ಕಾಂಗ್ರೆಸ್‌ ಹೋರಾಟಕ್ಕೆ ಬೆಂಬಲಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ: ಸಿದ್ದರಾಮಯ್ಯ

By Kannadaprabha News  |  First Published Apr 2, 2023, 1:30 AM IST

ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಿರುವುದ ವಿರುದ್ಧ ಕಾಂಗ್ರೆಸ್‌ ನಡೆಸಲಿರುವ ಹೋರಾಟಕ್ಕೆ ಬೆಂಬಲಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 


ಕೋಲಾರ (ಏ.02): ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಿರುವುದ ವಿರುದ್ಧ ಕಾಂಗ್ರೆಸ್‌ ನಡೆಸಲಿರುವ ಹೋರಾಟಕ್ಕೆ ಬೆಂಬಲಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಏ.9ರಂದು ಕಾಂಗ್ರೆಸ್‌ ಹಮ್ಮಿಕೊಂಡಿರು ಸತ್ಯಮೇವ ಜಯತೇ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಸಂವಿಧಾನ ರಕ್ಷಣೆಗೆ ಹಾಗೂ ಸಾಮರಸ್ಯ ಉಳಿವಿಗಾಗಿ ನಮ್ಮ ಹೋರಾಟವೇ ಹೊರತು ಇದು ಕಾಂಗ್ರೆಸ್‌ ಪಕ್ಷದ ರಾಜಕೀಯದ ಸಮಾವೇಶವಲ್ಲ ಎಂದರು.

ಚೋರರನ್ನು ದೇಶಭಕ್ತರೆನ್ನಬೇಕೆ: ದೇಶದ ಸಂಪತ್ತನ್ನು ಲೂಟಿ ಮಾಡಿ ಕೊಂಡು ಪರಾರಿಯಾದ ಚೋರರನ್ನು ಚೋರ್‌ ಎನ್ನದೆ ದೇಶ ಭಕ್ತರು ಎನ್ನಬೇಕೆ ಎಂದ ಅವರು ರಾಹುಲ್‌ ಗಾಂಧಿ ಅವರು, ನೀರವ್‌ ಮೋದಿ. ಲಲಿತಮೋದಿ, ನಿರ್ಮಲ್‌ ಮೋದಿ ಇವರು ಲೂಟಿ ಮಾಡಿರುವ 26 ಲಕ್ಷ ಕೋಟಿ ಹಣದ ಬಗ್ಗೆ ಕ್ರಮ ಕೈಗೊಳ್ಳದೆ ಇರುವ ಕುರಿತು ಸದನದಲ್ಲಿ ಪ್ರಶ್ನಿಸುತ್ತಾರೆ ಎಂಬ ಭೀತಿಯಿಂದ ರಾಹುಲ್‌ ವಿರುದ್ಧ ಪ್ರಕರಣ ದಾಖಲು ಮಾಡಿ, ಶಿಕ್ಷೆಗೆ ಒಳಗಾಗುವಂತೆ ಮಾಡಿದ್ದಾರೆ. ಲೋಕಸಭೆಯಲ್ಲಿ ಇದನ್ನು ಪ್ರಶ್ನಿಸದಂತೆ ನ್ಯಾಯಾಲಯದ ಅದೇಶ ಅಧಿಕೃತವಾಗಿ ಬರುವ ಮೊದಲೇ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಜಾರಿ ಮಾಡಿ ಪ್ರಜಾ ಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ ಎಂದು ದೂರಿದರು.

Latest Videos

undefined

ಆಮ್‌ ಆದ್ಮಿ ಪಕ್ಷದ ಹಿನ್ನಡೆಗೆ ಬಿಜೆಪಿ ಹುನ್ನಾರ: ಮುಖ್ಯಮಂತ್ರಿ ಚಂದ್ರು

ರಾಹುಲ್‌ರನ್ನು ರಾಜಕೀಯವಾಗಿ ಮುಗಿಸಲು ಯತ್ನ: ವಿಜಯಮಲ್ಯ, ಅದಾನಿ ಇವರಿಗೂ ಮೋದಿಗೂ ಏನು ಸಂಬಂಧ ಏಕೆ ಇವರ ವಿರುದ್ದ ಕ್ರಮ ಕೈಗೊಂಡಿಲ್ಲ. ಒಲೇಕರ್‌ ಅವರನ್ನು ಏಕೆ ಬಂಧಿಸಿಲ್ಲ. ಶೇ.40 ಕಮಿಷನ್‌ ಸರ್ಕಾರ ಎಂದು ರಾಜ್ಯದಲ್ಲಿ ಪ್ರಚಲಿತವಾಗಿರುವ ಬಿಜೆಪಿ ಸರ್ಕಾರವು ಗಿನ್ನೀಸ್‌ ದಾಖಲೆ ಮಾಡಿದೆ. ರಾಜ್ಯ ಸರ್ಕಾರದ ಭ್ರಷ್ಟಆಡಳಿತಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಇವುಗಳ ವಿರುದ್ಧ ಧ್ವನಿ ಎತ್ತದಂತೆ ರಾಜೀವ್‌ ಗಾಂಧಿಯನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ರಾಹುಲ್‌ ಗಾಂಧಿ ಮಾಡಿದ ಭಾಷಣದ ವಿರುದ್ಧ ಗುಜರಾತ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಕೋಲಾರದಿಂದಲೇ ಕಾಂಗ್ರೆಸ್‌ ಹೋರಾಟವನ್ನು ರಾಹುಲ್‌ಗಾಂಧಿ ಪ್ರಾರಂಭಿಸಲಿದ್ದಾರೆ ಎಂದರು.

ಪೂರ್ವಭಾವಿ ಸಭೆಗೆ ಡಿಕೆಶಿ ಗೈರು: ಸತ್ಯಮೇವ ಜಯತೇ ಸಮಾವೇಶ ಕುರಿತು ಶನಿವಾರ ನಡೆದ ಪೂರ್ವಭಾವಿ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಗೈರು ಹಾಜರಾಗಿದ್ದರು. ಉಳಿದಂತೆ ಸಭೆಯಲ್ಲಿ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಣಜೀತ್‌ ಸುರ್ಜಿತ್‌ವಾಲ, ಸಂಘಟನಾ ಕಾರ್ಯದರ್ಶಿ ಅಭಿಷೇಕ್‌ ದತ್‌್ತ, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಶಾಸಕರಾದ ಕೆ.ಶ್ರೀನಿವಾಸಗೌಡ, ರಮೇಶ್‌ ಕುಮಾರ್‌, ಎಸ್‌.ಎನ್‌.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್‌, ಶಿಡ್ಲಘಟ್ಟಮುನಿಯಪ್ಪ, ಶಿವಶಂಕರ್‌ರೆಡ್ಡಿ, ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್‌.ಅನಿಲ್‌ ಕುಮಾರ್‌, ನಸೀರ್‌ ಅಹ್ಮದ್‌, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್‌, ಡಾ.ಎಂ.ಸಿ.ಸುಧಾಕರ್‌, ಮಾಜಿ ಸಚಿವ ಕೆ.ಎ.ನಿಸಾರ್‌ ಅಹ್ಮದ್‌, ಜಿಲ್ಲಾ ಕಾಂಗ್ರೇಸ್‌ ಅಧ್ಯಕ್ಷ ಲಕ್ಷ್ಮೇನಾರಾಯಣ ಇದ್ದರು.

ಕೋಲಾರದಿಂದ ಸ್ಪರ್ಧಿಸಲು ಸಿದ್ಧ: ನಾನು ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಆದರೆ ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಸಿದ್ದರಾಮಯ್ಯ ಕಾರ್ಯಕರ್ತರು ಕೋಲಾರದಿಂದಲೇ ಸ್ಪರ್ಧಿಸಲು ಒತ್ತಾಯಿಸಿದಾಗ ಸ್ಪಷ್ಟಪಡಿಸಿದರು. ಆಗ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಕುರಿತು ಏ. 4ರಂದು ದೆಹಲಿಯಲ್ಲಿ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಿದ್ದು ಏ.9 ರಂದು ರಾಹುಲ್‌ ಗಾಂಧಿ ಕೋಲಾರಕ್ಕೆ ಭೇಟಿ ನೀಡಿದಾಗ ಘೋಷಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಡಿಶುಂ... ಡಿಶುಂ...: ಪರೋಕ್ಷವಾಗಿ ಹೆಚ್.ಡಿ.ತಮ್ಮಯ್ಯ ವಿರುದ್ಧ ಕಾಂಗ್ರೆಸ್ಸಿಗರು ಕಿಡಿ

ಸುರ್ಜೇವಾಲ ಭಾಷಣಕ್ಕೆ ಅಡ್ಡಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜೀತ್‌ ಸುರ್ಜೆವಾಲ ಭಾಷಣ ಮಾಡಲು ಆರಂಭಿಸಿದಾಗ ಬಿಡದ ಕಾರ್ಯಕರ್ತರು, ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಹೆಸರು ಘೋಷಣೆ ಮಾಡುವಂತೆ ಪಟ್ಟು ಹಿಡಿದ ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಏಯ್‌ ಎಲ್ಲರೂ ಕುಳಿತುಕೊಳ್ಳಿ ಎಂದು ರೇಗಿದರಲ್ಲದೆ, ಸುರ್ಜೆವಾಲರನ್ನು ಮಾತನಾಡೋದಕ್ಕೆ ಬಿಡಿ, ಅವರನ್ನು ಮಾತನಾಡೋದಕ್ಕೆ ಬಿಡದೆ ಯಾಕೆ ಕೂಗುತ್ತ ಇದೀರಿ ಎಂದು ಮೈಕ್‌ ಹಿಡಿದು ರೇಗಿದ ಬಳಿಕ ಕಾರ್ಯಕರ್ತರು ಸುಮ್ಮನಾದರು.

click me!