ಜಾತಿ ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ: ಸಚಿವ ಕೃಷ್ಣ ಬೈರೇಗೌಡ

Published : Apr 19, 2025, 09:38 PM ISTUpdated : Apr 19, 2025, 09:40 PM IST
ಜಾತಿ ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ: ಸಚಿವ ಕೃಷ್ಣ ಬೈರೇಗೌಡ

ಸಾರಾಂಶ

ರಾಜ್ಯದಲ್ಲಿ ಅವರವರ ಜಾತಿಯನ್ನ ಪಟ್ಟಿ ಮಾಡಿ ಕೂಡಿಸಿದರೆ 15 ರಿಂದ 20 ಕೋಟಿ ಜನಸಂಖ್ಯೆ ಬರುತ್ತೆ, ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ, ಕೆಲವರು ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮೀಕ್ಷೆ ವಿರೋಧಿಗಳಿಗೆ ಟಾಂಗ್ ನೀಡಿದರು.   

ಕೋಲಾರ (ಏ.19): ರಾಜ್ಯದಲ್ಲಿ ಅವರವರ ಜಾತಿಯನ್ನ ಪಟ್ಟಿ ಮಾಡಿ ಕೂಡಿಸಿದರೆ 15 ರಿಂದ 20 ಕೋಟಿ ಜನಸಂಖ್ಯೆ ಬರುತ್ತೆ, ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ, ಕೆಲವರು ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮೀಕ್ಷೆ ವಿರೋಧಿಗಳಿಗೆ ಟಾಂಗ್ ನೀಡಿದರು. ತಾಲೂಕಿನ ಚೌಡದೇನಹಳ್ಳಿಯ ಊರಹಬ್ಬದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2011 ರಲ್ಲಿ ಸಮೀಕ್ಷೆ ನಡೆಸಿದ ವೇಳೆ 6 ಕೋಟಿ 35 ಲಕ್ಷ ಜನಸಂಖ್ಯೆ ಇತ್ತು. ಗಣತಿ ಪ್ರಕಾರ 2011 ರಲ್ಲಿ 5 ಕೋಟಿ 95 ಲಕ್ಷ ಜನರ ಆಧಾರದ ಮೇಲೆ ಗಣತಿ ತಯಾರಾಗಿದೆ ಎಂದರು.

ಎಲ್ಲರ ಅಭಿಪ್ರಾಯಕ್ಕೂ ಮಾನ್ಯತೆ: ಸಮೀಕ್ಷೆ ಕುರಿತು ಈಗಾಗಲೆ ನಾವು ಹೇಳಿರುವಂತೆ ಚರ್ಚೆ ಆಗಿದೆ. ಕೆಲವರು ಅವರ ಅಭಿಪ್ರಾಯ ಹೇಳಿದ್ದಾರೆ, ಇನ್ನೂ ಕೆಲವರು ಸಮಯ ಕೇಳಿದ್ದಾರೆ, ವೈಯಕ್ತಿಕ ವಾಗಿ ಕೆಲವರು ಹೇಳಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಮುಂದೆ ಹೋಗಲಾಗುವುದು. ಯಾರ ಅಭಿಪ್ರಾಯದ ಬಗ್ಗೆಯೂ ತಕರಾರಿಲ್ಲ, ಪ್ರಜಾ ಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಕೇಳಬೇಕಿದೆ ಹಾಗಾಗಿ ಮುಕ್ತವಾಗಿ ಅವಕಾಶ ನೀಡಿದ್ದು, ಅಭಿಪ್ರಾಯ ವಿಮರ್ಶೆ ಮಾಡಿ ತಾರ್ಕಿಕ ತೀರ್ಮಾನವಾಗಲಿದೆ ಎಂದರು.

ಬಯಲುಸೀಮೆ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ದ: ಸಚಿವ ಬೋಸರಾಜು

ನಾವೂ ಸಹ ಚರ್ಚೆಯಲ್ಲಿ ಭಾಗವಸಿದ್ದೇವೆ, ಇದು ವೈಜ್ಞಾನಿಕವಾಗಿ ಮಾಡಲಾದ ಸಮೀಕ್ಷೆ, ಆದರೆ ಅವೈಜ್ಞಾನಿಕ ಎಂಬುದನ್ನ ನಾನು ಒಪ್ಪಲ್ಲ. ವಿಚಾರ ಆಧಾರಿತವಾಗಿ ಚರ್ಚೆಯಾಗಲಿ. ಸಮೀಕ್ಷೆಯಲ್ಲಿ 1 ಕೋಟಿ 30 ಲಕ್ಷ ಕುಟುಂಬಗಳು, 5 ಕೋಟಿ 98 ಲಕ್ಷ ಜನ ಭಾಗವಹಿಸಿದ್ದಾರೆ, 1 ಲಕ್ಷ 33 ಸಾವಿರ ಸರ್ಕಾರಿ ನೌಕರರು ಜನ ಗಣತಿಯಲ್ಲಿ ಭಾಗವಹಿಸಿದ್ದಾರೆ. ಅವರು 30 ಸಾವಿರ ಹಳ್ಳಿಗಳಲ್ಲಿ ಗಣತಿ ಮಾಡಿದ್ದಾರೆ. ನ್ಯೂನತೆಗಳಿರಬಹುದು ಆದರೆ ಅವೈಜ್ಞಾನಿಕ ಎನ್ನುವುದು ಸರಿಯಲ್ಲ ಎಂದರು.

ವೈಯಕ್ತಿಕ ಜಾತಿ ಪಟ್ಟಿಯಲ್ಲಿ 20 ಕೋಟಿ ಜನ: ರಾಜ್ಯದಲ್ಲಿ ಅವರವರ ಜಾತಿಯನ್ನ ಪಟ್ಟಿ ಮಾಡಿ ಕೂಡಿಸಿದರೆ ಆ ಪಟ್ಟಿ 15 ರಿಂದ 20 ಕೋಟಿ ಜನಸಂಖ್ಯೆ ಆಗುತ್ತದೆ. ಈ ಹಿಂದೆ ಸರ್ವೇ ಮಾಡಿರುವ ಯಾವುದೆ ದಾಖಲೆ ನಮ್ಮಲ್ಲಿ ಇಲ್ಲ, ೫೪ ಪ್ರಶ್ನೆಗಳನ್ನ ಮಾಡಲಾಗಿದೆ. ಈಗಾಗಲೆ ನಿಮ್ಮದೆ ಸಚಿವ, ಶಾಸಕರು ಸಮೀಕ್ಷೆಯನ್ನ ವಿರೋಧಿಸುತ್ತಿದ್ದಾರಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು ಸ್ವತಂತ್ರವಾಗಿ ಹೋರಾಟ ಮಾಡಲಿ, ಚರ್ಚೆ ಮಾಡಲಿ ಎಂದರು. ಸಮೀಕ್ಷೆಯನ್ನ ನಾನು ಓದಿದ್ದೇನೆ ರಾಜ್ಯದ ಶೇ.98 ರಷ್ಟು ಜನರಿಗೆ ಈ ವರದಿ ಅನುಕೂಲವಾಗಲಿದೆ, ಶೇ.70 ಪರ್ಸೆಂಟ್ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಅನುಕೂಲವಾಗಲಿದೆ, ಸತ್ಯದ ಆಧಾರದ ಮೇಲೆ ಚರ್ಚೆಗೆ ಸಿದ್ದ ಸಮೀಕ್ಷೆ ವರದಿ ಅನುಷ್ಟಾನವಾದ್ರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ, ಆದರೆ ಕೆಲವರು ನಮ್ಮದೆ ಜಾಸ್ತಿ ಎನ್ನಲು ಹೊರಟಿದ್ದಾರೆ ಎಂದರು. ವಕ್ಕಲಿಗರಿಗೆ 3 ಎ ನಲ್ಲಿ ಮೀಸಲಾತಿ ಇರುವುದು ಶೇ.4 ಮಾತ್ರ. ಆದರೆ ವರದಿಯಲ್ಲಿ ಶೇ.7 ಕ್ಕೆ ಶಿಫಾರಸು ಮಾಡಲಾಗಿದೆ. ಲಿಂಗಾಯತರಿಗೆ 3 ಬಿ ಯಲ್ಲಿ ಶೇ.5 ರಷ್ಟಿದೆ ಆದರೆ ೮ಕ್ಕೆ ಹೆಚ್ಚು ಮಾಡಲು ಶಿಫಾರಸು ಮಾಡಲಾಗಿದೆ, ವರದಿ ಅನುಷ್ಟಾನವಾದರೆ ಎಲ್ಲರಿಗೂ ಮೀಸಲು ಹೆಚ್ಚಾಗಲಿದೆ ಎಂದು ಹೇಳಿದರು.

ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ!

ಇದು ಜಾತಿ ಸಮೀಕ್ಷೆ ಅಲ್ಲ: ಇದೊಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೆ ಜಯಪ್ರಕಾಶ್ ಹೆಗ್ಡೆ ಅವರು ಕೊಟ್ಟಿರುವ ಮುಖ ಪುಟದಲ್ಲಿ ಸಮೀಕ್ಷೆ ಅಂತ ಇದೆ, ಆದರೆ ಕೆಲವರು ಇದನ್ನ ಜಾತಿ ಗಣತಿಯಂತೆ ಬಿಂಬಿಸುತ್ತಿದ್ದಾರೆ. ಯಾರು ಎಷ್ಟು ಹಿಂದುಳಿದಿದ್ದಾರೆ ಅನ್ನೋ ಸಮೀಕ್ಷೆಯನ್ನ ಮಾಡಲಾಗಿದೆ, ಇದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಾಡಲಾಗಿರುವ ಸಮೀಕ್ಷೆ ಅದನ್ನೆ ಕೆಲವರು ಸುಳ್ಳು ಎನ್ನುತ್ತಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ