ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಸ್ಪರ್ಧೆ: ದೇವೇಗೌಡ

By Kannadaprabha News  |  First Published Sep 4, 2023, 1:00 AM IST

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. 
 


ಹಾಸನ (ಸೆ.04): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರು ಸಂಸದ ಸ್ಥಾನದಿಂದ ಅನರ್ಹರಾದ ನಂತರ ಕಳೆದೆರಡು ದಿನಗಳಿಂದ ಹುಟ್ಟೂರಿನಲ್ಲಿ ನೆಲೆಸಿರುವ ದೇವೇಗೌಡರು, ಎರಡನೇ ದಿನವಾದ ಭಾನುವಾರವೂ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಹುಟ್ಟೂರು ಹರದನಹಳ್ಳಿಯ ದೇವೇಶ್ವರ ಹಾಗೂ ಬೈಲಹಳ್ಳಿಯ ಲಕ್ಷ್ಮಿ ಜನಾರ್ಧನಸ್ವಾಮಿ ದೇಗುಲಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿ, ತಮ್ಮ ಕುಟುಂಬದ ಎಲ್ಲಾ 46 ಸದಸ್ಯರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಒಗ್ಗಟ್ಟಾಗಿ ಹೋಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಇದುವರೆಗೂ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಹೀಗಿರುವಾಗ ನಾವು ಯಾರ ಜೊತೆ ಮಾತನಾಡಲು ಸಾಧ್ಯ. ಇಲ್ಲಿ ಬಿಜೆಪಿಯವರೇ ಒಗ್ಗಟ್ಟಾಗಿಲ್ಲ. ಇದುವರೆಗೂ ಅವರ ನಾಯಕ ಯಾರು ಎಂದು ಗುರುತಿಸಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ನಾವು ಹೊಂದಾಣಿಕೆ ಕುರಿತು ಯಾರ ಜೊತೆ ಮಾತನಾಡಲು ಆಗುತ್ತದೆ ಎಂದು ಪ್ರಶ್ನಿಸಿದರು.

Latest Videos

undefined

ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ

ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು?: ಅವಧಿ​ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲ್ಯಾನ್‌ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿರುವ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮುಂಬೈನಲ್ಲಿ 28 ಗುಂಪಿನ ಒಂದು ದೊಡ್ಡ ಮಹಾಸಭೆ ನಡೆಯಿತು. ಸೆ.30 ರೊಳಗೆ ಎಲ್ಲಾ ಸೀಟ್‌ ನಿಗದಿ ಮಾಡ್ತಿವಿ ಅಂತ ಹೇಳಿದ್ರು.... ಏನಾಯ್ತು?. ಅದಕ್ಕೆ ಎಂದು ಒಂದು ಕಮಿಟಿ ಮಾಡಿದ್ದಾರೆ. ಅದರ ಲೀಡರ್‌ ಯಾರು?. ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೇಳಿದ್ದಾರಾ?, 

ಆ ಒಕ್ಕೂಟದ ಸಂಚಾಲಕರು ಯಾರು ಎಂದು ಹೇಳಿದ್ದಾರಾ? ಇಲ್ಲ. ಪ್ರಧಾನಿ ಅಭ್ಯರ್ಥಿ ಆಯ್ಕೆ ಕುರಿತು ಮುಖಾಮುಖಿ ಮಾತನಾಡುತ್ತೇವೆ ಎಂದಿದ್ದಾರೆ. ಆದರೆ, ಅವರಿಗೆ ಅದು ಕಷ್ಟವಿದೆ ಎಂದರು. ಮುಂಬೈನಲ್ಲಿ ಎರಡು ದಿನ ಮೀಟಿಂಗ್‌ ನಡಿತು ಅಷ್ಟೆ. ಆಮೇಲೆ ಏನೂ ಮಾಡಿಲ್ಲ. ಕೇವಲ ಕಮಿಟಿ ರಚಿಸಿಕೊಂಡರೆ ಸಾಕಾ... ಇನ್ನೂ ಚುನಾವಣೆಗೆ ಏಳು-ಎಂಟು ತಿಂಗಳು ಬಾಕಿ ಇದೆ. ನೋಡೋಣ ಬನ್ನಿ ನಾನು ಬದುಕಿರುತ್ತೇನೆ ಎನ್ನುವ ಮೂಲಕ ಇಂಡಿಯಾ ಒಕ್ಕೂಟಕ್ಕೆ ಚಾಟಿ ಬೀಸಿದರು.

ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್‌ ಸಿಂಹ ವಾಗ್ದಾಳಿ

ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಚಾಮುಂಡಿ ದೇವಿಗೂ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ಕೊಟ್ಟು ನಮಗೆ ಶಕ್ತಿ ಕೊಡು ಅಂತ ಕೇಳಿದ್ದಾರೆ. ಆ ಗ್ಯಾರಂಟಿ ಹೇಗೆ ನಡೆಯುತ್ತದೆ. ಎಷ್ಟುದಿನ ನಡೆಯುತ್ತದೆ ಎಂಬುದರ ಬಗ್ಗೆ ಈಗ ವ್ಯಾಖ್ಯಾನ ಮಾಡುವುದಿಲ್ಲ. ಮೂರ್ನಾಲ್ಕು ತಿಂಗಳು ಕಾಯೋಣ. ಇನ್ನು, ಬಿಜೆಪಿಯವರು ಮಾಡಿರುವ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ದಿನಾ ತಮಟೆ ಹೊಡೆಯುತ್ತಿದ್ದಾರೆ. ಅವರನ್ನು ತನಿಖೆ ಮಾಡಬೇಡಿ ಎಂದು ಹಿಡಿದುಕೊಂಡಿರುವವರು ಯಾರು...? ಬಿಟ್‌ ಕಾಯಿನ್‌ ಬಗ್ಗೆಯೂ ತನಿಖೆ ನಡೆಸಲಿ ಎಂದರು.

click me!