ಅಗತ್ಯ ಬಿದ್ದರೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೂ ಬೆಂಬಲ : ಜನಾರ್ದನ ರೆಡ್ಡಿ

Published : Apr 03, 2023, 05:44 PM ISTUpdated : Apr 03, 2023, 06:16 PM IST
 ಅಗತ್ಯ ಬಿದ್ದರೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೂ ಬೆಂಬಲ : ಜನಾರ್ದನ ರೆಡ್ಡಿ

ಸಾರಾಂಶ

ಬಾಗಲಕೋಟೆ ಜಿಲ್ಲೆಯ  ಜಮಖಂಡಿಯಲ್ಲಿ ನಡೆದ  ಕೆಕೆಆರ್‌ಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ  ಅವರು ಯಾವುದೇ ಪಕ್ಷ ಅಧಿಕಾರಕ್ಕೆ ಬರೋದಕ್ಕೆ ನಮ್ಮ ಪಕ್ಷ ಅನಿವಾರ್ಯ.  ಅಗತ್ಯ ಬಿದ್ದರೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಬಾಗಲಕೋಟೆ (ಏ.3): ಬಾಗಲಕೋಟೆ ಜಿಲ್ಲೆಯ  ಜಮಖಂಡಿಯಲ್ಲಿ ನಡೆದ  ಕೆಕೆಆರ್‌ಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ  ಅವರು ಯಾವುದೇ ಪಕ್ಷ ಅಧಿಕಾರಕ್ಕೆ ಬರೋದಕ್ಕೆ ನಮ್ಮ ಪಕ್ಷ ಅನಿವಾರ್ಯ.  ಅಗತ್ಯ ಬಿದ್ದರೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಸರ್ಕಾರ ರಚನೆಗೆ ಸಂದರ್ಭದಲ್ಲಿ ಯಾರಿಗೆ ಬೆಂಬಲ ನೀಡುವರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮಗೆ ಬೆಂಬಲ ನೀಡಿದ ಜನರ ಇಚ್ಚೆಯಂತೆ ನಡೆದುಕೊಳ್ಳುತ್ತೇನೆ. ಜನರ ತಿರ್ಮಾನ ಹೇಗಿರುತ್ತೆ  ಅದಕ್ಕೆ ತಲೆಬಾಗುತ್ತೇನೆ. ಕೆಆರ್ ಪಿ ಪಕ್ಷದ ಭರವಸೆ ಈಡೇರಿಸಲು ಯಾರು ಸಮ್ಮತಿಸುತ್ತಾರೆ ಅವರಿಗೆ ನನ್ನ ಬೆಂಬಲವಿದೆ. ಇಲ್ಲಿ ಕಾಂಗ್ರೆಸ್,  ಬಿಜೆಪಿ, ಜೆಡಿಎಸ್ ಎಂಬ ಪ್ರಶ್ನೇನೇ ಬರಲ್ಲ. ನನ್ನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಗೆ ಸ್ಪಂಧಿಸುವ ಪಕ್ಷಕ್ಕೆ ನನ್ನ ಬೆಂಬಲ ಇರಲಿದೆ. ಯಾರೇ ಬಂದರೂ ಬೆಂಬಲ ನೀಡುತ್ತೇನೆ ಎಂದಿದ್ದಾರೆ.

ಯಾವುದೇ ಪಕ್ಷ ಅಧಿಕಾರಕ್ಕೆ ಬರೋದಕ್ಕೆ ನಮ್ಮ ಪಕ್ಷ ಅನಿವಾರ್ಯ. ನಾನು ಆ ಮಾತನ್ನು ಬಹಿರಂಗವಾಗಿಯೇ ಹೇಳಿದ್ದೇನೆ. ಆ ಮಟ್ಟಕ್ಕೆ ಜನರ ಆಶೀರ್ವಾದ ನನಗೆ ಸಿಗ್ತಾ ಇದೆ. ನನ್ನ ಬಿಟ್ಟು ಸರಕಾರ ಮಾಡುವಂತಹ ಪರಿಸ್ಥಿತಿಯಲ್ಲಿ ಯಾರೂ ಇರಲಿಕ್ಕಿಲ್ಲ ಅಂತ ಸ್ಪಷ್ಟವಾಗಿ ಕಾಣ್ತಾ ಇದೆ. ಆ ಕಾನ್ಫಿಡೆನ್ಸ್ ನನ್ನಲ್ಲಿದೆ. ಖಂಡಿತವಾಗಿಯೂ ನಾನು ಇತರೆ ಪಕ್ಷಕ್ಕೆ ಅನಿವಾರ್ಯ ಆಗುತ್ತೇನೆ.

ಪಕ್ಷದ ಪ್ರಚಾರಕ್ಕಾಗಿ ಸ್ಟಾರ್ ಪ್ರಚಾರಕರನ್ನ ಕರೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು  ಈಗ ನಾನೊಬ್ಬನೇ ಪ್ರಚಾರಕ್ಕೆ ಹೊಗ್ತಿದ್ದೀನಿ. ಹೋರಾಟ ಮಾಡ್ತಿದ್ದೀನಿ. ಅಂತಹ ದೊಡ್ಡ ಸ್ಟಾರ ಪ್ರಚಾರಕರನ್ನ ಕರೆಸುವ ಪ್ರಶ್ನೇ ಇಲ್ಲ. ಆಂದ್ರದ ಸಿಎಂ ಸ್ನೇಹಿತರು. ಮಾಧ್ಯಮಗಳಲ್ಲಿ ಬರ್ತಾ ಇರೋದು ಸುಳ್ಳು ಮಾಹಿತಿ. ನಮ್ಮ ಜೊತೆ ಆಂಧ್ರ ಸಿಎಂ ಗೆ ಒಳ್ಳೆಯ ಸಂಬಂಧ ಇದೆ. ಸಂಬಂಧವೇ ಬೇರೆ ರಾಜಕೀಯವೇ ಬೇರೆ. ನಮ್ಮ ರಾಜ್ಯದಲ್ಲಿ ನಮ್ಮ ಕೆಲಸ ಮಾಡಿಕೊಂಡು ಹೋಗೋಣ. ಎಂದು ಜಮಖಂಡಿಯಲ್ಲಿ ಕೆಆರ್ ಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.

ನನ್ನ ಸೋಲಿಸಲು ಬಂದ್ರೆ ನನಗೆ ಜಿದ್ದು ಇನ್ನೂ ಜಾಸ್ತಿ:
ಗಂಗಾವತಿಯಲ್ಲಿ ರೆಡ್ಡಿ ಸೋಲಿಸಲು ಬಿಜೆಪಿಗರ ಪ್ಲ್ಯಾನ್ ವಿಚಾರ‌‌ಕ್ಕೆ ಸಂಬಂಧಿಸಿದಂತೆ ಜಮಖಂಡಿಯಲ್ಲಿ  ಮಾತನಾಡಿದ ಜನಾರ್ಧನ ರೆಡ್ಡಿ, ನನ್ನ ಮೇಲೆ ಕಾಳಜಿ ವಹಿಸಿ ಸೋಲಿಸಬೇಕೆಂದು ಪ್ರಯತ್ನ ಮಾಡಿದ್ರೆ, ಇದರಿಂದ ನನಗೆ ಜಿದ್ದು ಇನ್ನೂ ಹೆಚ್ಚಾಗಲಿದೆ. ನನ್ನ ಮತಕ್ಷೇತ್ರದ 92 ಹಳ್ಳಿಗಳ ಪೈಕಿ 80 ಹಳ್ಳಿ ಓಡಾಡಿದ್ದೇನೆ, 12 ಹಳ್ಳಿ ಬಾಕಿ ಇವೆ. ಪ್ರತಿ ಹಳ್ಳಿಯಲ್ಲೂ ಒಳ್ಳೆಯ ರೀತಿಯಿಂದ ಸ್ವಾಗತ ಮಾಡಿದ್ದಾರೆ. ಒಳ್ಳೆಯ ಬಹುಮತದಿಂದ ಗಂಗಾವತಿಯಲ್ಲಿ ಗೆಲ್ತೇನೆ ಅನ್ನೋ ವಿಶ್ವಾಸ ನನಗೆ ಬಂದಿದೆ ಎಂದರು.

2028ಕ್ಕೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಜನಾರ್ದನ ರೆಡ್ಡಿಯ ಕೆಆರ್‌ಪಿಪಿ!

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ  ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದರು. ಸಮಾವೇಶಕ್ಕೂ ಮುನ್ನ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ, ಸಂಗಮನಾಥ ದೇವಾಲಯದಲ್ಲಿ  ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬಸವಣ್ಣನ ಐಕ್ಯಮಂಟಪದಲ್ಲಿ ಐಕ್ಯಮಂಟಪ ದರ್ಶನ ಮಾಡಿದರು. ಖಜ್ಜಿಡೋಣಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ತೊಡೆ ತಟ್ಟಿ ಹೇಳ್ತೇನೆ ಅಪ್ಪ-ಮಗ ಅಖಾಡಕ್ಕೆ ಬರಲಿ: ಈಶ್ವರಪ್ಪಗೆ ಸವಾಲೊಡ್ಡಿದ ಆಯನೂರು

ತಮ್ಮ ಪಕ್ಷದ ಚಿಹ್ನೆ ಪುಟ್ ಬಾಲ್  ಇದಕ್ಕೆ ತಮ್ಮನ್ನು ಆಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ, ನನ್ನವರು ಅಂತ ನಂಬಿ ಸ್ವಚ್ಚವಾಗಿ ನೇರ ನಡೆನುಡಿಯ ರಾಜಕಾರಣ ನಾನೇನು ಮಾಡಿದ್ದೇನೆ. ಅದರ ದುರುಪಯೋಗ ಮಾಡಿಕೊಂಡು ಬಿಟ್ಟು. ಪುಟ್ ಬಾಲ್ ಮಾದರಿಯಲ್ಲಿ ನನ್ನ ಇಡೀ ಜೀವನದಲ್ಲಿ ಆಟ ಆಡಿಸಿಕೊಂಡು ಬಂದಿದ್ದಾರೆ. ಹಲವು ಸಮಸ್ಯೆಗಳಲ್ಲಿ ಸಿಲುಕಿ ಹಾಕಿಸಿದ್ದಾರೆ. ರಾಜ್ಯದ ಜನರೇ ಅವರನ್ನು ಪುಟ್ ಬಾಲ್ ಆಡಿ ಮತ ನೀಡಿ ಪಾಠ ಕಲಿಸಲಿದ್ದಾರೆ. ನನ್ನ ಪುಟ್ ಬಾಲ್ ಚಿಹ್ನೆಗೆ ಮತ ಹಾಕಬೇಕು ಅಂತ ನಾ ಕೇಳಿಕೊಳ್ಳುತ್ತೇನೆ. ನಮ್ಮವರೇ ಅಂತಲ್ಲ ಎಲ್ಲರೂ ಸೇರಿ ಇಡೀ ರಾಜ್ಯದಲ್ಲಿ 
ನಾನು ಒಂದು ಕಡೆ ಆದರೆ ಎಲ್ಲರೂ ಇನ್ನೊಂದು ಕಡೆ ಸೇರಿ ಪುಟ್ವಾಲ್ ತರಹ ಆಡಿದರು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ