ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಪಕ್ಕ ಸವೀರ್‍ಸ್ ರಸ್ತೆ ಆಗಿಲ್ಲ, ಬೈಪಾಸ್ ಇಲ್ಲ, ಸೇತುವೆಯನ್ನೇ ನಿರ್ಮಿಸಿಲ್ಲ. ಹೀಗಿರುವಾಗ ಬಿಜೆಪಿ ಸರ್ಕಾರವು ತರಾತುರಿಯಲ್ಲಿ ಹೆದ್ದಾರಿಯನ್ನು ಉದ್ಘಾಟಿಸಿದಂತೆ, ಟೋಲ್ ಶುಲ್ಕ ಸಂಗ್ರಹಿಸುತ್ತಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ (ಮಾ.16): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಪಕ್ಕ ಸವೀರ್‍ಸ್ ರಸ್ತೆ ಆಗಿಲ್ಲ, ಬೈಪಾಸ್ ಇಲ್ಲ, ಸೇತುವೆಯನ್ನೇ ನಿರ್ಮಿಸಿಲ್ಲ. ಹೀಗಿರುವಾಗ ಬಿಜೆಪಿ ಸರ್ಕಾರವು ತರಾತುರಿಯಲ್ಲಿ ಹೆದ್ದಾರಿಯನ್ನು ಉದ್ಘಾಟಿಸಿದಂತೆ, ಟೋಲ್ ಶುಲ್ಕ ಸಂಗ್ರಹಿಸುತ್ತಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದ ಶಾಬನೂರು ಗ್ರಾಮದಲ್ಲಿ ಮಂಗಳವಾರ ಮನೆ ಮನೆಗಳಿಗೆ ಕಾಂಗ್ರೆಸ್ಸಿನ ಕಾರ್ಡ್ ವಿತರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸವೀರ್‍ಸ್ ರಸ್ತೆ ಇದ್ದರಷ್ಟೇ ಜನರಿಗೆ ಅನುಕೂಲ ಅಲ್ಲವೇ? ಸವೀರ್‍ಸ್ ರಸ್ತೆಯನ್ನೇ ಮಾಡದೇ, ಎಕ್ಸಪ್ರೆಸ್ ಹೈವೇ ಕಾಮಗಾರಿಯನ್ನೂ ಪೂರ್ಣಗೊಳಿಸದೇ ರಸ್ತೆ ಸುಂಕ ವಸೂಲಿ ಮಾಡುವುದು ಸರಿಯಲ್ಲ.
ಇನ್ನೂ ಆ ಹೆದ್ದಾರಿಯಲ್ಲಿ ಸೇತುವೆಗಳು ಆಗಬೇಕು. ಸವೀರ್‍ಸ್ ರಸ್ತೆ ನಿರ್ಮಾಣ ಆಗಬೇಕು. ಅದ್ಯಾವುದನ್ನೂ ಮಾಡದೇ, ವಿಧಾನಸಭೆ ಚುನಾವಣೆಯೆಂದು ಪ್ರಧಾನ ಮಂತ್ರಿಗೆ ಕರೆಸಿ, ತರಾತುರಿಯಲ್ಲಿ ಉದ್ಘಾಟನೆ ಮಾಡಿಸಿದ್ದಾರೆ ಎಂದು ಟೀಕಿಸಿದರು. ನಮ್ಮ ಸರ್ಕಾರವಿದ್ದಾಗ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಿದೆವು. 10 ಪಥದ ರಾಷ್ಟ್ರೀಯ ಹೆದ್ದಾರಿ ಮಾಡಲು ಅನುಮೋದನೆ ನೀಡಿದವರು ನಾವು. ಈಗ ಬಿಜೆಪಿ ಸರ್ಕಾರದವರು ಹೆದ್ದಾರಿ ಕ್ರೆಡಿಟ್ ತಾವು ಪಡೆಯಲು ಹೊರಟಿದ್ದಾರೆ. ನಾವು ಮಾಡಿದ ಕೆಲಸಕ್ಕೆ ತಾವು ಶ್ರೇಯ ತೆಗೆದುಕೊಳ್ಳುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರಷ್ಟೇ ಎಂದು ಹೇಳಿದರು.
undefined
ಮಾ.16ರಂದು ಮೂಡಿಗೆರೆಯಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ: ಕಾರ್ಯಕ್ರಮದ ಮೇಲೆ ಬಂಡಾಯದ ಕಾರ್ಮೋಡ
ಬಿಎಸ್‌ವೈ ಮನೆಯಲ್ಲಿಯೇ ನಡೆದಿದೆ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣ: ಪೊಲೀಸ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯಲ್ಲೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. . 2500 ಕೋಟಿ ಕೊಟ್ಟರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬಹುದು ಎಂದು ಸ್ವಪಕ್ಷದ ಶಾಸಕರೇ ಹೇಳಿದ್ದಾರೆ. ಹೀಗಾಗಿ ಇವರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮತ್ತೇನಿದೆ ಎಂದು ಇದೇ ವೇಳೆ ಪ್ರಶ್ನಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಪರೇಶನ್ ಕಮಲಕ್ಕೆ ಎಲ್ಲಿಂದ ಹಣ ಬಂತು? ಲೂಟಿ ಹೊಡೆದ ಲಂಚದ ಹಣದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಸರ್ಕಾರ ನಾಚಿಕೆ, ಮಾನ, ಮಾರಾರಯದೆ ಈ ಮೂರು ಬಿಟ್ಟಿದೆ. ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಆಧಿಕಾರಕ್ಕೆ ಬಂದಿದ್ದು ಇದೊಂದು ಅನೈತಿಕ ಸರ್ಕಾರವಾಗಿದೆ ಎಂದು ಕಿಡಿಕಾರಿದರು. ಕ್ಷೇತ್ರದ ಟಿಕೆಟ್ ಬಯಸಿ 8 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲ ಘಟಕದ ಅಧ್ಯಕ್ಷರು ಹಾಗೂ ಕ್ಷೇತ್ರದ ಜನರ ಅಭಿಪ್ರಾಯ ಸರ್ವೇ ವರದಿ ನೋಡಿಯೇ ಹೈಕಮಾಂಡ್ ಟಿಕೆಟ್ ನೀಡಲಿದೆ. ಟಿಕೆಟ್ ಯಾರಿಗೇ ಸಿಕ್ಕರೂ ಸಹ ಪಕ್ಷವನ್ನು ಗೆಲ್ಲಿಸುವಂತಹ ಕೆಲಸದಲ್ಲಿ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ರಾಜ್ಯದಲ್ಲಿ ಸುವರ್ಣಯುಗ ಕಂಡಿದ್ದೇವೆ, ಎಲ್ಲ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇವೆ ಎಂದು ತಿಳಿಸಿದರು.
ಒಕ್ಕಲಿಗ ಯುವಕನ ಮದುವೆಯಾದ ಐದೇ ದಿನಕ್ಕೆ ಮಸಣ ಸೇರಿದ ದಲಿತ ಯುವತಿ: ಕೊಡಗಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ?
ಮಾಜಿ ಸಚಿವ ಜಮೀರ್ ಅಹ್ಮದ್‌ಖಾನ್ ಮಾತನಾಡಿ, ನಾನು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬ್ಯಾಡಗಿ ಮತಕ್ಷೇತ್ರಕ್ಕೆ ಬಂದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳನ್ನೇ ಉದ್ಘಾಟಿಸಲು ಕರೆ ತರುತ್ತೀದ್ದರು ಎಂದು ಲೇವಡಿ ಮಾಡಿದರು. ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಕಾಂಗ್ರೆಸ್ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಪ್ರತಿ ಗ್ರಾಮಗಳಿಗೂ ಅನುದಾನ ನೀಡಿದ್ದೇನೆ. ಆದರೆ ಪ್ರಸ್ತುತ ಅಧಿಕಾರದಲ್ಲಿ ಇರುವಂತಹ ಶಾಸಕರು ನಾನೇ ಮಾಡಿದ್ದೇನೆ ಎಂದು ಹೇಳುತ್ತಿರುವುದು ಹಾಸ್ಯಾ ಸ್ಪದ ಸಂಗತಿ ಎಂದರು.