ಇದು ನನ್ನ ಕೊನೆ ಚುನಾವಣೆ, ಇನ್ಮುಂದೆ ಸ್ಪರ್ಧಿಸಲ್ಲ: ಗೆದ್ದ ಶಾಸಕನ ಅಚ್ಚರಿಯ ಹೇಳಿಕೆ!

By Suvarna NewsFirst Published Dec 9, 2019, 4:20 PM IST
Highlights

ಇದು ನನ್ನ ಕೊನೆ ಚುನಾವಣೆ, ಇನ್ಮುಂದೆ ಯಾವುದೇ ಚುನಾವಣೆಗೂ ಸ್ಪರ್ಧೆ ಮಾಡಲ್ಲ| ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಕಟ್ಟುವ ಕೆಲಸ ಮಾಡ್ತೇನೆ| ಬಿಜೆಪಿ ಕಾರ್ಯಕರ್ತರ ಗೆಲುವು| ಎಲ್ಲರಿಗೂ ಅಭಿನಂದನೆಗಳನ್ನ ಸಲ್ಲಿಸುತ್ತೇನೆ

ಬೆಂಗಳೂರು[ಡಿ.09]: ಕರ್ನಾಟಕ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಗೆಲುವಿನ ನಗು ಬೀರಿದೆ. ಈ ಮೂಲಕ ಕರ್ನಾಟಕ ಸರ್ಕಾರ ಸುಭದ್ರಗೊಂಡಿದೆ. ಹುಣಸೂರು ಹೊರತುಪಡಿಸಿ ಬೇರೆಲ್ಲಾ ಕ್ಷೇತ್ರಗಳಲ್ಲಿ ಅನರ್ಹರೆಸಿಸಿಕೊಂಡಿದ್ದ ಶಾಸಕರಿಗೆ ಜನರು ಮತ ನೀಡಿ ಗೆಲ್ಲಿಸಿದ್ದಾರೆ. ಹೀಗಿರುವಾಗ ಶಾಸಕರೊಬ್ಬರು ಇದು ತನ್ನ ಕೊನೆ ಚುನಾವಣೆ, ಇನ್ಮುಂದೆ ತಾನು ಯಾವ ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿ

ಹೌದು ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಶಾಸಕರಲ್ಲೊಬ್ಬರಾದ ಆನಂದ್ ಸಿಂಗ್ ಇಂತಹ ಘೋಷಣೆ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ವಿಜಯಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಆನಂದ್ ಸಿಂಗ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. 'ಇದು ನನ್ನ ಕೊನೆ ಚುನಾವಣೆ, ಇನ್ಮುಂದೆ ಯಾವುದೇ ಚುನಾವಣೆಗೂ ಸ್ಪರ್ಧೆ ಮಾಡಲ್ಲ. ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಕಟ್ಟುವ ಕೆಲಸ ಮಾಡ್ತೇನೆ' ಎಂದಿದ್ದಾರೆ

ಹೊಸಪೇಟೆಯಲ್ಲಿ ತನ್ನನ್ನು ಗೆಲ್ಲಿಸಿದ ಮತದಾರರಿಗೆ ಧನ್ಯವಾದ ತಿಳಿಸಿ ಮಾತನಾಡಿದ ಶಾಸಕ ಆನಂದ್ ಸಿಂಗ್ 'ಇದು ಆನಂದ್ ಸಿಂಗ್ ಗೆಲುವಲ್ಲ, ಜನರ ಗೆಲುವು. ಬಿಜೆಪಿ ಕಾರ್ಯಕರ್ತರ ಗೆಲುವು. ಎಲ್ಲರಿಗೂ ಅಭಿನಂದನೆಗಳನ್ನ ಸಲ್ಲಿಸುತ್ತೇನೆ. ಕ್ಷೇತ್ರದ ಎಲ್ಲ ಯೋಜನೆಗಳನ್ನು ಈಡೇರಿಸುವೆ. ವಿಜಯನಗರವನ್ನ ಜಿಲ್ಲೆ ಮಾಡುವುದಾಗಿ ಹೇಳಿ ಸ್ಪರ್ಧಿಸಿ, ಗೆದ್ದಿದ್ದೇನೆ. ವಿಜಯನಗರ ಜಿಲ್ಲೆಯೂ ಆಗುತ್ತೆ, ನಾನು ಸಚಿವನಾಗ್ತೇನೆ ಎಂಬ ಭರವಸೆ ನನಗಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬೈ ಎಲೆಕ್ಷನ್: ಒಂದೇ ಕ್ಲಿಕ್, ಹಲವು ಸುದ್ದಿಗಳು

ಡಿಸೆಂಬರ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!