಾಡಿರುವ ವರ್ಗೀಕರಣ ಜಾರಿಯಾಗುವುದೇ ಇಲ್ಲ. ಚುನಾವಣೆ ದೃಷ್ಟಿಯಿಂದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ ಎಂದು ಅವರು ಆರೋಪಿಸಿದರು.