ಉಚಿತ ಭಾಗ್ಯ ಮುಂದುವರಿದರೆ ಮುಂದೆ ಚುನಾವಣೆ ನಡೆಸೋದಕ್ಕೆ ಕಷ್ಟವಾಗುತ್ತೆ: ಮಾಧುಸ್ವಾಮಿ ಬೇಸರ

By Ravi Janekal  |  First Published Jul 3, 2023, 11:31 AM IST

'ಕೆಲಸ ಮಾಡಿದ್ದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ ಆದರೆ ಕಡೆಗಣಿಸಿದ್ದಾರೆ' ಎಂದು ಮಾಜಿ ಸಚಿವ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.


ತುಮಕೂರು (ಜು.3): 'ಕೆಲಸ ಮಾಡಿದ್ದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ ಆದರೆ ಕಡೆಗಣಿಸಿದ್ದಾರೆ' ಎಂದು ಮಾಜಿ ಸಚಿವ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಚಿಕ್ಕನಾಯಕನಹಳ್ಳಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕೆಲಸ ಮಾಡಿದ್ದಕ್ಕೆ ಪ್ರತಿಫಲ ಸಿಗದೇ ಇರೋದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತವಲ್ಲ, ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ನಾಯಕರು ಸೋತಿದ್ದಾರೆ ಎಂದರು. ಚುನಾವಣೆ ಬಳಿಕ ಇದೇ ಮೊದಲ ಬಾರಿ ಮೌನ ಮುರಿದರು. 

Tap to resize

Latest Videos

 

ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್‌ ಸರ್ಕಾರ ಪತನ: ಮಾಧುಸ್ವಾಮಿ

ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸ ಅನಿಸಲೇ ಇಲ್ಲ. ಅವರು ಉಚಿತ ಕೊಡುವ ಅಕ್ಕಿ, ದುಡ್ಡೇ ಶ್ರೇಷ್ಠ ಅನಿಸಿತು. ಉಚಿತ ಭಾಗ್ಯದ ಮುಂದೆ ನಮ್ಮ ಎಲ್ಲಾ ಕೆಲಸ ಕೊಚ್ಚಿಕೊಂಡು ಹೋಯಿತು. ನಾವು ಯಾವ ನೀರು ಕುಡಿದಿದ್ದೇವೆ, ಯಾವ ರಸ್ತೆಯಲ್ಲಿ ಓಡಾಡುತಿದ್ದೇವೆ ಅನ್ನೋದನ್ನು ಜನರು ಮರೆತರು. ಇದೇ ರೀತಿ ಉಚಿತ ಭಾಗ್ಯ ಮುಂದುವರಿದರೆ ಮುಂದೆ ಚುನಾವಣೆ ಮಾಡೋದು ತುಂಬಾ ಕಷ್ಟವಾಗುತ್ತದೆ ಎಂದರು.

ತೆರಿಗೆದಾರರ ದುಡ್ಡನ್ನು ನಮಗೆ ಇಷ್ಟ ಬಂದಹಾಗೆ ಮನೆಯಲ್ಲಿ ಕುಂತವರಿಗೆ ಇಷ್ಟ ಬಂದಹಾಗೆ ಹಂಚುತ್ತೇನೆ ಎಂದರೆ ರಾಜ್ಯದ ಪರಿಸ್ಥಿತಿ ಏನಾಗಬೇಡ. ಕೆಲ ವಿದ್ಯಾವಂತ ಉದ್ಯೋಗಸ್ಥ ಯುವಕರು ನನ್ನ ಬಳಿ ಬಂದು ಕೇಳಿದ್ರು. ನಾವು ತೆರಿಗೆ ಕಟ್ಟೋರು ಉಚಿತ ಭಾಗ್ಯದ ವಿರುದ್ಧ ಹೋರಾಟ ಮಾಡಿದ್ರೆ ಮಾತ್ರ ಇದು ನಿಲ್ಲಬಹುದೇನೋ ಎಂದು ಚರ್ಚೆ ಮಾಡಿದ್ರು.

ಕಾಂಗ್ರೆಸ್ ಮಾಡಿದ ಪಾಪಕ್ಕೆ ಈಗ ಮೋದಿ ಅಕ್ಕಿ ಕೊಟ್ಟಿಲ್ಲ ಎಂದು ಸುಮ್ಮನೆ ದೂಷಣೆ ಮಾಡುತ್ತಾರೆ. ನಾವೂ ಕೂಡ ರಾಜ್ಯದಲ್ಲಿ ಕನಿಷ್ಠ 7 ಕೆ.ಜಿ.ಅಕ್ಕಿ ಕೊಡಬೇಕು ಎಂದು 10 ಬಾರಿ ಪ್ರಯತ್ನ ಪಟ್ವಿ. ಆದರೆ ಹೆಚ್ಚುವರಿ ಅಕ್ಕಿ ಕೊಡಲು ಪ್ರಧಾನಿ ಮೋದಿ ಒಪ್ಪಿಲ್ಲ. ಬಿಜೆಪಿ ಆಡಳಿತದ ರಾಜ್ಯಕ್ಕೂ ಕೇಂದ್ರ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಆಹಾರ ಭದ್ರತಾ ಕಾಯಿದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150-200 ಗ್ರಾಂ ಅಕ್ಕಿ ಸಾಕು ಎಂದು ವೈಜ್ಞಾನಿಕವಾಗಿ ಅಂದಾಜಿಸಲಾಗಿದೆ. ಹಾಗಾಗಿ ತಿಂಗಳಿಗೆ 5ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ನಮ್ಮಲ್ಲಿ ದಾಸ್ತಾನು ಇರುವ ಅಕ್ಕಿ ಬರಗಾಲ, ಅತಿವೃಷ್ಟಿ  ಸಂಕಷ್ಟ ಕಾಲದಲ್ಲಿ ಕೊಡಲು ಇರುವುದು. ನಮ್ಮಲ್ಲಿ ಅಕ್ಕಿ ಇದೆ ಎಂದೇಳಿ ಬೇಕಾಬಿಟ್ಟಿ ಹಂಚೋಕಾಗುತ್ತಾ?

ನಾನು ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರುತ್ತೇನೆಂಬುದು ಸುಳ್ಳು: ಮಾಜಿ ಸಚಿವ ಮಾಧುಸ್ವಾಮಿ

ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಮೋದಿ ಅಕ್ಕಿ ಕೊಟ್ಟೆಕೊಡುತ್ತಾರೆ. ಮನೆಯಲ್ಲಿ ಸಂಸಾರ ನಡೆಸೋರು ಕಷ್ಟ ಕಾಲಕ್ಕೆ ಆಗಲಿ ಎಂದೇಳಿ ದುಡ್ಡು ಕೂಡಿಡುತ್ತಾರೆ. ಅದನ್ನು ನಾನು ಸಿನೆಮಾ ನೋಡೋಕೆ ಹೋಗ್ಬೇಕು, ಸ್ವೀಟ್ ತಿನ್ನೋಕೆ ಹೋಗ್ಬೇಕು ಕೊಡು ಅಂದರೆ ಕೊಡಕಾಗುತ್ತಾ? ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ಮಾರ್ಮಿಕವಾಗಿ ತಿವಿದರು

click me!