ಸೊಲ್ಲೇ ಇಲ್ಲದ ಕೆಆರ್ ಪೇಟೆಯಲ್ಲಿ ಕಮಲ ಅರಳಿದ್ದೇಗೆ? ಹೊಸ ರಾಜಕೀಯ ಚಾಣಕ್ಯ ಮಾಡಿದ ಆ ಒಂದು ಕೆಲಸ!

By Suvarna News  |  First Published Dec 9, 2019, 4:06 PM IST

ಕೆಆರ್ ಪೇಟೆಯಲ್ಲಿ ಇತಿಹಾಸ ಸೃಷ್ಟಡಿಸಿದ ಬಿಜೆಪಿ/ ಮೊಟ್ಟ ಮೊದಲ ಬಾರಿಗೆ ಕೆಆರ್ ಪೇಟೆಯಲ್ಲಿ ಕಮಲ ವಿಜಯ/ ವಿಜಯದ ಹಿಂದೆ ವಿಜಯೇಂದ್ರ ಶ್ರಮ/ ಉಪಚುನಾವಣೆ ಫಲಿತಾಂಶದ ನಂತರ ಹಳೇ ಮೈಸೂರು ರಾಜಕಾರಣದಲ್ಲಿ ಬದಲಾವಣೆ ಗಾಳಿ


ಕೆಆರ್ ಪೇಟೆ(ಡಿ. 09) ಉಪಚುನಾವಣೆ ಫಲಿತಾಂಶ ಬಂದಿದೆ. ಬಿಜೆಪಿ ಜಯಭೇರಿ ಬಾರಿಸಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಭಾರೀ ಮುಖಭಂಗ ಆಗಿದೆ. ಮೈಸೂರು ಕರ್ನಾಟಕದಲ್ಲಿಯೂ ಕಮಲ ಅರಳಿ ದಾಖಲೆ ಮಾಡಿದೆ. ಕೆಆರ್ ಪೇಟೆಯಿಂದ ನಾರಾಯಣಗೌಡ ಬಿಜೆಪಿ  ಶಾಸಕರಾಗಿ ವಿಧಾನಸೌಧ ಪ್ರವೇಶ ಮಾಡುತ್ತಿದ್ದಾರೆ.

ಹಾಗಾದರೆ ಬಿಜೆಪಿಗೆ ನೆಲೆಯೇ ಇಲ್ಲದ ಕೆಆರ್ ಪೇಟೆಯಲ್ಲಿ 9  ಸಾವಿರ ಮತಗಳ ಅಂತರದಲ್ಲಿ ನಾರಾಯಣ ಗೌಡ ಗೆದ್ದು ಬೀಗಿದ್ದಾರೆ. ಹಾಗಾದರೆ ಈ ಗೆಲುವಿಗೆ ನಾರಾಯಣ ಗೌಡರ ವರ್ಚಸ್ಸು ಮಾತ್ರ ಕಾರಣವಾ? ಖಂಡಿತ ಇಲ್ಲ.

Tap to resize

Latest Videos

undefined

ಗೆಲುವಿನ ಹಿಂದೆ ಇರುವುದು ರಾಜ್ಯದ ಮಟ್ಟಿಗೆ ಹೊಸ ರಾಜಕೀಯ ಚಾಣಕ್ಯ ಬಿವೈ ವಿಜಯೇಂದ್ರ. ಚುನಾವಣೆ ಘೋಷಣೆ ಆಗುವ ಮುನ್ನವೇ ವಿಜಯೇಂದ್ರ ಕೆಆರ್ ಪೇಟೆಯಲ್ಲಿ ಕಾರ್ಯಕರ್ತರ ಪಡೆ ಕಟ್ಟುವ ಕೆಲಸ ಮಾಡುತ್ತಿದ್ದರು. ಹಾಗಾದರೆ ಕೆಆರ್ ಪೇಟೆ ಗೆಲುವಿಗೆ ಕಾರಣಗಳು ಏನು?

ವಿಜಯೇಂದ್ರ ತಂತ್ರಗಾರಿಕೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿತ್ತು. ಆಗಲೂ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ವಿಜಯೇಂದ್ರ ಜನರೊಂದಿಗೆ ಬೆರೆಯುವ ಕೆಲಸ ಮಾಡಿದ್ದರು.

ಬಿಎಸ್ ವೈ ಹುಟ್ಟೂರು: ಕೆಆರ್ ಪೇಟೆಯ  ಬೂಕನಕೆರೆ ಸಿಎಂ ಬಿಎಸ್ ಯಡಿಯೂರಪ್ಪ ಜನ್ಮಸ್ಥಳ. ಅದು ಏನೇ ಆಗಲಿ ಈ ಸಾರಿ ಕೆಆರ್ ಪೇಟೆಯಲ್ಲಿ ಇತಿಹಾಸ ಸೃಷ್ಟಿ ಮಾಡಲೇಬೇಕು ಎಂದು ವಿಜಯೇಂದ್ರ ಹಠ ತೊಟ್ಟಿದ್ದರು.

ಗೆದ್ದ ನಂತರ ಸಿದ್ದರಾಮಯ್ಯಗೆ ಖಡಕ್ ಎಚ್ಚರಿಕೆ

ಪ್ರತ್ಯೇಕ ಪ್ರಣಾಳಿಕೆ: ಉಪಚುನಾವಣೆ ಸಂದರ್ಭ ಬಿಜೆಪಿ ಕೆಆರ್ ಪೇಟೆಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿ ಮತದಾರರನ್ನು ಸೆಳೆಯುವ ಕೆಲಸ ಮಾಡಿತ್ತು. ಈ ಪ್ರಣಾಳಿಕೆ ಸಿದ್ಧ ಮಾಡುವುದರ ಹಿಂದೆ ವಿಜಯೇಂದ್ರ ಶ್ರಮ ಇತ್ತು. ವಿಜಯೇಂದ್ರ ಇಡೀ ಕ್ಷೇತ್ರದಲ್ಲಿ ನಿರಂತರ ಜನ ಸಂಪರ್ಕ ಮಾಡುತ್ತಲೇ ಬಂದಿದ್ದರು.

ಮಹಿಳಾ ಮತ್ತು ಯುವ ಮತದಾರರು: ಮಹಿಳಾ ಮತ್ತು ಯುವ ಮತದಾರರು ಬಿಜೆಪಿ ಪರವಾಗಿ ವಾಲಿದ್ದು ಈ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಜಾತಿ, ಪ್ರಾಂತ್ಯ ಭಾವನೆಗಳನ್ನು ಮೀರಿ ಈ ಬಾರಿ ಕೆಆರ್ ಪೇಟೆಯಲ್ಲಿ  ಚುನಾವಣೆ ನಡೆದಿರುವುದು ಸತ್ಯ.

ಡಿಸೆಂಬರ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!