ಹುಲಿಗೆ ಬೇಟೆಗೆ ಸಿದ್ಧವಾದರೆ ಯಾರೂ ತಡೆಯಲಾಗದು: ಜನಾರ್ದನ ರೆಡ್ಡಿ

By Govindaraj SFirst Published Nov 6, 2022, 1:20 AM IST
Highlights

ಕೆಲ ದಿನಗಳ ಹಿಂದಷ್ಟೇ ನಮ್ಮವರೇ ನನಗೆ ಕಿರುಕುಳ ನೀಡಿದರು ಎಂದು ಹೇಳಿ ಸ್ವಪಕ್ಷದವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಈಗ, ‘ಹಸಿವಾದಾಗ ಹುಲಿ ಬೇಟೆಯಾಡಲೇ ಬೇಕಾಗುತ್ತದೆ’ ಎಂದು ಘರ್ಜಿಸಿದ್ದಾರೆ. 

ಬಳ್ಳಾರಿ (ನ.06): ಕೆಲ ದಿನಗಳ ಹಿಂದಷ್ಟೇ ನಮ್ಮವರೇ ನನಗೆ ಕಿರುಕುಳ ನೀಡಿದರು ಎಂದು ಹೇಳಿ ಸ್ವಪಕ್ಷದವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಈಗ, ‘ಹಸಿವಾದಾಗ ಹುಲಿ ಬೇಟೆಯಾಡಲೇ ಬೇಕಾಗುತ್ತದೆ’ ಎಂದು ಘರ್ಜಿಸಿದ್ದಾರೆ. ಅಲ್ಲದೆ, ‘ನಾನು ಅದೃಷ್ಟದಿಂದ ಮೇಲೆ ಬಂದವನು. ಹೀಗಾಗಿ, ರಾಜಕೀಯ ಪ್ರವೇಶಕ್ಕೆ ಕಾಂಗ್ರೆಸ್‌, ಬಿಜೆಪಿ ಎಂದು ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ. ನಗರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ನಾನು ಕಾರ್ಯಕ್ರಮಕ್ಕೆ ಬರುವಾಗ ರಸ್ತೆಯಲ್ಲಿದ್ದ ಒಬ್ಬ ಹುಡುಗ ಹುಲಿಯ ಚಿತ್ರ ತೋರಿಸಿ, ನನ್ನನ್ನು ಹುಲಿ ಎಂದು ಕರೆದ. 

ಹುಲಿ ಒಮ್ಮೆ ಬೇಟೆಯಾಡಲು ಸಿದ್ಧವಾದರೆ ಬೇಟೆ ಆಡಿಯೇ ತೀರುತ್ತದೆ. ಆಹಾರಕ್ಕಾಗಿ ಅದು ಬೇಟೆಯಾಡಲೇಬೇಕಾಗುತ್ತದೆ. ನಮ್ಮ ರಕ್ತ ಕೂಡ ಅಂತಹದ್ದೇ. ನನ್ನ ತಂದೆ ಪೊಲೀಸ್‌ ಪೇದೆಯಾಗಿದ್ದರೂ, ನನ್ನ ತಾತ ರಾಜನಂತೆ ಬದುಕಿದವರು. ಅವರ ರಕ್ತ ನನ್ನಲ್ಲಿದೆ. ಅದನ್ನು ಬದಲಿಸಲಾಗದು. ಕಳೆದ 12 ವರ್ಷಗಳಿಂದ ನಾನು ಸುಮ್ಮನೆ ಇದ್ದೇನೆ ಎಂದರೆ ಕೈಯಿಂದ ಏನೂ ಆಗುವುದಿಲ್ಲ ಎಂದರ್ಥವಲ್ಲ. ಹುಲಿ ಬೇಟೆಯಾಡಲು ಸಿದ್ಧವಾದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ತನ್ನ ಹಸಿವು ನೀಗಿಸಿಕೊಳ್ಳಲು ಬೇಟೆಯಾಡಿಯೇ ತೀರುತ್ತದೆ’ ಎಂದರು.

Ballari: ಅಪ್ಪು ಮರೆಯಾದ್ರು ಮುಗಿಯದ ಅಭಿಮಾನ: ಕೃಷ್ಣ ಶೀಲೆಯಲ್ಲಿ ಪುನೀತ್‌ ಪ್ರತಿಮೆ ಅನಾವರಣ

‘ಕೆಲವೊಬ್ಬರು ನನ್ನನ್ನು ಬಳ್ಳಾರಿಯಿಂದ ಹೊರ ಹಾಕಲು ಯತ್ನಿಸುತ್ತಿದ್ದಾರೆ. ಆದರೆ, ಎರಡು-ಮೂರು ತಿಂಗಳಲ್ಲಿ ಮತ್ತೆ ಬಳ್ಳಾರಿಗೆ ಬರುತ್ತೇನೆ. ನನ್ನ ಕುಟುಂಬ ಬಳ್ಳಾರಿ ಜನರ ಸೇವೆಗೆ ಸೀಮಿತವಾಗಿದೆ. ನಾನು ಬಳ್ಳಾರಿಯಲ್ಲಿಯೇ ಇರುತ್ತೇನೆ. ನನ್ನ ಕೊನೆಯ ಉಸಿರು ಇರೋವರೆಗೂ ನನ್ನ ಈ ಜೀವನವನ್ನು ಬಳ್ಳಾರಿ ಜನರಿಗಾಗಿ ಮುಡುಪಾಗಿಡುತ್ತೇನೆ’ ಎಂದು ಪುನರುಚ್ಛರಿಸಿದರು.

ಜನಾರ್ದನ ರೆಡ್ಡಿ ನಮ್ಮ ನಾಯಕರು: ಜನಾರ್ದನ ರೆಡ್ಡಿ ಅವರು ನಮ್ಮ ನಾಯಕರು. ಅವರಿಗೇನಾದರೂ ಬೇಸರವಾಗಿದ್ದರೆ ಭೇಟಿ ಮಾಡಿ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಸಚಿವ ಬಿ.ಶ್ರೀರಾಮುಲು ಹೇಳಿದರು. ‘ನನಗೆ ನಮ್ಮವರೇ ಕಿರುಕುಳ ನೀಡಿದರು’ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಬಿಜೆಪಿ ಪಕ್ಷದ ಪ್ರಗತಿಗೆ ಜನಾರ್ದನ ರೆಡ್ಡಿಯವರ ಕೊಡುಗೆ ತುಂಬಾ ಇದೆ. ಒಂದು ವೇಳೆ ಅವರಿಗೆ ಬೇಸರವಾಗಿದ್ದರೆ ನಮ್ಮ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ, ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. 

ನಾನು ಬಳ್ಳಾರಿಯಲ್ಲಿರಲು ಸುಪ್ರೀಂಕೋರ್ಟ್‌ ಒಪ್ಪಿದೆ: ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ ಅವರು ನಮ್ಮ ಮನವೊಲಿಕೆಯನ್ನು ತಿರಸ್ಕರಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದರು. ಜನಾರ್ದನ ರೆಡ್ಡಿಯವರು ಬಿಜೆಪಿಯಲ್ಲಿಯೇ ಇದ್ದಾರೆ. ಅವರು ಸಕ್ರೀಯ ರಾಜಕಾರಣಕ್ಕೆ ಬರುವ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಅವರನ್ನು ರಾಜಕೀಯದಲ್ಲಿ ಸಕ್ರೀಯಗೊಳಿಸುವ ಸಂಬಂಧ ಪಕ್ಷದ ಹಿರಿಯರ ಜೊತೆ ಮಾತನಾಡಬೇಕಾಗುತ್ತದೆ. ಶ್ರೀರಾಮುಲು ತೀರ್ಮಾನ ಅಂತಿಮವಾಗುವುದಿಲ್ಲ ಎಂದರು.

click me!