ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಬಾರಿ ಯಾವುದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೆ ಒಳ್ಳೆಯದು ಎಂದು ಮಾಜಿ ಸಚಿವ ಸಂತೋಷ ಲಾಡ್ ರಾಜಕೀಯ ವಲಯದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿ (ನ.18) ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ, ಗಣಿ ದಣಿ ಹಾಗೂ ಸಿದ್ದರಾಮಯ್ಯ ಅವರ ಪರಮ ಆಪ್ತ ಎನಿಸಿಕೊಂಡಿರುವ ಸಂತೋಷ ಲಾಡ್, ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆಗೆ ವಿರೋಧಿಸಿದ್ದಾರೆ. ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳುವ ಮೂಲಕ ಮಾಜಿ ಸಚಿವ ಸಂತೋಷ ಲಾಡ್ ರಾಜಕೀಯದಲ್ಲಿ ಹೊಸ ಬಾಂಬ್..! ಸಿಡಿಸಿದ್ದಾರೆ.
ಹುಬ್ಬಳ್ಳಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರು ವಯಸ್ಸು (Age), ಇತ್ಯಾದಿ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ. ಅವರು ಪಕ್ಷ ಬಲಪಡಿಸುವ ಕೆಲಸ ಮಾಡಲಿ. ರಾಜ್ಯ ನಾಯಕರಾದ ಅವರು ಒಂದು ಕ್ಷೇತ್ರದಲ್ಲಿ ಸ್ಪರ್ದಿಸಿ, ಅಲ್ಲಿಗೆ ಸೀಮಿತ ಆಗೋದ ಬೇಡ. ಈಗ ಕೋಲಾರ ಮತ್ತಿತರ ಕಡೆ ಸ್ಪರ್ಧಿಸ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸಿದ್ಧರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೇ ಗೆಲ್ಲುತ್ತಾರೆ. ಆದರೆ ಚುನಾವಣೆ ಸ್ಪರ್ದಿಸಿದಾಗ ಆ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಇದರಿಂದಾಗಿ ರಾಜ್ಯದ ವಿವಿಧೆಡೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅವರ ಪ್ರಚಾರದ (promotion) ಕೊರತೆ ಆಗುತ್ತದೆ. ಹೀಗಾಗಿಯೇ ಅವರು ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡದೇ ರಾಜ್ಯ ಸುತ್ತಾಟ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಒಳ್ಳೆಯದು. ಅದರಿಂದ ಕಾಂಗ್ರೆಸ್ (Congres) ಪಕ್ಷಕ್ಕೇ ಲಾಭವಾಗುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ (Personal opinion) ಆಗಿದೆ ಎಂದು ಹೇಳಿದರು.
ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ: ಸಿದ್ದರಾಮಯ್ಯ
ರಾಜ್ಯಾಧ್ಯಕ್ಷರ ಸ್ಪರ್ಧೆಯೂ ಬೇಡ: ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಒಂದು ಕ್ಷೇತ್ರದಿಂದ ಸ್ಪರ್ಧೆ (competite) ಮಾಡುವುದು ಬೇಡ. ಅವರು ಸಹ ರಾಜ್ಯ ಸುತ್ತಾಟ ಮಾಡಿ ಪ್ರಚಾರದಲ್ಲಿ ತೊಡಗಿಸಿಕೊಂಡರೆ ಅನುಕೂಲ ಆಗಲಿದೆ. ಹೀಗಾಗಿ ಇಬ್ಬರು ನಾಯಕರು (Leaders) ಚುನಾವಣೆ ಸ್ಪರ್ದಿಸದೇ ಇದ್ದರೆ ಒಳ್ಳೆಯದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ (Election) ಸ್ಪರ್ಧಿಸದೇ ಅಧಿಕಾರ ನಡೆಸಬಹುದು ಎಂದು ಹೇಳಿದರು.
ನಾಗರಾಜ ಛಬ್ಬಿ ನಡೆಗೆ ಕಿಡಿ: ನಾಗರಾಜ ಛಬ್ಬಿ (Nagaraj Chabbi) ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಲಾಡ್ ಅವರನ್ನು ಬಳ್ಳಾರಿಗೆ (Ballari) ಕಳಿಸಿ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರು ನನಗೆ ಬಳ್ಳಾರಿಗೆ ಹೋಗಿ ಎಂದು ಹೇಳಿದ್ದಾರೆ. ಆದರೆ, ಈಗ ನಾನು ಕಲಘಟಗಿ (Kalaghatagi)ಯಿಂದಲೇ ಸ್ಪರ್ಧೆಸುತ್ತೇನೆ. ನಾಗರಾಜ ಛಬ್ಬಿ ಮತ್ತು ನಾನು ಒಳ್ಳೆಯ ಸ್ನೇಹಿತರು. ಕಲಘಟಗಿಯಲ್ಲಿ ಕ್ಷೇತ್ರದಲ್ಲಿ ಅವರು ಕುಕ್ಕರ್ (Cooker) ಹಂಚುತ್ತಿದ್ದಾರೆ ಅನ್ನೊ ವಿಷಯ ಗೊತ್ತಾಗಿದೆ. ಎರಡು ಮೂರು ಹಳ್ಳಿಗಳಲ್ಲಿ ಓಡಾಡುತ್ತಿದ್ದಾರೆ. ಜೊತೆಗೆ ನನಗೆ ಟಿಕೇಟ್ ಕೊಡುತ್ತಾರೆ ಎಂದು ಹೇಳಿಕೊಂಡಿರುವುದರಿಂದ ಗೊಂದಲ (Confuse) ಸೃಷ್ಟಿಯಾಗಿದೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಅಂತ ಹೈಕಮಾಂಡ್ (High Command) ನಿರ್ಧರಿಸುತ್ತದೆ ಎಂದು ತಿಳಿಸಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಗೆ ಚಕ್ರವ್ಯೂಹ: ಟಗರು ಬೇಟೆಗೆ ಖೆಡ್ಡಾ ರೆಡಿ
ನನ್ನಿಂದಲೇ ಕಾಂಗ್ರೆಸ್ ಖಾತೆ ತೆರೆದಿದೆ: ಕಲಘಟಗಿಯಲ್ಲಿ 2008ಕ್ಕಿಂತ ಮುಂಚಿತವಾಗಿ ಒಮ್ಮೆಯೂ ಕಾಂಗ್ರೆಸ್ (Congress) ಗೆದ್ದಿರಲಿಲ್ಲ. ನಾನು ಕ್ಷೇತ್ರಕ್ಕೆ ಬಂದ ಮೇಲೆ ಕಾಂಗ್ರೆಸ್ ಮೊದಲ ಗೆಲುವು ಸಾಧಿಸಿತು. ಆ ಕ್ಷೇತ್ರದಿಂದ ನಾನು 2 ಬಾರಿ ಗೆದ್ದಿದ್ದೇನೆ. ಮುಂದೆಯೂ ಸ್ಪರ್ಧಿಸಬೇಕೆಂಬ ಇಚ್ಚೆ ಹೊಂದಿದ್ದೇನೆ. ಆದರೆ, ಕಾಂಗ್ರೆಸ್ ಟಿಕೆಟ್ ಸಿಗದಿದ್ದಲ್ಲಿ ನಾನು ಬಿಜೆಪಿ (BJP) ಸೇರಲ್ಲ. ರಾಜಕೀಯ ವಲಯದಲ್ಲಿ ಬಿಜೆಪಿ ಸೇರುತ್ತೇನೆ ಎನ್ನುವುದು ಕೇವಲ ಊಹಾಪೋಹ (speculation) ಆಗಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ನಿಂದಲೇ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸ್ತೇನೆ ಎಂದು ಸಂತೋಷ್ ಲಾಡ್ ತಿಳಿಸಿದರು.